ವರದಿಗಾರರು :
ಹುಲಗಪ್ಪ ಎಮ್., ಹವಾಲ್ದಾರ ||
ಸ್ಥಳ :
ಯಾದಗಿರಿ
ವರದಿ ದಿನಾಂಕ :
05-11-2025
ಯಾದಗಿರಿ: ಸಹಕಾರ ಮಹಾಮಂಡಳ ನಿ., ಬೆಂಗಳೂರು ಅಧ್ಯಕ್ಷರ ಸನ್ಮಾನ
ಯಾದಗಿರಿ ಜಿಲ್ಲಾ ಸಹಕಾರ ಒಕ್ಕೂಟ ನಿಯಮಿತದ ವತಿಯಿಂದ, ಸಹಕಾರ ಮಹಾಮಂಡಳ ನಿ., ಬೆಂಗಳೂರು ಅಧ್ಯಕ್ಷರಾದ ಸನ್ಮಾನ್ಯ ಶ್ರೀ ಜಿ.ಟಿ. ದೇವೇಗೌಡರು ಹಾಗೂ ನಿರ್ದೇಶಕರಾದ ಶ್ರೀ ಶೇಖರ್ ಗೌಡ ಮಾಲಿ ಪಾಟೀಲ್ ಮತ್ತು ಶ್ರೀ ಅಭಿಷೇಕ್ ಆರ್. ಪಾಟೀಲ್ ಅವರು ಭೇಟಿ ನೀಡಿದ ಸಂದರ್ಭದಲ್ಲಿ, ಒಕ್ಕೂಟದ ಅಧ್ಯಕ್ಷರಾದ ಶ್ರೀ ವಿಶ್ವನಾಥ್ ರೆಡ್ಡಿ ದರ್ಶನಾಪುರ, ಉಪಾಧ್ಯಕ್ಷರಾದ ಶ್ರೀ ಎಂ. ನಾರಾಯಣ್ ಮತ್ತು ಎಲ್ಲಾ ಗೌರವಾನ್ವಿತ ನಿರ್ದೇಶಕರು ಸನ್ಮಾನಿಸಿದರು.
ಇಲ್ಲಿನ ಕಾರ್ಯಕ್ರಮದಲ್ಲಿ, ರಾಯಚೂರು ಜಿಲ್ಲೆ ಸಹಕಾರ ಒಕ್ಕೂಟದ ಅಧ್ಯಕ್ಷ ಶ್ರೀ ವಿಜಯ್ ಕುಮಾರ್ ಪಾಟೀಲ್, ಶಾವಂತಗೇರಿ ಮಹಾಮಂಡಳದ ಎಸ್ಟೇಟ್ ಅಧಿಕಾರಿ ಶ್ರೀ ಲಕ್ಷ್ಮಿಕಾಂತ್ ಕಟ್ಟಿಮನಿ, ಕೆಐಸಿಎಂ ತರಬೇತಿ ಸಂಸ್ಥೆಯ ಪ್ರಾಂಶುಪಾಲರು ಶ್ರೀ ಅರುಣ್ ಕುಮಾರ್ ಹರಸೂರ, ಯೂನಿಯನ್ ಆಡಳಿತ ಮಂಡಳಿಯ ಸದಸ್ಯರು, ಸಿಬ್ಬಂದಿ ಹಾಗೂ ಜಿಲ್ಲೆಯ ಎಲ್ಲಾ ಸಹಕಾರಿಗಳು ಉಪಸ್ಥಿತರಿದ್ದರು.
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳಿಗಾಗಿ ನಿಮ್ಮ ವಾಟ್ಸಾಪ್ ಗ್ರೂಪ್‌ಗೆ 7892441717 ಸಂಖ್ಯೆಯನ್ನು ಸೇರಿಸಿ
