ವರದಿಗಾರರು :
ಬಸವರಾಜ ಪೂಜಾರಿ, ||
ಸ್ಥಳ :
ಬೀದರ
ವರದಿ ದಿನಾಂಕ :
03-11-2025
ಬೀದರದಲ್ಲಿ ನಗರದ ಜನವಾಡ ರಸ್ತೆಯಲ್ಲಿ ಅಕ್ರಮ ಒತ್ತುವರಿ ತೆರವು – ಕೋಟ್ಯಂತರ ಮೌಲ್ಯದ ಭೂಮಿಯನ್ನು ವಶಪಡಿಸಿಕೊಂಡ�
ಬೀದರ ನಗರಸಭೆ ಅಧಿಕಾರಿಗಳು, ಬೀದರ ವೈದ್ಯಕೀಯ ವಿಜ್ಞಾನ ಸಂಸ್ಥೆಯ ನೌಕರರ ವಸತಿ ಗೃಹಗಳಿಗೆ ಸೇರಿದ ಖಾಲಿ ಭೂಮಿಯನ್ನು ಸಾರ್ವಜನಿಕರು ಅಕ್ರಮವಾಗಿ ಅತಿಕ್ರಮಿಸುತ್ತಿರುವ ಬಗ್ಗೆ ಮಾಹಿತಿ ಪಡೆದರು. ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ ಅವರ ಆದೇಶದಂತೆ, ಇಂದು ಬೆಳಿಗ್ಗೆ ಪೊಲೀಸ್ ಬಿಗಿ ಭದ್ರತೆಯೊಂದಿಗೆ ನಗರಸಭೆ ಸಿಬ್ಬಂದಿ JCB ಮೂಲಕ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಿದರು.
ಈ ಕಾರ್ಯಾಚರಣೆಯ ಮೂಲಕ ಸರ್ಕಾರದ ಕೋಟ್ಯಾಂತರ ಮೌಲ್ಯದ ಭೂಮಿಯನ್ನು ವಶಪಡಿಸಿಕೊಂಡು, ನಿಯಮಬದ್ಧವಾಗಿ ಅದನ್ನು ಸುರಕ್ಷಿತಗೊಳಿಸಲಾಗಿದ್ದು, ಬೀದರ ಜನರು ಮತ್ತು ಅಧಿಕಾರಿಗಳು ಈ ಕಾರ್ಯವನ್ನು ಶ್ಲಾಘನೆ ಮಾಡಿದರು.
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
