ವರದಿಗಾರರು :
ಎಚ್ ಎಮ್ ಹವಾಲ್ದಾರ ||
ಸ್ಥಳ :
ಯಾದಗಿರಿ
ವರದಿ ದಿನಾಂಕ :
10-11-2025
ವಡಗೇರಾ ಗ್ರಾಮ ಪಂಚಾಯತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಿಲು ಕರವೇ ಆಗ್ರಹ
ಯಾದಗಿರಿ ಜಿಲ್ಲೆಯ ವಡಗೇರಾ ಪಟ್ಟಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಅಧ್ಯಕ್ಷರಾದ ಅಬ್ದುಲ್ ಚಿಗನೂರ್ ಅವರ ನೇತೃತ್ವದಲ್ಲಿ
ವಡಗೇರಾ ಗ್ರಾಮ ಪಂಚಾಯತಿಯನ್ನು ಪಟ್ಟಣ ಪಂಚಾಯಿತಿಯನ್ನಾಗಿ ಮೇಲ್ದರ್ಜೆಗೇರಿಸಬೇಕೆಂದು ಬೃಹತ್ ರಸ್ತೆ ತಡೆದು ಪ್ರತಿಭಟನೆ ಮಾಡಲಾಯಿತು
ಈ ಸಂದರ್ಭದಲ್ಲಿ ತಹಶೀಲ್ದಾರ್ ಪರವಾಗಿ ಉಪ ತಹಸೀಲ್ದಾರರಾದ ಶ್ರೀ ಪ್ರಕಾಶ್ ಹೊಸಮನಿ ಇವರಿಗೆ ಮನವಿ ಪತ್ರ ಸ್ವೀಕರಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಉಪಾಧ್ಯಕ್ಷರಾದ ಚೌಡಯ್ಯ ಬಾವುರ್ ಹಾಗೂ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಹನುಮಂತ್ ತೆಕರಾಳ, ಶಿವರಾಜ ನಾಡಗೌಡ ,ಬಸಯ್ಯಸ್ವಾಮಿ ಉಲ್ಲೇಸುಗೂರು,ಸಿದ್ದು ಪೂಜಾರಿ,ಸತೀಶ್ ಜಡಿ, ಬಸವರಾಜ ಕೊದ್ದಡ್ಡಿ. ದೇವು ಬುಸೇನಿ,ಶ್ರೀನಿವಾಸ್ ಮಡಿವಾಳ,ಪೀರಸಾಬ್ ಮರಡಿ,ಮಹಮ್ಮದ್ ಕತಾಲಿ ,ಮಲ್ಲು ಜಡಿ,ಪೀಡಪ್ಪ ನಾಯಕ್ ,ಸಾಬರೆಡ್ಡಿ ಹೊರಟೂರ , ದೇವು ವಿಶ್ವಕರ್ಮ,ಬಸ್ಸು ಬುಸೇನಿ.ಶರಣು ತುಮಕೂರು, ಸಿದ್ದು ಸುಣಗಾರ,ಶಿವು ಶಿವಪುರ, ಸುರೇಶ್ ವಿಶ್ವಕರ್ಮ,ರಹಿಮಾನ್ ತುಮಕೂರು ,ಮಾಳಪ್ಪ ಹೈಯ್ಯಾಳ ಜುಬಲಪ್ಪ ಕಟ್ಟಿಮನಿ, ರಫಿ ಉಲ್ಲೇಸುಗೂರು,ಭೀಮರಾಯ ಕ್ಯಾತ್ನಾಳ, ಮಲ್ಲು ಪಾಟೀಲ್ ಟೋಕಾಪುರ,ಹಾಗೂ ಕರ್ನಾಟಕ ರಕ್ಷಣಾ ವೇದಿಕೆ ತಾಲೂಕು ಪದಾಧಿಕಾರಿಗಳು ಮತ್ತು ಗ್ರಾಮ ಘಟಕದ ಪದಾಧಿಕಾರಿಗಳು ಹಾಜರಿದ್ದರು.
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
