ವರದಿಗಾರರು :
ಸಂತೋಷ್ ಶೆಟ್ಟಿ ||
ಸ್ಥಳ :
Bengaluru
ವರದಿ ದಿನಾಂಕ :
08-12-2025
ಇಂದಿನ ದಿನಗಳಲ್ಲಿ ಮ್ಯಾರೇಜ್ ಔಡ್ ಡೇಟೆಡ್ ಆಗಿದೆ. ಜಯಾ
ಇಂದಿನ ದಿನಗಳಲ್ಲಿ ಮ್ಯಾರೇಜ್ ಔಡ್ ಡೇಟೆಡ್ ಆಗಿದೆ
ವಿಶಿಪ್ಠ ಮಾತುಗಳಿಂದ ಸದಾ ಚಾಲ್ತಿಯಲ್ಲಿರುವ ಬಾಲಿವುಡ್ ಹಿರಿಯ ನಟಿ ಜಯಾ ಬಚ್ಚನ್ ,ಇದೀಗ ಮ್ಯಾರೇಜ್ ಅನ್ನೋದು ಔಟ್ ಡೆಟೇಡ್ ಅಗೋಯ್ತು ಎಂಬ ಅಚ್ಚರಿಯ ಹೇಳಿಕೆ ನೀಡಿದ್ದಾರೆ.
ಪತ್ರಕರ್ತೆ ಬರ್ಖಾ ದತ್ ನಡೆಸಿದ ಪೋಡ್ ಕಾಸ್ಟ ಕಾರ್ಯಕ್ರಮದಲ್ಲಿ ಮಾತನಾಡಿದ ಜಯಾ ಬಚ್ಚನ್ ,ಮದುವೆ ಅನ್ನುವ ಕಾನ್ಸೆಪ್ಟ್ outdated . ತನ್ನ ಮೊಮ್ಮಗಳು ನವ್ಯಾ ಇದೀಗ 28 ರ ಹರಯಕ್ಕೆ ಕಾಲಿಡ್ತಿದ್ದಾಳೆ ಅವಳು ಮದ್ವೆ ಆಗೋದು ನನಗೆ ಇಷ್ಟ ಇಲ್ಲ ಅಂತ ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದಾಳೆ ಜಯಮ್ಮ.
ಅಜ್ಜಿ ತಾತಂದಿರು ತಮ್ಮ ಮೊಮ್ಮಕ್ಕಳ ಮದುವೆ ನೋಡಲು ಉತ್ಸುಕರಾಗಿದ್ದ ಈ ಕಾಲದಲ್ಲಿ ಇತ್ತ ಜಯಮ್ಮನ ಈ ಮಾತು ಅಕ್ಷರಶಃ ತಲ್ಲಣ ಮೂಡಿಸಿದೆ.!!!!!..
ಜಯಾ ಬಚ್ಚನ್ ಹೇಳಿರುವ ಮಾತಿನಲ್ಲಿ ಸರಿ- ತಪ್ಪುಎಂಬಿತ್ಯಾದಿ ವಿಚಾರಗಳು ಅವರವರ ದೃಪ್ಠಿಕೋನಕ್ಕೆ ಬಿಟ್ಟಿದ್ದು.. ಆದರೆ ಬದಲಾದ ಇಂದಿನ ಕಾಲಘಟ್ಟದಲ್ಲಿ ಅದರಲ್ಲೂ ಹದಿಹರಯದ ಮನಸ್ಸುಗಳಲ್ಲಿ ಜಯಾ ಹೇಳಿಕೆ ಮಾತ್ರ ಪರಿಣಾಮ ಬೀರಬಲ್ಲ ಸಂಗತಿಯಾಗಿದೆ.
ಸಂಸತ್ತಿನಲ್ಲಿ ಕೆಲ ತಿಂಗಳುಗಳ ಹಿಂದೆ ಜಯಾಬಚ್ಚನ್ ಅವರನ್ನು ಕರೆಯುವಾಗ ಉಪರಾಷ್ಟ್ರಪತಿಗಳಾದ ಜಗದೀಪ್ ಧನಕರ್ ಜಯಾ ಹೆಸರಿನ ಜೊತೆ ಅಮಿತಾಭ್ ಹೆಸರನ್ನು ಸೇರಿಸಿ ಕರೆದಿದ್ದರು. ಆಗ ಜಯಾಬಚ್ಚನ್ ಸಿಡಿಮಿಡಿಗೊಂಡು ನನಗೆ ನನ್ನ ಗಂಡನ ಬಗ್ಗೆ ಹೆಮ್ಮೆ ಇದೆ. ಆದರೆ ನನ್ನ ವ್ಯಕ್ತಿ ಸ್ವಾತಂತ್ರ್ಯಕ್ಕೆ ಗೌರವ ಕೊಡಿ ಎಂದು ಖಾರವಾಗಿ ಪ್ರತಿಕ್ರಿಯಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
