ವರದಿಗಾರರು :
ಮುತ್ತುರಾಜ ||
ಸ್ಥಳ :
ಕೊರಟಗೆರೆ.
ವರದಿ ದಿನಾಂಕ :
09-11-2025
ಕೊಟ್ಟ ಮಾತು ಉಳಿಸಿಕೊಂಡ ಗೃಹಸಚಿವ ಡಾ.ಜಿ.ಪರಮೇಶ್ವರ್ — ಕೊರಟಗೆರೆ ಈಗ ಪುರಸಭೆ!
ಕೊರಟಗೆರೆ ಪಟ್ಟಣ ಪಂಚಾಯಿತಿಯನ್ನ ಪುರಸಭೆಯಾಗಿ ಮೇಲ್ದರ್ಜೆಗೇರಿಸುವ ಮಹತ್ವದ ನಿರ್ಧಾರವನ್ನು ರಾಜ್ಯ ಸಚಿವ ಸಂಪುಟ ಗುರುವಾರದ ಸಭೆಯಲ್ಲಿ ಕೈಗೊಂಡಿದೆ. ಈ ಮೂಲಕ ಕೊರಟಗೆರೆ ಪಟ್ಟಣದ ದೀರ್ಘಕಾಲದ ಕನಸಿಗೆ ಗೃಹಸಚಿವ ಮತ್ತು ಸ್ಥಳೀಯ ಶಾಸಕ ಡಾ.ಜಿ.ಪರಮೇಶ್ವರ್ ಅವರು ಜೀವ ತುಂಬಿದ್ದಾರೆ.
ಸಾಕಷ್ಟು ವರ್ಷಗಳಿಂದ ನೆನಗುದಿಗೆ ಬಿದ್ದಿದ್ದ ಪುರಸಭೆ ಆಗುವ ಪ್ರಸ್ತಾವನೆಗೆ ಡಾ.ಪರಮೇಶ್ವರ್ ಅವರ ತಾಳ್ಮೆ, ಶ್ರಮ ಮತ್ತು ಸ್ಥಳೀಯ ಜನರ ಬೇಡಿಕೆ ಫಲವಾಗಿ ಸರ್ಕಾರದ ಅನುಮೋದನೆ ದೊರೆತಿದೆ.
ಪುರಸಭೆಯಾಗಿ ಮೇಲ್ದರ್ಜೆಗೊಂಡ ಬಳಿಕ ಕೊರಟಗೆರೆ ಪಟ್ಟಣದ ವ್ಯಾಪ್ತಿ ವಿಸ್ತಾರಗೊಂಡು, ನಗರ ಪ್ರದೇಶಕ್ಕೆ 13 ಹತ್ತಿರದ ಗ್ರಾಮಗಳು ಸೇರಲಿವೆ. ಈ ಗ್ರಾಮಗಳಿಗೆ ರಸ್ತೆ, ನೀರು, ಚರಂಡಿ, ಸ್ವಚ್ಛತೆ, ಬೆಳಕು ಸೇರಿದಂತೆ ಮೂಲಸೌಕರ್ಯ ಸೌಲಭ್ಯಗಳು ದೊರಕಲಿವೆ. ಜೊತೆಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಹೆಚ್ಚಿನ ಅನುದಾನ ಹರಿದು ಬರಲಿದೆ. ಭೂಮಿಯ ಬೆಲೆಗಳು ಏರಿಕೆ ಕಂಡು ಸ್ಥಳೀಯ ಆರ್ಥಿಕ ಚಟುವಟಿಕೆಗಳು ಚುರುಕುಗೊಳ್ಳಲಿವೆ ಎಂದು ಸ್ಥಳೀಯರು ಸಂತಸ ವ್ಯಕ್ತಪಡಿಸಿದ್ದಾರೆ.
ಹೂಲೀಕುಂಟೆ, ದೇವರಹಳ್ಳಿ, ಹೊಸಹಳ್ಳಿ, ಕಾಮೇನಹಳ್ಳಿ, ಓಬಳದೇವರಹಳ್ಳಿ, ಗುಂಡಿನಪಾಳ್ಯ, ಚಿಕ್ಕೇಗೌಡನಹಳ್ಳಿ, ಕಾಮರಾಜನಹಳ್ಳಿ, ಕಂಬದಹಳ್ಳಿ, ಬೋಡಬಂಡೇನಹಳ್ಳಿ, ಮಲ್ಲೇಪುರ, ಜಂಪೇನಹಳ್ಳಿ, ಕಲ್ಲಗುಟ್ಟರಹಳ್ಳಿ ಹಾಗೂ ಅಗ್ರಹಾರ ಪ್ರದೇಶಗಳು ಸೇರಲಿವೆ ಎಂದು ಸರ್ಕಾರದ ಆದೇಶದಲ್ಲಿ ತಿಳಿಸಲಾಗಿದೆ.
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
