ಬೆಂಗಳೂರಿನಲ್ಲಿ ಭಾರತದ ಮೊದಲ ಎಲೆಕ್ಟ್ರಿಕ್ ಟ್ರ್ಯಾಕ್ಟರ್ ಮೇಳ
ಭಾರತ ಕೃಷಿ ಪ್ರಧಾನ ರಾಷ್ಟ್ರ. ಈಗ ಕೃಷಿಕರ ಪಾಲಿಗೆ ಮತ್ತೊಂದು ಆಶಾದಾಯಕ ಪರ್ವ ಎಲೆಕ್ಟ್ರಿಕ್ ಟ್ರ್ಯಾಕ್ಟರನ್ನು ಡಿಪೆನ್ಸ, ಕೌನ್ಸಿಲ್ ವಿಲ್ಗ್ರೋ ,ಮೂನ್ ರೈಡರ್ ಸಂಸ್ಥೆಗಳ ಸಹಭಾಗಿತ್ವದಲ್ಲಿ ಹಾಗೂ ರೈತ ಉತ್ಪಾದಕ ಸಂಸ್ಥೆಗಳೊಂದಿಗೆ ಬೆಂಗಳೂರಿನ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ನಡೆದ ಭಾರತದ ಮೊದಲ ಎಲೆಕ್ಟ್ರಿಕ್ ಟ್ರ್ಯಾಕ್ಟರ್ ಮೇಳವನ್ನು ಆಯೋಜಿಸಲಾಯಿತು.
ಇದುವರೆಗೂ ಕೃಷಿಗಾಗಿ ಬಳಸುವ ಡಿಸೇಲ್ ಟ್ರ್ಯಾಕ್ಟರಿಂದ ವಾಯುಮಾಲಿನ್ಯದ ಜೊತೆಗೆ ಪ್ರತಿದಿನ ಡಿಸೇಲ್ಗಾಗಿ 1500 ರೂ. ವೆಚ್ಚಗಾಗುತ್ತಿತ್ತು. ಈಗ ಪರಿಚಯಿಸಲಾದ ಎಲೆಕ್ಟ್ರಿಕ್ ಟ್ರ್ಯಾಕ್ಟರ್ನಿಂದಾಗಿ ವಿದ್ಯುತ್ ವೆಚ್ಚ ಪ್ರತಿದಿನ ಕೇವಲ 500 ರೂಪಾಯಿಯೊಳಗೆ ಸತತವಾಗಿ ಐದು ಗಂಟೆಗಳ ಕಾಲ ಚಲಾಯಿಸಬಹುದಾಗಿದೆ. ಇಂದು ನಡೆದ ಎಲೆಕ್ಟ್ರಿಕ್ ಟ್ರ್ಯಾಕ್ಟರ್ ಮೇಳದಲ್ಲಿ ಕರ್ನಾಟಕ ರೈತ ಉತ್ಪಾದಕರ ಸಂಸ್ಥೆಗಳೊಂದಿಗೆ ಸಂವಾದವನ್ನು ಏರ್ಪಡಿಸಲಾಗಿತ್ತು. ಇದೇ ಸಂದರ್ಭದಲ್ಲಿ ಮೂನ್ ರೈಡರ್ ಸಂಸ್ಥೆಯ 27 Hp 50 Hp 75 Hp ಸಾಮರ್ಥ್ಯದ ಎಲೆಕ್ಡ್ರಿಕ್ ಟ್ರ್ಯಾಕ್ಟರ್ಗಳನ್ನು ಅನಾವರಣಗೊಳಿಸಲಾಯಿತು ಕರ್ನಾಟಕದ ಎಲ್ಲಾ ಜಿಲ್ಲೆಗಳಿಂದ ಸುಮಾರು 3700 ರೈತರು ಆಗಮಿಸಿದ್ದರು. ಮೇಳದಲ್ಲಿ ಬಾಗಲಕೋಟೆಯ ಕೃಷಿ ವಿವಿ ಚಾನ್ಸಲರ್ , ಕುಲಪತಿಗಳು ಹಾಗೂ ಉಪನ್ಯಾಸಕರು ಭಾಗವಹಿಸಿದ್ದರು
ಇತರೆ ಸುದ್ದಿಗಳು