ವರದಿಗಾರರು :
ಸಂತೋಷ್ ಶೆಟ್ಟಿ ||
ಸ್ಥಳ :
Bengaluru
ವರದಿ ದಿನಾಂಕ :
08-12-2025
ಇಂದು ಕುಂದಾನಗರಿ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶ ಆರಂಭ..
ತ್ತರ ಕರ್ನಾಟಕ ಭಾಗದ ಅಹವಾಲು ಮತ್ತು ಅಲ್ಲಿನ ಅಭಿವೃದ್ಧಿಯ ಕುರಿತು ಚರ್ಚಿಸಲು ಬೆಳಗಾವಿಯಲ್ಲಿ ಸುವರ್ಣಸೌಧವನ್ನ ಅನುಷ್ಠಾನಗೊಳಿಸಲಾಗಿತ್ತು. .
ಇದುವರೆಗೂ ನಡೆದ ಅಧಿವೇಶನಗಳಲ್ಲಿ ಉತ್ತರಕರ್ನಾಟಕದ ಕುರಿತು ಚರ್ಚೆ ನಡೆದದ್ದು ವಿರಳ
ಈ ಬಾರಿಯೂ ಅದೇ ಪ್ರವೃತ್ತಿ ಮುಂದುವರೆಯದಿರಲಿ, ಉತ್ತರ ಕ್ರನಾಟಕ ಭಾಗದ ರೈತರ ಅಹವಾಲುಗಳ ಕುರಿತು ಚರ್ಚಿಸಲಿ ಎಂದು ಒತ್ತಾಯಿಸಿ ರೈತರು ಸುವರ್ಣಸೌಧಕ್ಕೆ ಮುತ್ತಿಗೆ ಹಾಕಲು ನಿರ್ಧರಿಸಿದ್ದಾರೆ. ಹಾಗಾಗಿ ಈ ಬಾರಿ ಬೆಳಗಾವಿಯ ಚಳಿಗಾಲದ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ವಿಷಯ ಪ್ರಸ್ತಾಪಿಸಲು ಸರ್ಕಾರ ಸಜ್ಕಾಗಿದೆ. ಹತ್ತು ದಿನಗಳ ಕಾಲ ನಡೆಯುವ ಅಧಿವೇಶನದಲ್ಲಿ ಏನೆಲ್ಲ ಚರ್ಚೆಗಳು ನಡೆಯಲಿವೆ ಎಂಬ ಕುತೂಹಲ ಉತ್ತರ ಕರ್ನಾಟಕ ಭಾಗದ ಜನತೆ ಕುತೂಹಲದಿಂದ ಎದುರು ನೋಡುತ್ತಿದ್ದಾರೆ.
