ವರದಿಗಾರರು :
ಮೀನಾಕ್ಷಿ ||
ಸ್ಥಳ :
ಬೆಂಗಳೂರು
ವರದಿ ದಿನಾಂಕ :
19-03-2025
ನಿಶ್ಚಿತಾರ್ಥದ ಸಂಭ್ರಮದಲ್ಲಿ ‘ದೃಷ್ಟಿಬೊಟ್ಟು’ ಸೀರಿಯಲ್ ನಟಿ
ದೃಷ್ಟಿಬೊಟ್ಟು, ನಾಗಿಣಿ ಸೇರಿದಂತೆ ಹಲವು ಸೀರಿಯಲ್ನಲ್ಲಿ ನಟಿಸಿರುವ ಗೌತಮಿ ಜಯರಾಮ್ (Gowthami Jayaram) ಅವರ ನಿಶ್ಚಿತಾರ್ಥ ಅದ್ಧೂರಿಯಾಗಿ ಜರುಗಿದೆ. ಎಂಗೇಜ್ಮೆಂಟ್ನ ಸಂಭ್ರಮದ ಫೋಟೋಗಳನ್ನು ನಟಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ದೃಷ್ಟಿಬೊಟ್ಟು’ ಸೀರಿಯಲ್ನ ಇಂಪನಾ ಪಾತ್ರಧಾರಿ ಗೌತಮಿ ಹಸೆಮಣೆ ಏರಲು ರೆಡಿಯಾಗಿದ್ದಾರೆ. ಉದಯ್ ಶಂಕರ್ ರಾಜ್ (Uday Shankar Raj) ಜೊತೆ ಗ್ರ್ಯಾಂಡ್ ಆಗಿ ನಿಶ್ಚಿತಾರ್ಥ (Engagement) ಮಾಡಿಕೊಂಡಿದ್ದಾರೆ. ಈ ಸಂಭ್ರಮಕ್ಕೆ ‘ದೃಷ್ಟಿಬೊಟ್ಟು’ ಟೀಮ್ ಕೂಡ ಸಾಕ್ಷಿಯಾಗಿದೆ.
