ವರದಿಗಾರರು :
ಬಸವರಾಜ್ ||
ಸ್ಥಳ :
ಬೆಳಗಾವಿ
ವರದಿ ದಿನಾಂಕ :
25-11-2025
ವಾಲ್ಮೀಕಿ ಸಮಾಜದ ಅವಮಾನ – ಕಾನೂನು ಹೋರಾಟ ಮುಂದುವರಿಕೆ ಹುಕ್ಕೇರಿ ತಹಶೀಲ್ದಾರ ಅಮಾನತು ಮಾಡಬೇಕು: ಶಾಸಕ ರಮೇಶ್ ಜ�
ಬೆಳಗಾವಿ: ಮಾಜಿ ಸಂಸದ ರಮೇಶ ಕತ್ತಿ ವಾಲ್ಮೀಕಿ ಸಮಾಜದ ವಿರುದ್ಧ ಅವಾಚ್ಯ ಶಬ್ದ ಬಳಕೆ ಮಾಡಿದ ಪ್ರಕರಣದ ಕುರಿತು ಕಾನೂನು ಹೋರಾಟ ನಡೆಯುತ್ತಿದೆ ಎಂದು ಶಾಸಕ ರಮೇಶ್ ಜಾರಕಿಹೊಳಿ ತಿಳಿಸಿದ್ದಾರೆ. ನಗರದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, “ಕಾಂಗ್ರೆಸ್ ನಡೆಯಿಂದ ಮನನೊಂದು ಮಾತನಾಡುತ್ತಿದ್ದೇನೆ. ಹುಕ್ಕೇರಿ ಗ್ರೇಡ್-2 ತಹಶೀಲ್ದಾರ ವಾಲ್ಮೀಕಿ ಸಮಾಜ ಎಸ್ಟಿ ಬರಲ್ಲ ಎಂದು ಬರೆದು ಕೊಟ್ಟಿರುವುದು ದೊಡ್ಡ ದುರಂತ,” ಎಂದರು.
ತಾವು ಅಹಿಂದ ಸಂಘಟನೆಗೆ ಬೆಂಬಲ ನೀಡಿರುವುದನ್ನು ನೆನಪಿಸಿದ ಜಾರಕಿಹೊಳಿ, ಅಹಿಂದ ಚಳವಳಿಯಿಂದಲೇ ಅನೇಕರು ಸಚಿವರು ಹಾಗೂ ಮುಖ್ಯಮಂತ್ರಿಗಳಾಗಿರುವುದನ್ನು ತಿಳಿಸಿದರು. ವಾಲ್ಮೀಕಿ, ದಲಿತ ಹಾಗೂ ಹಿಂದುಳಿದ ವರ್ಗದ ಹಕ್ಕುಗಳ ಪರ ಹೋರಾಟ ಮುಂದುವರಿಸುತ್ತೇನೆ ಎಂದು ಹೇಳಿದರು. “ತಹಶೀಲ್ದಾರರನ್ನು ಅಮಾನತು ಮಾಡಬೇಕು. ಯಾರ ಒತ್ತಡದಿಂದ ಪತ್ರ ಬರೆದು ಕೊಟ್ಟಿದ್ದಾರೆ ಎಂಬುದರ ಬಗ್ಗೆ ಸಮಗ್ರ ತನಿಖೆ ಅಗತ್ಯ. ಜಿಲ್ಲಾಧಿಕಾರಿಗೂ ವಿಷಯವನ್ನು ತಿಳಿಸಿದ್ದೇನೆ,” ಎಂದು ಜಾರಕಿಹೊಳಿ ಸ್ಪಷ್ಟಪಡಿಸಿದರು.
ರಮೇಶ ಕತ್ತಿ ವಿಚಾರದಲ್ಲಿ ಅವರು, “ವಾಲ್ಮೀಕಿ ಸಮಾಜ ಎಸ್ಟಿ ಬರಲ್ಲ, ಪ್ರವರ್ಗ ಒಂದು ಬರಲಿದೆ ಎಂದು ಹೇಳಿರುವುದು ಗಂಭೀರ. ಬೇಡರು ಸಮುದಾಯದ ವಿರುದ್ಧ ಅವಾಚ್ಯ ಶಬ್ದ ಬಳಕೆ ಮಾಡಿದ್ದಾರೆ. ಹೀಗೆ ಬಿಟ್ಟರೆ ನಮ್ಮ ಸಮಾಜಕ್ಕೆ ಭವಿಷ್ಯದಲ್ಲಿ ದೊಡ್ಡ ಅನ್ಯಾಯವಾಗಲಿದೆ,” ಎಂದು ಅಸಮಾಧಾನ ವ್ಯಕ್ತಪಡಿಸಿದರು.
