ವರದಿಗಾರರು :
ಸಂತೋಷ್ ಶೆಟ್ಟಿ ||
ಸ್ಥಳ :
Bengaluru
ವರದಿ ದಿನಾಂಕ :
08-12-2025
ಕೆ.ಎಸ್ ಸಿ.ಎ ಅಧ್ಯಕ್ಷರಾಗಿ ವೆಂಕಟೇಶ ಪ್ರಸಾಧ್ ಆಯ್ಕೆ
ಭಾನುವಾರ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಕೆ.ಎಸ್ ಸಿ ಎ ಚುನಾವಣೆಯಲ್ಲಿ ಮಾಜಿ ಕ್ರಿಕೆಟಿಗ ವೆಂಕಟೇಶ ಪ್ರಸಾಧ್ ಜಯಭೇರಿ ಬಾರಿಸಿ ಅಧ್ಯಕ್ಷ ಸ್ಥಾನ ಅಲಂಕರಿಸಿದರು.
ಪತ್ರಿಕೋದ್ಯಮಿ ಶಾಂತಕುಮಾರ ವಿರುದ್ಧ 191 ಮತಗಳಗ ಅಂತರಿಂದ ಜಯ ಗಳಿದ ವೆಂಕಟೇಶ ಪ್ರಸಾಧ ಒಟ್ಟು 749 ಮತಗಳನ್ನ ಪಡೆದರು. ಶಾಂತಕುಮಾರ ಕೇವಲ 558 ಮತಗಳನ್ನ ಪಡೆದು ಪರಾಜಯಗೊಂಡರು.
ತದನಂತರ ಮಾತನಾಡಿದ ವೆಂಕಟೇಶ ಪ್ರಸಾಧ ಚಿನ್ನಸ್ವಾಮಿಯಪ್ಲಿ ಹೊಸ ಕ್ರಿಕೆಟ್ ಯುಗ ಆರಂಭವಾಗಿದೆ. ಮತ್ತೆ ಇದೇ ಕ್ರೀಡಾಂಗಣದಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಮರಳಲಿದೆ ಎಂದರು.
ಹೊಸ ಯುಗ ಆರಂಭ:- ಇಂದಿನಿಂದಲೇ ಚಿನ್ನಸ್ವಾಮಿಯಲ್ಲಿ ಹೊಸ ಕ್ರಿಕೆಟ ಯುಗ ಆರಂಭವಾಗಲಿದೆ ಎಂದು ಹರ್ಷ ವ್ಯಕ್ತಪಡಿಸಿದ ಅವರು ಇದು ನನ್ನ ಗೆಲುವು ಮಾತ್ರವಲ್ಲ ಕ್ರಿಕೆಟ್ ಸಿಕ್ಕ ಗೆಲವು. ಕ್ರಿಕೆಟ್ ಕ್ಷೇತ್ರದಲ್ಲಿ ಅಮೂಲಾಗ್ರ ಬದಲಾವಣೆ ಬಯಸಿದ ಸದಸ್ಯರ ಬೆಂಬಲವೇ ಈ ಗೆಲುವಿಗೆ ಕಾಣಕರ್ತರು ಎಂದರು. ಉಪಾಧ್ಯಕ್ಚರಾಗಿ ಮಾಜಿ ಆಟಗಾರ ಸುಜಿತ್ ಸೋಮಸುಂದರ್ ಆಯ್ಕೆಯಾದರು.
