ಅನಿಸಿಕೆ ಇದು ನನ್ನ ಮನದಾಳದ ಮಾತು

ವರದಿಗಾರರು : ಧನಂಜಯ ವಿ. || ಸ್ಥಳ : Bengaluru
ವರದಿ ದಿನಾಂಕ : 05-12-2025

ಅನಿಸಿಕೆ ಇದು ನನ್ನ ಮನದಾಳದ ಮಾತು

ಇದು ಮಾಹಿತಿ ಯುಗ ! ದಿನದಿಂದ ದಿನಕ್ಕೆ ತಂತ್ರಜ್ಞಾನ ಎಲ್ಲೇ ಮೀರಿ ದಾಪುಗಾಲು ಇಡುತ್ತಿದೆ.

ಸಂವಹನ, ಬಾಹ್ಯಾಕಾಶ ವ್ಯಾಪಾರ ಮತ್ತು ದೈನಂದಿನ ಚಟುವಟಿಕೆಗಳ ಪ್ರಧಾನ ಪಾತ್ರ ಈ ತಂತ್ರಜ್ಞಾನದ್ದು‌. ಒಂದು ಕ್ಷಣ ಈ ತಂತ್ರಜ್ಞಾನ ಗತಿಯಲ್ಲಿ ಏರುಪೇರಾದರು ಇಡಿ ವಿಶ್ವವೇ ದಂಗಾಗಿ ಬಿಡುತ್ತವೆ‌. ಅಷ್ಟರ ಮಟ್ಟಿಗೆ ಈ ತಂತ್ರಜ್ಞಾನ ಮಾನವನ ನಾಡಿ ಮಿಡಿತವನ್ನೇ ನಿಯಂತ್ರಿಸುವಷ್ಟು ಆಗಾಧವಾಗಿ ಬೆಳೆದು ನಿಂತಿವೆ.

ಇತ್ತೀಚೆಗೆ ಎಐ ದಿಗ್ಗಜ ಎಲಾನ್ ಮಸ್ಕ್ ಮತ್ತು ಝರೋಧಾ ಸಂಸ್ಥಾಪಕ ನಿಖಿಲ್ ಕಾಮತ್ ನಡುವಿನ ಸಂದರ್ಶನ ಇಡೀ ವಿಶ್ವ ಸಮುದಾಯವನ್ನೇ ಬೆರಗಾಗಿಸಿದ್ದು ಸುಳ್ಳಲ್ಲ. ಎಲಾನ್ ಮಸ್ಕ್ ಸಂದರ್ಶನದಲ್ಲಿ ಒಂದು ವಿಷಯವನ್ನ ಬಹಿರಂಗಪಡಿಸಿದರು.

ಅದೇನೆಂದರೆ ಮುಂದಿನ ಹತ್ತು ಹದಿನೈದು ವರ್ಷಗಳಲ್ಲಿ ಜನರು ಕೆಲಸವೇ ಮಾಡುವ ಅವಶ್ಯಕತೆ ಇಲ್ಲ ಕೆಲಸ ಒಂದು ಐಚ್ಚಿಕ ಕ್ಷೇತ್ರವಾಗಿ ಉಳಿಯಲಿದೆ‌. ಎಐ ರೋಬೋ ತಂತ್ರಜ್ಞಾನಣ್ಣ ಎಲ್ಲ ಕೆಲಸ ಕಾರ್ಯವನ್ನ ನಿರ್ವಹಿಸುತ್ತಾನೆ. ಆತ ಮನುಷ್ಯನಿಗಿಂತ ನೂರು ಪಟ್ಟು ಹೆಚ್ಚು ಬಲಶಾಲಿ ಬುದ್ಧಿಶಾಲಿ‌. ಎಐ ರೋಬೋ ಬಂದ ಮೇಲಂತೂ ಮನುಷ್ಯರು ದುಡಿಮೆ ಮಾಡುವ ಅಗತ್ಯವೇ ಇಲ್ಲ?? ಅರೇ ವಾ...!!! ಎಂತ ಅದ್ಭುತ ಕಲ್ಪನೆಯಲ್ಲವೇ.

ಹಿಂದೊಮ್ಮೆ ನಾವು ರಜನಿಕಾಂತ್ ನಟನೆಯ ರೋಬೋ ಸಿನೆಮಾ ನೋಡಿ. ಖುಷಿ ಪಟದಟಿದ್ದೇವು. ಅದು ಒಂದು ಮನರಂಜನೆ ಸಿನೆಮಾ. ಈಗ ಅದು ಅಕ್ಷರಶಃ ನಿಜ ಸ್ವರೂಪ ತಾಳುವ ಹಂತದಲ್ಲಿದೆ.

ಯಾಕೆ ಈ ತಂತ್ರಜ್ಞಾನದ ಬಗ್ಗೆ ಅಷ್ಟೊಂದು ತಲೆ ಕೆಡಿಸಿಕೊಳ್ಳೊದು ಅಂತ ನಿಮಗನಿಸ್ತಿದೆಯಾ? ಹೌದು ಸ್ವಾಮಿ ತಲೆ ಕೆಡಿಸಿಕೊಳ್ಳಲೇ ಬೇಕಾದ ವಿಷಯ ಇದು‌. ಹೇಳಿದ್ದನ್ನು ಮಾಡಿಯೇ ತೀರುವ ಮಾನವನ ಅವತಾರಲ್ಲಿರುವ ರೋಬೋ ಅಂದ್ರೆ ಅವನೆ ಎಲಾನ್ ಮಸ್ಕ್. ಒಂದು ಗಾದೆ ಮಾತಿದೆ ಕೆಲಸವಿಲ್ಲದವನ ತಲೆ ದೆವ್ವದ ಮನೆ.!! ಈ ಗಾದೆ ಮಾತು ಒಂದು ಲೋಕಾರೂಢಿಯ ಮಾತು ಆಗಿತ್ತು. ಇದೀಗ ಆ ಲೋಕಾರೂಢಿಯ ಮಾತು ಲೋಕದ ರೂಢಿಯೊಂದಿಗೆ ಬದಲಾಗುವ ಕಾಲ ಬಂದುಬಿಟ್ಟಿದೆ. ಮಸ್ಕ್ ಈಗಾಗಲೇ ಅಪ್ರತಿಮ ಸಾಧನೆಗಳನ್ನ ಮಾಡಿಬಿಟ್ಟಿದ್ದಾನೆ. ಭೂಮಿಯಿಂದ ಜಿಗಿದ ರಾಕೇಟ್ ಪುನಃ ಭೂಮಿಗೆ ತಂದು ಇಳಿಸಿದ ಭೂಪ ಈತ.

ಭೂಮಂಡಲದಿಂದ ಜನರನ್ನು ಮಂಗಳ ಗ್ರಹಕ್ಕೆ ಕಳುಹಿಸುವ ಮಾಂತ್ರಿಕನೀತ‌. ಇವೆಲ್ಲ ಸರಿ ಸ್ವಾಮಿ.‌‌..ಆದ್ರೆ ನಮ್ಮಂತ ಜನಸಾಮಾನ್ಯರ ಪಾಡೇನು ?

ಅಲ್ವ..ನಾವು ದುಡಿದು ತಿಂಗಳ ಸಂಬಳಕ್ಕೆ ಕಾಯುತ್ತಿರುವ ಮಂದಿ. ಅದನ್ನೆಲ್ಲ ತಂತ್ರಜ್ಞಾನ ನುಂಗಿಬಿಟ್ಟರೆ ನಮ್ ಗತಿ ಏನು ಸ್ವಾಮಿ. ...

ವಿಜ್ಞಾನ ತಂತ್ರಜ್ಞಾನ ಅಭಿವೃದ್ಧಿ ಎಲ್ಲ ಓಕೆ. ಈಗಾಗಲೇ ಬಂದಿರುವ ಸಾಕಷ್ಟು ತಂತ್ರಾಂಶಗಳು ಜನರನ್ನ ನಿರುದ್ಯೋಗಿಗಳನ್ನಾಗಿ ಮಾರ್ಪಡಿಸಿವೆ‌. .

ನಾವು ಶಾಲೆಯಲ್ಲಿ ಓದುವಾಗ ನಮ್ಮ ಕೈಬರಹ ದುಂಡಾಗಿರಲಿ ಅಂತ ಅದೆಷ್ಟೋ ಬಾರಿ ಶಿಕ್ಷಕರಿಂದ ಬೈಗುಳ ,ಪೆಟ್ಟು ತಿಂದಿದ್ದಿದೆ. ಆದರೆ ಇಂದು ಕೈಬರಹಕ್ಕೆ ಕವಡೆಕಾಸು ಕಿಮ್ನತ್ತಿಲ್ಲ‌ ಎಲ್ಕವೂ ಗಣಕಯಂತ್ರ ನುಂಗಿಬಿಟ್ಟಿದೆ. ಇದೇ ರೀತಿ ಮುಂದೆ ರೋಬೋ ಮಹಾಶಯನ ಎಂಟ್ರಿಯಿಂದ ಕಥೆ ಏನು?? ಮನುಷ್ಯ ಮನುಷ್ಯನ ನಡುವೆ ಭಾವನೆಗಳ ಸಂಬಂಧ ಸೇತು ಕುಸಿಯತೊಡಗಿವೆ‌. ಅತ್ಯಧಿಕ ಜನಸಂಖ್ಯೆ ಇರುವಂತ ನಮ್ಮ ದೇಶದಲ್ಲಿ ಕ್ಷಿಪ್ರ ಬೆಳವಣಿಗೆ ಕಾಣುತ್ತಿರುವ ತಂತ್ರಜ್ಞಾನದಿಂದ ಸಂಭವಿಸಬಹುದಾದ ಅನಾಹುತಗಳೇನು? ತಂತ್ರಜ್ಞಾನ ಬೇಡವೇ ಬೇಡ ಅಂತ ನನ್ನ ಅನಿಸಿಕೆಯಲ್ಲ. ಆದರೆ ಅದರಿಂದ ಮನುಕುಲ ನಶಿಸಿಹೋಗಬಾರದೆಂಬುದು ನನ್ನ ಕಳವಳ. ತಂತ್ರಜ್ಞಾನದ ಸುಳಿಯಲ್ಲಿ ಮಾನವನ ಅಸ್ತಿತ್ವವೇ ಅಳಿದುಹೋಗಬಾರದಲ್ಕವೇ.. ನೀವು ಏಂತೀರಿ????

ಇಂದಿನ ದಿನಗಳಲ್ಲಿ ಮ್ಯಾರೇಜ್ ಔಡ್ ಡೇಟೆಡ್ ಆಗಿದೆ. ಜಯಾ

ಒಟ್ಟು ಓದುಗರ ಸಂಖ್ಯೆ : 512+

ಬೆಳಗಾವಿ ಜಿಲ್ಲೆಯ ಅಭಿವೃದ್ಧಿಗೆ ವಿಭಜನೆ ಅಗತ್ಯ;- ಲಕ್ಚ್ಮಿ ಹೆಬ್ಬಾಳ್ಕರ್

ಒಟ್ಟು ಓದುಗರ ಸಂಖ್ಯೆ : 735+

ಅಂಬೇಡ್ಕರ್ ಮಾರ್ಗ ಅನುಸರಿಸಿದಾಗ ಬದುಕು ಸಾರ್ಥಕ: ರಾಹುಲ್ ಖಂದಾರೆ

ಒಟ್ಟು ಓದುಗರ ಸಂಖ್ಯೆ : 815+

ಇಂಡಿಗೋ(ಳಾಟ) ಕೇಂದ್ರದ ಮಧ್ಯಸ್ಥಿಕೆ

ಒಟ್ಟು ಓದುಗರ ಸಂಖ್ಯೆ : 821+

ಚಳಿಗಾಲ ಮತ್ತು ಹೃದಯಸ್ತಂಬನ

ಒಟ್ಟು ಓದುಗರ ಸಂಖ್ಯೆ : 953+

ಅನಿಸಿಕೆ ಇದು ನನ್ನ ಮನದಾಳದ ಮಾತು

ಒಟ್ಟು ಓದುಗರ ಸಂಖ್ಯೆ : 950+

ಕೆ.ಎಸ್ ಸಿ.ಎ ಅಧ್ಯಕ್ಷರಾಗಿ ವೆಂಕಟೇಶ ಪ್ರಸಾಧ್ ಆಯ್ಕೆ

ಒಟ್ಟು ಓದುಗರ ಸಂಖ್ಯೆ : 1024+

ಇಂದು ಕುಂದಾನಗರಿ ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶ ಆರಂಭ..

ಒಟ್ಟು ಓದುಗರ ಸಂಖ್ಯೆ : 1048+

ಡಾ.ಬಿ.ಆರ್. ಅಂಬೇಡ್ಕರ್ ರವರ 69ನೇ ಮಹಾ ಪರಿನಿರ್ವಾಣ ದಿನ

ಒಟ್ಟು ಓದುಗರ ಸಂಖ್ಯೆ : 6280+

ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ಬಳಕೆ ; ಸುಧಾ ಮೂರ್ತಿ ಕಳವಳ

ಒಟ್ಟು ಓದುಗರ ಸಂಖ್ಯೆ : 6825+

ಆರೋಗ್ಯವನ್ನು ನಿರ್ಲಕ್ಷ್ಯ ಮಾಡಬೇಡಿ: ವೈದ್ಯ ಮಂಜುನಾಥ್.

ಒಟ್ಟು ಓದುಗರ ಸಂಖ್ಯೆ : 6866+

ವೈಟ್‌ಫೀಲ್ಡ್‌ನ ಬೆಸ್ಕಾಂ ಉಪವಿಭಾಗ ಕಚೇರಿ ಉದ್ಘಾಟಿಸಿದ ಇಂಧನ ಸಚಿವ ಕೆ.ಜೆ. ಜಾರ್ಜ್.

ಒಟ್ಟು ಓದುಗರ ಸಂಖ್ಯೆ : 6866+

ಭಾರತದ ಶಾಂತಿ ತತ್ವ ಪ್ರತಿಪಾದಿಸಿದ ಪ್ರಧಾನಿ ಮೋದಿ.

ಒಟ್ಟು ಓದುಗರ ಸಂಖ್ಯೆ : 6890+

ಪ್ರಸಕ್ತ ವಿದ್ಯಮಾನದ ಮಹತ್ತರ ಬೆಳವಣಿ,ಭಾರತ ಮತ್ತು ರಷ್ಯಾ ನಡುವೆ ಮಹತ್ತರ ಒಪ್ಪಂದ

ಒಟ್ಟು ಓದುಗರ ಸಂಖ್ಯೆ : 7051+

ದುರ್ಗಮ ರಸ್ತೆ ಇದು ಹೇಗೆ ಓಡಾಡೋದು

ಒಟ್ಟು ಓದುಗರ ಸಂಖ್ಯೆ : 7081+

ಸಾಂಕ್ರಾಮಿಕವಲ್ಲದ ರೋಗಗಳ ಕುರಿತ ಮಾಹಿತಿ ನೀಡಿ: ಜೆಪಿ ನಡ್ಡಾಗೆ ಸಂಸದೆ ಡಾ.ಪ್ರಭಾ ಮಲ್ಲಿಕಾರ್ಜುನ್ ಒತ್ತಾಯ

ಒಟ್ಟು ಓದುಗರ ಸಂಖ್ಯೆ : 7109+

ಕಬಡ್ಡಿ, ಖೋಖೋ, ವಾಲಿಬಾಲ್: ಹಾಸನ ತಂಡ ಪ್ರಥಮ ೨೮ನೇ ರಾಜ್ಯ ಮಟ್ಟದ ಆದಿಚುಂಚನಗಿರಿ ಕ್ರೀಡಾಕೂಟ ಯಶಸ್ವಿ: ಚುಂಚಶ್ರೀ

ಒಟ್ಟು ಓದುಗರ ಸಂಖ್ಯೆ : 8970+

ತಾವರೆಕೆರೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಚಪ್ಪನಹಳ್ಳಿ ಗ್ರಾಮದಲ್ಲಿ ನೂತನ ಸರ್ಕಾರಿ ನ್ಯಾಯಾ ಬೆಲೆ ಅಂಗಡಿ ಉದ

ಒಟ್ಟು ಓದುಗರ ಸಂಖ್ಯೆ : 9167+

ರಷ್ಯಾ ಅಧ್ಯಕ್ಷ ಮತ್ತು ಭದ್ರತೆ

ಒಟ್ಟು ಓದುಗರ ಸಂಖ್ಯೆ : 9300+

ಬೀದರದಲ್ಲಿ ಡಿಸೆಂಬರ್ 7 ರಂದು ಮಹಿಳೆಯರಿಗಾಗಿ ಕುರ್‍ಆನ್ ಪ್ರವಚನ

ಒಟ್ಟು ಓದುಗರ ಸಂಖ್ಯೆ : 9381+

ದ್ವೇಷ ಭಾಷಣಕ್ಕೆ 7 ವರ್ಷ ಜೈಲು: ಮಸೂದೆಗೆ ಸಚಿವ ಸಂಪುಟದ ಅನುಮೋದನೆ

ಒಟ್ಟು ಓದುಗರ ಸಂಖ್ಯೆ : 9394+

ಯಲಿಯೂರು ಹಾಲು ಉತ್ಪಾದಕರ ಸಹಕಾರಿ ಸಂಘದಲ್ಲಿ ಅಧ್ಯಕ್ಷ–ಉಪಾಧ್ಯಕ್ಷರ ಅವಿರೋಧ ಚುನಾವಣೆ

ಒಟ್ಟು ಓದುಗರ ಸಂಖ್ಯೆ : 9396+

ಯಲಿಯೂರು ಹಾಲು ಉತ್ಪಾದಕರ ಸಂಘದಲ್ಲಿ ಅಧ್ಯಕ್ಷ-ಉಪಾಧ್ಯಕ್ಷರ ಅವಿರೋಧ ಆಯ್ಕೆ

ಒಟ್ಟು ಓದುಗರ ಸಂಖ್ಯೆ : 9436+

ಅನಿಸಿಕೆ ಇದು ನನ್ನ ಮನದಾಳದ ಮಾತು

ಒಟ್ಟು ಓದುಗರ ಸಂಖ್ಯೆ : 9463+

ಗೃಹಲಕ್ಷ್ಮಿಯರಿಗೆ ರೂ. 30 ಸಾವಿರದಿಂದ 3 ಲಕ್ಷದವರೆಗೆ ಪರ್ಸನಲ್ ಲೋನ್ ಭಾಗ್ಯ

ಒಟ್ಟು ಓದುಗರ ಸಂಖ್ಯೆ : 9933+

ಭಾರತ ರಷ್ಯಾ 23 ನೇ ಶೃಂಗ ಸಭೆ. ಭರತನಾಟ್ಯ ಪ್ರದರ್ಶನದ ಮೂಲಕ ರಷ್ಯಾಧೀಶರಿಗೆ ಸ್ವಾಗತ.

ಒಟ್ಟು ಓದುಗರ ಸಂಖ್ಯೆ : 9959+

ಮರೆಯದೇ ಪಲ್ಸ್ ಪೋಲಿಯೋ ಲಸಿಕೆ ಹಾಕಿಸಿ.. ಡಿ.21 ರಿಂದ 24ರವರೆಗೆ ಅವಕಾಶ…1.40 ಲಕ್ಷ ಮಕ್ಕಳಿಗೆ ಲಸಿಕೆ ಹಾಕುವ ಗುರಿ

ಒಟ್ಟು ಓದುಗರ ಸಂಖ್ಯೆ : 10014+

ಜಿ.ಪಿ.ರಾಜರತ್ನಮ್ ಜನುಮದಿನ

ಒಟ್ಟು ಓದುಗರ ಸಂಖ್ಯೆ : 10027+

ಪದ್ಮಶ್ರೀ ಪುರಸೃತ ವೆಂಕಣ್ಣ ಸುಗತೆಕರ್ ಆರೋ್ಗ್ಯ ವಿಚಾರಿಸಿದ ಬಿಜೆಪಿ ಮುಖಂಡ ಡಾ. ಶೇಖರ ಮಾನೆ

ಒಟ್ಟು ಓದುಗರ ಸಂಖ್ಯೆ : 12113+

ಬೆಂಗಳೂರಿನಲ್ಲಿ ಭಾರತದ ಮೊದಲ ಎಲೆಕ್ಟ್ರಿಕ್ ಟ್ರ್ಯಾಕ್ಟರ್ ಮೇಳ

ಒಟ್ಟು ಓದುಗರ ಸಂಖ್ಯೆ : 12121+

ನಾಗೂರಾ ಯುವಕ ಸೈನ್ಯಕ್ಕೆ ಭರ್ತಿ : ಸನ್ಮಾನ

ಒಟ್ಟು ಓದುಗರ ಸಂಖ್ಯೆ : 12248+

ಪಿಎಂಶ್ರೀ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಪ್ರತಿಭಾ ಕಾರಂಜಿ

ಒಟ್ಟು ಓದುಗರ ಸಂಖ್ಯೆ : 12254+

ಇಂದು ಸಂಜೆ ಭಾರತಕ್ಕೆ ರಷ್ಯಾ ಅಧ್ಯಕ್ಷ ಪುಟಿನ್ ಆಗಮನ

ಒಟ್ಟು ಓದುಗರ ಸಂಖ್ಯೆ : 12684+

ಡಿಸೆಂಬರ್ 4 ಭಾರತೀಯ ನೌಕಾಪಡೆಯ ದಿನ

ಒಟ್ಟು ಓದುಗರ ಸಂಖ್ಯೆ : 12732+

ದಾವಣಗೆರೆಯಲ್ಲಿ ಸರ್ಕಾರಿ ನಿವೇಶನಗಳು ಖಾಲಿ ಇದ್ದರೆ ಇಲಾಖೆಗಳ ವಿವಿಧ ಉದ್ದೇಶಿತ ಕಟ್ಟಡಗಳಿಗೆ ಹಂಚಿಕೆ!

ಒಟ್ಟು ಓದುಗರ ಸಂಖ್ಯೆ : 12802+

ಬೆಂಗಳೂರು ನಮ್ಮ ಮೆಟ್ರೋ ಪ್ರಯಾಣಿಕರಿಗೆ ಸಿಹಿ ಸುದ್ಧಿ

ಒಟ್ಟು ಓದುಗರ ಸಂಖ್ಯೆ : 12898+

ವಿಮಾನ ಸಂಚಾರದಲ್ಲಿ ವ್ಯತ್ಯಯ

ಒಟ್ಟು ಓದುಗರ ಸಂಖ್ಯೆ : 12907+

ಎ. ಪಿ. ಡಿ ಸಂಸ್ಥೆ ವತಿಯಿಂದ ಸರಕಾರಿ,ಅರೆಸರಕಾರಿ ಕಚೇರಿ ಅಡೆತಡೆ ಮುಕ್ತ ವಾತಾವರಣ ನಿರ್ಮಿಸಲು ಮನವಿ

ಒಟ್ಟು ಓದುಗರ ಸಂಖ್ಯೆ : 12951+

ಜಿಲ್ಲಾಡಳಿತ ಭವನದಲ್ಲಿ ವಿಶ್ವವಿಕಲಚೇತನರ ದಿನಾಚರಣೆ

ಒಟ್ಟು ಓದುಗರ ಸಂಖ್ಯೆ : 14840+

ಸುವಿದ್ಯಾ ನಿಧಿ ಮೂಲಕ ಪ್ರಥಮ ಚಿಕಿತ್ಸೆ ಜಾಗೃತಿ ಕಾರ್ಯಕ್ರಮ

ಒಟ್ಟು ಓದುಗರ ಸಂಖ್ಯೆ : 15008+

ಬಿಜೆಪಿ ರಾಷ್ಟ್ರಾಧ್ಯಕ್ಷರ ಆಯ್ಕೆ ಪ್ರಕ್ರಿಯೇ ಸ್ತ್ರೀ ಶಕ್ತಿ

ಒಟ್ಟು ಓದುಗರ ಸಂಖ್ಯೆ : 15347+

ಚಳಿಗಾಲ ಮತ್ತು ಆರೋಗ್ಯ

ಒಟ್ಟು ಓದುಗರ ಸಂಖ್ಯೆ : 15534+

ಮೆಕ್ಕೆಜೋಳಕ್ಕೆ ಬೆಂಬಲ ಬೆಲೆ ಖರೀದಿ ಕೇಂದ್ರ ತೆರೆಯಲು ಆಗ್ರಹ:

ಒಟ್ಟು ಓದುಗರ ಸಂಖ್ಯೆ : 15652+

ಹೊಸ ಅಯೋಧ್ಯ ಹುಲುಗಪ್ಪ ಟೀ ಪುಡಿ ಅವರಿಗೆ ಜಿಲ್ಲಾ ಸಮಿತಿಯಿಂದ ಸನ್ಮಾನ

ಒಟ್ಟು ಓದುಗರ ಸಂಖ್ಯೆ : 15697+

ಸಂಚಾರಿ ಸಾಥಿ ತಂತ್ರಾಶ..

ಒಟ್ಟು ಓದುಗರ ಸಂಖ್ಯೆ : 15678+

ಗ್ರೇಟರ್ ಬೆಂಗಳೂರು ಪ್ರಾಧಿಕಾರದ 369 ವಾರ್ಡ್ ಗಳ ಅಧಿಕೃತ ಪಟ್ಟಿ ಬಿಡುಗಡೆ.

ಒಟ್ಟು ಓದುಗರ ಸಂಖ್ಯೆ : 15683+

ರಾಜ್ಯ ಕೈ ನಾಯಕರ ಉಪಹಾರ ಕೂಟ...ಬಿಜೆಪಿ ವ್ಯಂಗ್ಯ...

ಒಟ್ಟು ಓದುಗರ ಸಂಖ್ಯೆ : 15706+

ಮಧುಗಿರಿಯಲ್ಲಿ ಕಾರು ಪಲ್ಟಿ: ದಂಪತಿ ಸ್ಥಳದಲ್ಲೇ ಮೃತಪಟ್ಟ ದುರ್ಘಟನೆ

ಒಟ್ಟು ಓದುಗರ ಸಂಖ್ಯೆ : 17953+