ವರದಿಗಾರರು :
ದರ್ಶನ್ ಎಂ.ಎನ್., ||
ಸ್ಥಳ :
ದಾವಣಗೆರೆ
ವರದಿ ದಿನಾಂಕ :
22-09-2025
ದಾವಣಗೆರೆ: ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಜನ್ಮದಿನದ ಅಂಗವಾಗಿ 3×3 ಬಾಸ್ಕೆಟ್ ಬಾಲ್ ಟೂರ್ನಮೆಂಟ್ಗೆ ಸಂಸದೆ ಚಾಲನ
ಬಾಲ್ಯದ ಕ್ರೀಡಾ ಅನುಭವ ಹಂಚಿಕೊಂಡ ಡಾ. ಪ್ರಭಾ ಮಲ್ಲಿಕಾರ್ಜುನ್; ಸೆಮಿ ಇಂಡೋರ್ ಕ್ರೀಡಾಂಗಣಕ್ಕೆ ಭರವಸೆ ದಾವಣಗೆರೆ, ಸೆಪ್ಟೆಂಬರ್ 21ಜಿಲ್ಲಾ ಉಸ್ತುವಾರಿ ಸಚಿವ ಮತ್ತು ಗಣಿ ಹಾಗೂ ತೋಟಗಾರಿಕೆ ಇಲಾಖೆ ಸಚಿವ ಎಸ್.ಎಸ್. ಮಲ್ಲಿಕಾರ್ಜುನ್ ಅವರ ಜನ್ಮದಿನದ ಅಂಗವಾಗಿ ದಾವಣಗೆರೆ ಬಾಸ್ಕೆಟ್ ಬಾಲ್ ಕ್ಲಬ್ ಮತ್ತು ಎಸ್.ಎಸ್.ಎಂ. ಬಾಸ್ಕೆಟ್ ಬಾಲ್ ಕ್ಲಬ್ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಮಟ್ಟದ 3×3 ಬಾಸ್ಕೆಟ್ ಬಾಲ್ ಟೂರ್ನಮೆಂಟ್-2025 ಆಯೋಜಿಸಲಾಯಿತು.
ಈ ಪಂದ್ಯಾವಳಿಗೆ ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಚಾಲನೆ ನೀಡಿದ್ದು, ಬಾಸ್ಕೆಟ್ ಬುಟ್ಟಿಗೆ ಬಾಲ್ ಹಾಕುವ ಮೂಲಕ ವಿಶಿಷ್ಟವಾಗಿ ಉದ್ಘಾಟನೆ ನೆರವೇರಿಸಿದರು. ಮಾತನಾಡಿದ ಅವರು, ತಮ್ಮ ಬಾಲ್ಯದ ಕ್ರೀಡಾ ಅನುಭವವನ್ನು ಹಂಚಿಕೊಂಡು, “ನಾನು ಕೂಡ ವಾಲಿಬಾಲ್ ಕ್ರೀಡಾಪಟುವಾಗಿದ್ದೆ. ಮಕ್ಕಳಿಗೆ ದೈಹಿಕ ಅಭ್ಯಾಸ ಮತ್ತು ಕ್ರೀಡೆಗಳಲ್ಲಿ ಭಾಗವಹಿಸುವುದು ಶಾರೀರಿಕ ಹಾಗೂ ಮಾನಸಿಕ ಸುಸ್ಥಿತಿಗೆ ಬಹುಮುಖ್ಯ,” ಎಂದು ಸಲಹೆ ನೀಡಿದರು.
ಇದೇ ಸಂದರ್ಭದಲ್ಲಿ, ಬಾಸ್ಕೆಟ್ ಬಾಲ್ ಕ್ಲಬ್ ಅಧ್ಯಕ್ಷ ಕಿರಣ್ ಕುಮಾರ್ ಆರ್. ಮತ್ತು ಎಸ್.ಎಸ್.ಎಂ ಕ್ಲಬ್ ಅಧ್ಯಕ್ಷ ಗಡಿಗುಡಾಳ್ ಮಂಜುನಾಥ್ ಅವರು, ಬಾಸ್ಕೆಟ್ ಬಾಲ್ ಸೆಮಿ ಇಂಡೋರ್ ಕ್ರೀಡಾಂಗಣ ನಿರ್ಮಾಣದ ಅಗತ್ಯತೆಯನ್ನು ವಿವರಿಸಿ ಸಂಸದರಿಗೆ ಮನವಿ ಸಲ್ಲಿಸಿದರು. ಈ ಮನವಿಗೆ ಸ್ಪಂದಿಸಿದ ಡಾ. ಪ್ರಭಾ ಮಲ್ಲಿಕಾರ್ಜುನ್, "ಅವಶ್ಯಕ ಕ್ರಮಗಳನ್ನು ಕೈಗೊಳ್ಳುತ್ತೇವೆ," ಎಂದು ಭರವಸೆ ನೀಡಿದರು.
ಇತ್ತೀಚೆಗಷ್ಟೇ ದಾವಣಗೆರೆಯಲ್ಲಿ ಆಯೋಜಿಸಲಾದ ವಿಭಾಗ ಮಟ್ಟದ ದಸರಾ ಕ್ರೀಡಾಕೂಟದಲ್ಲಿ, ದಾವಣಗೆರೆ ಬಾಸ್ಕೆಟ್ ಬಾಲ್ ಕ್ಲಬ್ನ ಪುರುಷ ಮತ್ತು ಮಹಿಳಾ ತಂಡಗಳು ಪ್ರಥಮ ಸ್ಥಾನ ಗಳಿಸಿದ್ದು, ಸಂಸದೆ ಅವರು ರಾಜ್ಯ ಮಟ್ಟದ ಮೈಸೂರು ದಸರಾ ಕ್ರೀಡಾಕೂಟದಲ್ಲಿ ಉತ್ತಮ ಪ್ರದರ್ಶನ ನೀಡುವಂತೆ ಶುಭ ಹಾರೈಸಿದರು. ಕಾರ್ಯಕ್ರಮದಲ್ಲಿ ದಾವಣಗೆರೆ ಬಾಸ್ಕೆಟ್ ಬಾಲ್ ಕ್ಲಬ್ ಗೌರವಾಧ್ಯಕ್ಷ ಶ್ರೀರಾಮಮೂರ್ತಿ ಸಿ., ಉಪಾಧ್ಯಕ್ಷ ವಿಜಯ್ ಕುಮಾರ್ ಗೌಡ, ಕಾರ್ಯದರ್ಶಿ ವೀರೇಶ್ ಆರ್., ತರಬೇತುದಾರ ದರ್ಶನ್ ಆರ್. ಮತ್ತು ಇತರ ಎಲ್ಲಾ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
