ವರದಿಗಾರರು :
ಮೀನಾಕ್ಷಿ ರಮೇಶ್ ರಾಠೋಡ್ ||
ಸ್ಥಳ :
ಬೆಂಗಳೂರು
ವರದಿ ದಿನಾಂಕ :
25-03-2025
ಬಿಗ್ ಬಾಸ್ ಮಾಜಿ ಸ್ಪರ್ಧಿಗಳಾದ ವಿನಯ್, ರಜತ್ ಬಂಧನ ಕೇಸ್‌ಗೆ ಟ್ವಿಸ್ಟ್: ಮಧ್ಯರಾತ್ರಿಯೇ ಇಬ್ಬರೂ ರಿಲೀಸ್�
ಬಿಗ್ ಬಾಸ್ ಮಾಜಿ ಸ್ಪರ್ಧಿಗಳಾದ ವಿನಯ್ ಮತ್ತು ರಜತ್ ಬಂಧನ ಕೇಸ್‌ಗೆ ಟ್ವಿಸ್ಟ್ ಸಿಕ್ಕಿದೆ. ನಿನ್ನೆ ಮಧ್ಯಾಹ್ನ ಅರೆಸ್ಟ್ ಆಗಿದ್ದ ಇಬ್ಬರೂ ಮಧ್ಯರಾತ್ರಿಯೇ ಬಿಡುಗಡೆಯಾಗಿದ್ದಾರೆ.
ಇಬ್ಬರೂ ಲಾಂಗ್ ಹಿಡಿದು ರೀಲ್ಸ್ ಮಾಡಿದ್ದರು. ಸಿನಿಮೀಯ ಶೈಲಿಯಲ್ಲಿ ವೀಡಿಯೋ ಮಾಡಿ ಪೋಸ್ಟ್ ಮಾಡಿದ್ದರು. ಬಸವೇಶ್ವರ ನಗರ ಪೊಲೀಸರು ಇಬ್ಬರಿಗೂ ನೋಟಿಸ್ ನೀಡಿ ವಿಚಾರಣೆಗೆ ಬರುವಂತೆ ಸೂಚಿಸಿದ್ದರು. ಬಳಿಕ ಇಬ್ಬರನ್ನೂ ಬಂಧನಕ್ಕೆ ಒಳಪಡಿಸಲಾಗಿತ್ತು.
ನಿನ್ನೆ ಮಧ್ಯಾಹ್ನ ಬಂಧಿಸಿ, ಮಧ್ಯರಾತ್ರಿ ಬಿಡುಗಡೆ ಮಾಡಿರುವುದು ಪ್ರಶ್ನೆ ಹುಟ್ಟುಹಾಕಿದೆ. ಬಂಧನ ಮಾಡಿದ ಬಳಿಕ ಸ್ಟೇಷನ್ ಬೇಲ್ ಕೊಡಬೇಕು, ಇಲ್ಲದೇ ಹೋದರೆ ಕೋರ್ಟ್ ಬೇಲ್ ಆಗಬೇಕು. ತಡರಾತ್ರಿ ನೋಟಿಸ್ ಕೊಟ್ಟು ಆರೋಪಿಗಳಾದ ವಿನಯ್, ರಜತ್‌ನನ್ನ ಪೊಲೀಸರು ಕಳುಹಿಸಿದ್ದಾರೆ. ಆರೋಪಿಗಳಿಗೆ ಪೊಲೀಸರೇ ಶರಣಾದರೆ ಎಂಬ ಮಾತು ಕೇಳಿಬರುತ್ತಿದೆ.
ಶಸ್ತ್ರಾಸ್ತ್ರ ಕಾಯ್ದೆಯಡಿ ಇಬ್ಬರನ್ನೂ ಪೊಲೀಸರು ಬಂಧಿಸಿದ್ದರು. ಆದರೆ, ತಾವು ರೀಲ್ಸ್‌ಗೆ ಬಳಸಿರುವುದು ಫೈಬರ್ ಮಚ್ಚು ಎಂದು ಪೊಲೀಸರಿಗೆ ತಿಳಿಸಿದ್ದಾರೆ. ರೀಲ್ಸ್‌ನಲ್ಲಿ ಬಳಸಿದ್ದ ಮಚ್ಚನ್ನು ಆರೋಪಿಗಳು ಪೊಲೀಸರಿಗೆ ಒಪ್ಪಿಸಿದ್ದಾರೆ. ಆರೋಪಿಗಳ ಮಾತನ್ನೇ ನಂಬಿ ಫೈಬರ್ ಮಚ್ಚು ಎನ್ನುವ ನಿರ್ಧಾರಕ್ಕೆ ಪೊಲೀಸರು ಬಂದಿದ್ದಾರೆ.
ಬೆಳಗ್ಗೆ 10:30 ಕ್ಕೆ ಬರುವಂತೆ ನೋಟಿಸ್ ನೀಡಿ ಆರೋಪಿಗಳನ್ನು ಪೊಲೀಸರು ಕಳುಹಿಸಿದ್ದರು. ಸಾಮಾನ್ಯ ಜನರು ಇದ್ದಿದ್ದರೆ ಇದೇ ರೀತಿ ಮಾಡುತ್ತಿದ್ದರಾ ಪೊಲೀಸರು ಎಂಬ ಪ್ರಶ್ನೆ ವ್ಯಕ್ತವಾಗಿದೆ.
