ವರದಿಗಾರರು :
ಕೆಂಡೇಶ್ ಸೂರ್ಯ ಹುಣಸೂರು ||
ಸ್ಥಳ :
ಹುಣಸೂರು
ವರದಿ ದಿನಾಂಕ :
06-11-2025
ನಗರಸಭೆ ಅಧಿಕಾರಿಗಳಿಗೆ ಚಳಿ ಬಿಡಿಸಿದ ಶಾಸಕ
ಹುಣಸೂರು ನಗರ ಸಭೆ ಸಭಾಂಗಣದಲ್ಲಿ ನಡೆದ ಕೆ.ಡಿ.ಪಿ ಸಭೆಯಲ್ಲಿ ಸರಕಾರಿ ಆಸ್ತಿ ಉಳಿಸಲು ಕ್ರಮವಹಿಸದ ಹಾಗೂ ಕುಂಟು ನೆಪ ಹೇಳುತ್ತಿದ್ದ ನಗರಸಭೆ ಆಯುಕ್ತೆ ಮಾನಸ ಹಾಗೂ ಕಂದಾಯ ನೀರಿಕ್ಷಕ ಸಿದ್ದರಾಜುಗೆ ಜಿಲ್ಲಾಧಿಕಾರಿ ಎದುರಲ್ಲೆ ಚಾರ್ಜ್ ಮಾಡಿದ ಶಾಸಕ ಹರೀಶ್‌ಗೌಡ. ಹುಣಸೂರು ಉದ್ದಿಮೆಗೆ (ಕಾಫಿ ವರ್ಕ್ಸ್) ಸೇರಿದಂತೆ ಸರಕಾರಿ ಭೂಮಿಗಳನ್ನು ವಾರದಲ್ಲಿ ಸರ್ವೆ ನಡೆಸಿ, ಜಿಲಾಧಿಕಾರಿಗೆ ಮಾಹಿತಿ ನೀಡಲು ಸೂಚನೆ. ಕಾಫಿ ವರ್ಕ್ಸ್ ಜಾಗ ಸೇರಿದಂತೆ ಸರಕಾರಿ ಭೂಮಿ ಸರ್ವೆ ನಡೆಸಿ ಒತ್ತುವರಿ ತೆರವುಗೊಳಿಸಲು ಅಧಿಕಾರಿಗಳಿಗಿರುವ ಸಮಸ್ಯೆ ಏನು, ಪ್ರಕರಣ ನ್ಯಾಯಾಲಯದಲ್ಲಿದ್ದರೂ ಸರ್ವೆ ನಡೆಸಿ ವರದಿ ನೀಡಬಹುದಾಗಿದ್ದರೂ ಕ್ರಮವಹಿಸದ ಬಗ್ಗೆ ಶಾಸಕ ಹರೀಶ್‌ಗೌಡ ಹಾಗೂ ಜಿಲ್ಲಾಧಿಕಾರಿ ಜಿ.ಲಕ್ಷ್ಮಿ ಕಾಂತರೆಡ್ಡಿ ಅಧಿಕಾರಿಗಳನ್ನು ತರಾಟೆಗೊಳಪಡಿಸಿ ಇನ್ನೊಂದು ವಾರದಲ್ಲಿ ಸರ್ವೆ ನಡೆಸಿ, ತೆರವಿಗೆ ಕ್ರಮವಹಿಸಬೇಕೆಂದು ಎಚ್ಚರಿಸಿದರು.
ನಗರಸಭೆ ಸಭಾಂಗದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ನಗರಸಭೆಯ ಪ್ರಗತಿಪರಿಶೀಲನೆ ನಡೆಸಿದ ಶಾಸಕರು ನಗರಸಭೆ ವತಿಯಿಂದ ಫುಡ್ ಕೋರ್ಟ್ ನಿರ್ಮಿಸಲು ಹಳೇ ಸೇತುವೆ ಬಳಿಯ ಕಾಫಿ ವರ್ಕ್ಸ್ ಆಸ್ತಿ ಮುಂಬಾಗದ ಜಾಗವನ್ನು ಗುರುತಿಸಲಾಗಿತ್ತು. ಈ ಸ್ಥಳವನ್ನು ಅಳತೆ ಮಾಡಿಸುವಂತೆ ನಗರಸಭೆಯ ಸಾಮಾನ್ಯ ಸಭೆಯಲ್ಲಿ ಪೌರಾಯುಕ್ತೆ ಹಾಗೂ ಕಂದಾಯಾಧಿಕಾರಿಗಳಿಗೆ ಸೂಚಿಸಿದಾಗ ನ್ಯಾಯಾಲಯದಲ್ಲಿ ತಡೆಯಾಜ್ಞೆ ಇದೆ ಎಂದು ತಿಳಿಸಿದ್ದರಿಂದ, ತಡೆಯಾಜ್ಞೆ ಪ್ರತಿ ನಿಮ್ಮ ಬಳಿ ಇದ್ಯಾ ಎಂದು ಶಾಸಕರ ಪ್ರಶ್ನೆಗೆ ಇಲ್ಲ ಎಂದು ತಲೆ ಆಡಿಸಿದ ಪೌರಾಯುಕ್ತೆ ಮಾನಸರ ಸ್ಪಷ್ಟನೆಗೆ ಆಕ್ರೋಶಭರಿತರಾದ ಶಾಸಕರು ಸಭೆಗೆ ಸುಳ್ಳು ಮಾಹಿತಿ ನೀಡುತೀರಾ ಎಂದು ತರಾಟೆ ತೆಗೆದುಕೊಂಡು, ಇಲ್ಲಿ ನಾಲ್ಕು ಎಕರೆ ಸರಕಾರಿ ಭೂಮಿ ಇದೆ ಎಂಬ ಮಾಹಿತಿ ಇದೆ. ಯಾಕ್ರೀ ಸುಳ್ಳು ಹೇಳ್ತೀರಾ ಎಂದು ಏರು ದ್ವನಿಯಲ್ಲಿ ಪ್ರಶ್ನಿಸುತ್ತಿದ್ದಂತೆ ಈ ವೇಳೆ ಮದ್ಯ ಪ್ರವೇಶಿಸಿದ ಜಿಲ್ಲಾಧಿಕಾರಿಗಳು ನ್ಯಾಯಾಲಯದಲ್ಲಿದೆ ಎಂದು ಅಳತೆ ಮಾಡದಿರುವುದು ತರವಲ್ಲಾ, ತಡೆಯಾಜ್ಞೆ ಇಲ್ಲದ ಮೇಲೆ ವಾರದೊಳಗೆ ಅಳತೆ ಮಾಡಿಸಿ ಸಂಪೂರ್ಣ ವರದಿ ನೀಡುವಂತೆ ಪೌರಾಯುಕ್ತರಿಗೆ ತಾಕೀತು ಮಾಡಿ, ಚಿಲ್ಕುಂದ, ರತ್ನಪುರಿ, ಭೂಚಹಳ್ಳಿ ಕೆರೆ ಒತ್ತುವರಿ ತೆರವಿಗೆ ಕ್ರಮ ಕೈಗೊಂಡ ಬಗ್ಗೆ ತಕ್ಷಣವೇ ಮಾಹಿತಿ ನೀಡುವಂತೆ ಎಚ್ಚರಿಸಿದರು.
ಆಸ್ಪತ್ರೆ-ಅರಸು ಭವನಕ್ಕೆ ಜಾಗ ಬಿಟ್ಟು ಕೊಡಿ
ಬೈಪಾಸ್ ರಸ್ತೆ ಬದಿಯಲ್ಲಿ ನಿರ್ಮಾಣ ಹಂತದ ಹೈಟೆಕ್ ಆಸ್ಪತ್ರೆ, ಅರಸು ಭವನದ ಮುಂಬಾಗದ 16 ಗುಂಟೆ ಭೂಮಿಯು ತೋಟಗಾರಿಕೆ ಇಲಾಖೆಗೆ ಸೇರಿರುವುದರ ಬಗ್ಗೆ ಆಸ್ಪತ್ರೆ ಆಡಳಿತಾಧಿಕಾರಿ ಡಾ.ಮಹದೇವಸ್ವಾಮಿಯವರ ಪ್ರಸ್ತಾಪಕ್ಕೆ ಶಾಸಕರು ಈ ಸ್ಥಳ ಆಸ್ಪತ್ರೆ ಮತ್ತು ಅರಸು ಭವನಕ್ಕೆ ಓಡಾಡಲು ಅತ್ಯವಶ್ಯವಾಗಿದೆ. ಈ ಬಗ್ಗೆ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಬಿಟ್ಟುಕೊಡಲು ಕ್ರಮವಹಿಸುವಂತೆ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ನಾಗರಾಜರಿಗೆ ಶಾಸಕರು ಹಾಗೂ ಜಿಲ್ಲಾಧಿಕಾರಿ ಸೂಚಿಸಿದರು.
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
