ವರದಿಗಾರರು :
ಬಲರಾಮ್ ವಿ. ||
ಸ್ಥಳ :
ಕೆ ಆರ್ ಪುರ
ವರದಿ ದಿನಾಂಕ :
26-11-2025
ಸರ್ಕಾರಿ ನೌಕರರ ಸಬಲೀಕರಣಕ್ಕೆ ಸಂಘಟನೆಯೇ ಬಲ: ಕೆ.ಆರ್.ಪುರದಲ್ಲಿ ಪೂರ್ವ ತಾಲ್ಲೂಕು ನೌಕರರ ವಾರ್ಷಿಕ ಸಭೆ
ಕೆ.ಆರ್.ಪುರ: “ನೌಕರರಿಗೆ ದೊರೆಯಬೇಕಾದ ಸೌಲಭ್ಯಗಳನ್ನು ಪಡೆಯಲು ಸಂಘಟಿತ ಶಕ್ತಿ ಅತ್ಯಗತ್ಯ,” ಎಂದು ದಕ್ಷಿಣ ವಲಯದ ಶಿಕ್ಷಣ ಅಧಿಕಾರಿ ಸಿ.ಎನ್. ಗೋವಿಂದಪ್ಪ ಹೇಳಿದರು. ಕೆಆರ್.ಪುರ ಬಿಇಒ ಕಚೇರಿಯಲ್ಲಿ ನಡೆದ ಪೂರ್ವ ತಾಲ್ಲೂಕು ನೌಕರರ ಸಂಘದ 2024–25ರ ಸರ್ವ ಸದಸ್ಯರ ವಾರ್ಷಿಕ ಸಭೆಯಲ್ಲಿ ಅವರು ಮಾತನಾಡಿದರು.
ಪೂರ್ವ ತಾಲ್ಲೂಕಿನಲ್ಲಿ 33 ಇಲಾಖೆಗಳಿದ್ದು 2,200ಕ್ಕೂ ಅಧಿಕ ಸರ್ಕಾರಿ ನೌಕರರಿದ್ದಾರೆ. ಇವರನ್ನೆಲ್ಲ ಒಂದೇ ವೇದಿಕೆಯಲ್ಲಿ ಸಂಘಟಿಸುವ ಕೆಲಸಕ್ಕೆ ಎಲ್ಲರ ಸಹಕಾರ ಅಗತ್ಯವಿದ್ದು, “ಸಂಘಟನೆಯ ಬಲದಿಂದ ನೌಕರರ ಸಮಸ್ಯೆ–ಸಾಧಕ–ಬಾಧಕಗಳನ್ನು ಚರ್ಚಿಸಿ ಪರಿಣಾಮಕಾರಿ ಅಭಿವೃದ್ಧಿ ಚಟುವಟಿಕೆಗಳನ್ನು ಕೈಗೊಳ್ಳಬಹುದು,” ಎಂದು ಹೇಳಿದರು.
ಸಭೆಯಲ್ಲಿ ಮಾತನಾಡಿದ ಸಂಘದ ಅಧ್ಯಕ್ಷ ಎಂ. ಕನ್ಯಾಗಪ್ಪ, “ಕರ್ನಾಟಕ ರಾಜ್ಯ ನೌಕರರ ಸಂಘಕ್ಕೆ ಮೀಸಲಾದ ಜಾಗದಲ್ಲಿ ಮಹಿಳೆಯರಿಗಾಗಿ ಸಂತ್ವಾನ ಕೇಂದ್ರ ತೆರೆಯುವ ಅಗತ್ಯ ಇದೆ. ಕೆ.ಆರ್.ಪುರದಲ್ಲಿ ಮಹಿಳಾ ನೌಕರರ ಸಂಖ್ಯೆ ಹೆಚ್ಚಿದೆ,” ಎಂದು ತಿಳಿಸಿದರು. ಇದೇ ವೇಳೆ ನಿವೃತ್ತ ನೌಕರರಿಗೆ ಸನ್ಮಾನ, ನೌಕರರಿಗಾಗಿ ಕ್ರೀಡಾಕೂಟ ಹಾಗೂ ಮುಂದಿನ ವರ್ಷ ಮಕ್ಕಳಿಗೂ ಕ್ರೀಡಾಕೂಟ ಆಯೋಜಿಸುವ ಯೋಜನೆಗಳ ಬಗ್ಗೆ ಮಾಹಿತಿ ನೀಡಿದರು. ಕಾರ್ಯಕ್ರಮದಲ್ಲಿ ಎಂ. ಅಮರೇಶ್, ಟಿ. ಭಾಗ್ಯಮ್ಮ, ಉಮಾದೇವಿ, ಡಿ. ಪ್ರಕಾಶ್, ಮುನಿರಾಜು, ಶಿವಣ್ಣ, ವೆಂಕಟಸ್ವಾಮಿ, ರಾಜಕುಮಾರ್, ಸುರೇಶ್, ಚೆನ್ನಬಸಪ್ಪ ಸೇರಿದಂತೆ ಹಲವರು ಉಪಸ್ಥಿತರಿದ್ದರು.
