ವರದಿಗಾರರು :
ಗೌತಮ್ ರಾಜ್ ಕೆ ಎಂ ||
ಸ್ಥಳ :
ತುಮಕೂರು
ವರದಿ ದಿನಾಂಕ :
25-11-2025
ತುಮಕೂರು ತಾಲ್ಲೂಕು ಮೆಳೆಹಳ್ಳಿಯಲ್ಲಿ ದುರ್ವಾಸನೆ ತ್ಯಾಜ್ಯ ಸಮಸ್ಯೆಗೆ ಪೊಲೀಸರ ಸ್ಪಂದನೆ
ತುಮಕೂರು: ಕೋರ ಹೋಬಳಿ ಮೆಳೆಹಳ್ಳಿ ಗ್ರಾಮದಲ್ಲಿ ರಸ್ತೆಯ ಬದಿಯಲ್ಲಿ ಅನಧಿಕೃತವಾಗಿ ಹಾಕಲಾಗಿದ್ದ ತ್ಯಾಜ್ಯ ಹಣ್ಣು–ಸಿಪ್ಪೆಗಳಿಂದ ಉಂಟಾಗಿದ್ದ ದುರ್ವಾಸನೆಯ ಕುರಿತು ಸ್ಥಳೀಯರು ಪರಸ್ಪರ ಕರೆ ಮಾಡಿಕೊಂಡು ತೊಂದರೆ ಬಗ್ಗೆ ದೂರು ನೀಡಿದ್ದರು. ಸ್ಥಳೀಯರಿಂದ ಬಂದ ಮನವಿಗೆ ತಕ್ಷಣ ಪ್ರತಿಕ್ರಿಯಿಸಿದ ಪೊಲೀಸರು ಕೇವಲ 30 ನಿಮಿಷಗಳೊಳಗೆ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿ ಪರಿಶೀಲಿಸಿ, ತ್ಯಾಜ್ಯವನ್ನು ಮಣ್ಣಿನಿಂದ ಮುಚ್ಚಿಸುವ ಮೂಲಕ ದುರ್ವಾಸನೆ ಹರಡುವುದನ್ನು ತಡೆಗಟ್ಟಿದರು. ಪೊಲೀಸರ ಈ ಸಮಯೋಚಿತ ಕ್ರಮಕ್ಕೆ ಗ್ರಾಮಸ್ಥರು ಸಂತೋಷ ವ್ಯಕ್ತಪಡಿಸಿದ್ದು, ಸಾರ್ವಜನಿಕ ಸಮಸ್ಯೆಗಳ ಪರಿಹಾರದಲ್ಲಿ ಸ್ಪಂದನೆ ಶ್ಲಾಘನೀಯ ಎಂದು ಅಭಿಪ್ರಾಯ ಪಟ್ಟಿದ್ದಾರೆ.
