ವರದಿಗಾರರು :
ಎಚ್ ಎಮ್ ಹವಾಲ್ದಾರ ||
ಸ್ಥಳ :
ಯಾದಗಿರಿ
ವರದಿ ದಿನಾಂಕ :
01-12-2025
ಯಾದಗಿರಿ ಜಿಲ್ಲೆಯ ವನವಾಸಿ ಕಲ್ಯಾಣ ಕಾರ್ಯಕರ್ತರ ಮಾಸಿಕ ಸಭೆಯನ್ನು ಹಮ್ಮಿಕೊಳ್ಳಲಾಗಿತ್ತು
ದಿನಾಂಕ 30 ನವಂಬರ್ ರಂದು ಬೆಳಿಗ್ಗೆ 11 ಗಂಟೆಗೆ ಸುರಪುರ ತಾಲೂಕಿನ ಶಾಂತಪುರ ಕ್ರಾಸ್ ಏಕಲವ್ಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಳ್ಳಲಾಗಿತ್ತು, ವನವಾಸಿ ಕಲ್ಯಾಣ ರಾಜ್ಯಸಹ ಕಾರ್ಯದರ್ಶಿಗಳಾದ ಶ್ರೀ ಗಂಗಾಧರ ನಾಯಕ ತಿಂಥಣಿ, ರಾಜ್ಯ ಹಿತ ರಕ್ಷಾ ಪ್ರಮುಖರಾದ ಶ್ರೀ ಕಾಶಪ್ಪ ದೊರೆ ಯಾದಗಿರಿ, ರಾಜಾ ಪಿಡ್ಡ ನಾಯಕ ನಗರ ಸಮಿತಿಯ ಅಧ್ಯಕ್ಷರು ಸುರುಪುರ, ಶ್ರೀ ಶಿವರಾಜ್ ದೊರೆ ಶ್ರೀ ಪರಮಣ್ಣ ಕಕ್ಕೆರ ಶ್ರೀ ಭೀಮಾಶಂಕರ್ ಮೇಟಿ, ಶ್ರೀ ಸಿದ್ದಪ್ಪ ರಾಮಸಮುದ್ರ, ಮತ್ತು ಪ್ರವಾಸಿ ಕಾರ್ಯಕರ್ತರು ಆಚಾರ್ಯರು ಹೊಲಿಗೆ ತರಬೇತಿ ಶಿಕ್ಷಕರು ಕಂಪ್ಯೂಟರ್ ತರಬೇತಿ ಶಿಕ್ಷಕರು ಹಾಗೂ ನಗರ ಸಮಿತಿ ಮತ್ತು ಜಿಲ್ಲಾ ಸಮಿತಿಯ ಪದಾಧಿಕಾರಿಗಳು ಭಾಗವಹಿಸಿದ್ದರು
ಶಿಬಿರ ಗೀತೆಯನ್ನು ಹಾಡುವ ಮೂಲಕ ಹಾಗೂ ಜ್ಯೋತಿ ಬೆಳಗಿಸುವ ಮೂಲಕ ಸಭೆಯನ್ನು ಪ್ರಾರಂಭ ಮಾಡಲಾಯಿತು ಬಾಳಾಸಾಹಬ ದೇಶಪಾಂಡೆ ಜಿ ಅವರ ಸ್ಮಾರಕ ಭವನ ನಿಧಿ ಸಂಗ್ರಹ ಹಾಗೂ ಈ ತಿಂಗಳಲ್ಲಿ ನಡೆಸಿದ ವಿಶೇಷ ಕಾರ್ಯಕ್ರಮದ ಬಗ್ಗೆ ವರದಿಯನ್ನು ಪಡೆಯಲಾಯಿತು ಈ ಸಂದರ್ಭದಲ್ಲಿ 35 ಮಕ್ಕಳು ವನವಾಸಿ ಕಲ್ಯಾಣ ಆಶ್ರಮ ಕಾರ್ಯ ಕರ್ತರು ಭಾಗವಹಿಸಿದ್ದರು
