ವರದಿಗಾರರು :
ಬಸವರಾಜ ಪೂಜಾರಿ ||
ಸ್ಥಳ :
ಬೀದರ
ವರದಿ ದಿನಾಂಕ :
08-12-2025
ಅಂಬೇಡ್ಕರ್ ಮಾರ್ಗ ಅನುಸರಿಸಿದಾಗ ಬದುಕು ಸಾರ್ಥಕ: ರಾಹುಲ್ ಖಂದಾರೆ
ಔರಾದ್ ಸರ್ಕಾರಿ ಆಸ್ಪತ್ರೆಯಲ್ಲಿ ಮಹಾಪರಿನಿರ್ವಾಣ ದಿನದ ಅಂಗವಾಗಿ ರೋಗಿಗಳಿಗೆ ಹಾಲು–ಹಣ್ಣು ವಿತರಣೆ ಕಾರ್ಯಕ್ರಮ ನಡೆಯಿತು.
ಕಾರ್ಯಕ್ರಮದಲ್ಲಿ ಮಾತನಾಡಿದ ಬಹುಜನ ಜನ ಸಂಪರ್ಕ ಕಾರ್ಯಾಲಯದ ವ್ಯವಸ್ಥಾಪಕ ರಾಹುಲ್ ಖಂದಾರೆ, ಅಂಬೇಡ್ಕರ್ ಅವರ ಸಂದೇಶಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಅವರ ಮಾರ್ಗದಲ್ಲಿ ನಡೆದರೆ ಬದುಕು ಸಾರ್ಥಕವಾಗಲಿದೆ ಎಂದು ಹೇಳಿದರು.
ದಲಿತ ಸಂಘರ್ಷ ಸಮಿತಿ ಸಂಚಾಲಕ ಸುಭಾಷ್ ಲಾಧಾ ಯುವಕರು ಅಂಬೇಡ್ಕರ್ ಅವರ ಆದರ್ಶಗಳನ್ನು ಅನುಸರಿಸಿ ಗುಣಮಟ್ಟದ ಶಿಕ್ಷಣದ ಮೂಲಕ ದೇಶದ ಅಭಿವೃದ್ಧಿಗೆ ಶ್ರಮಿಸಬೇಕು ಎಂದು ತಿಳಿಸಿದರು.ಸಿದ್ದಾರ್ಥ್ ಭೋಸ್ಥೆ, ಸಂತೋಷ್ ಶಿಂದೆ, ಅನಿಲ್ ಭುಜಂಗ ಸೇರಿ ಹಲವು ಸಂಘಟನೆಗಳ ಮುಖಂಡರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
