ವರದಿಗಾರರು :
ಸಂತೋಷ್ ಶೆಟ್ಟಿ ||
ಸ್ಥಳ :
Bengaluru
ವರದಿ ದಿನಾಂಕ :
08-12-2025
ಇಂಡಿಗೋ(ಳಾಟ) ಕೇಂದ್ರದ ಮಧ್ಯಸ್ಥಿಕೆ
ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಕಳೆದ ಆರು ದಿನಗಳಿಂದ ಉಂಟಾದ ಇಂಡಿಗೋ ವಿಮಾನ ಯಾನ ಅವ್ಯವಸ್ಥೆಗೆ ಸಂಬಂಧಿಸಿದಂತೆ ಕೇಂದ್ರ ವಿಮಾನಯಾನ ಸಚಿಲವಾಲಯ ಕಠಿಣ ಸಂದೇಶ ರವಾನಿಸಿದೆ.
ಟಿಕೆಟ್ ಹಣ ಮರು ಪಾವತಿ ಹಾಗೂ ಸಿಬ್ಬಂಧಿ ಅಲಭ್ಯತೆ ತಾಂತ್ರಿಕ ದೋಷವನ್ನು ಶೀಘ್ರ ಸರಿಪಡಿಸುವಂತೆ ತಾಕೀತು ಮಾಡಿದೆ. ಇಂದಿನಿಂದ ಏರ್ಪೋರ್ಟನಲ್ಲಿ ಪ್ರಯಾಣಿಕರ ದಟ್ಟಣೆಯಲ್ಲಿ ಇಳಿಮುಖಗೊಂಡಿದೆ.
ಕೇಂದ್ರ ವಿಮಾನಯಾನ ಸಚಿವಾಲಯ ನೀಡಿರುವ ಕಠಿಣ ನಿಯಮದನುಸಾರ ಇದೇ ಡಿಸೆಂಬರ್ 10 ರೊಳಗಾಗಿ ಅವ್ಯವಸ್ಥೆಯನ್ನ ಸರಿಪಡಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ
