ವರದಿಗಾರರು :
ಡಾ. ಜ್ಯೋತಿ ||
ಸ್ಥಳ :
ತುಮಕೂರು
ವರದಿ ದಿನಾಂಕ :
19-09-2025
ಬಿಗ್ ಬಾಸ್ ಖ್ಯಾತಿಯ ರಂಜಿತ್ ಹಾಗೂ ಸೋದರಿ ರಶ್ಮಿ ನಡುವೆ ಆಸ್ತಿ ರಂಪಾಟ ಪೊಲೀಸ್ ಠಾಣೆ ಮೆಟ್ಟಿಲೇರಿದೆ
ರಂಜಿತ್ ಹಾಗೂ ಸೋದರಿ ರಶ್ಮಿ ನಡುವೆ ಆಸ್ತಿ ರಂಪಾಟ ಶುರುವಾಗಿದ್ದು, ಪೊಲೀಸ್ ಠಾಣೆಯಲ್ಲಿ ಕೇಸ್ ದಾಖಲಿಸಿದ್ದಾರೆ. ಆ ಕುರಿತ ಸ್ಟೋರಿ ಇಲ್ಲಿದೆ. , ಅಕ್ಕ ತಮ್ಮನ ನಡುವೆ ಪ್ರಾಪರ್ಟಿ ವಿಚಾರಕ್ಕೆ ಸಂಬಂಧಿಸಿದಂತೆ ದೊಡ್ಡ ಜಗಳವೇ ನಡೆಯುತ್ತಿದೆ.
ಬಿಗ್ ಬಾಸ್ ಸ್ಪರ್ಧಿ ರಂಜಿತ್ ಬೆಂಗಳೂರಿನ ಅಮೃತಹಳ್ಳಿಯ ಪಂಪಾ ಎಕ್ಸಟೆನ್ಷನ್ ನಲ್ಲಿರೋ ಸಾಯಿ ಫ್ಯಾರಡೈಸ್ ಎಂಬ ಅಪಾರ್ಟ್ಮೆಂಟ್ ನಲ್ಲಿ ಒಂದ್ ಪ್ಲಾಟ್ ಅನ್ನ ಕೆಲ ವರ್ಷಗಳಿಂದ ಖರೀದಿ ಮಾಡಿದ್ದರಂತೆ. ಪ್ಲಾಟ್ ಖರೀದಿಗೆ ಬ್ಯಾಂಕ್ ಲೋನ್ ತನಗೆ ಆಗೋದಿಲ್ಲ ಅನ್ನೋದು ಗೊತ್ತಾದ ಬಳಿಕ ತನ್ನ ಸೋದರಿ ಹೆಸ್ರಿಗೆ ದಾಖಲೆಗಳನ್ನ ಮಾಡಿಸಿದ್ರಂತೆ. ಆದ್ರೆ, ಈಗ ಆ ಪ್ಲಾಟ್ ನನ್ನದೇ ನಿನಗೆ ಯಾವುದೇ ಭಾಗವಿಲ್ಲ ಅಂತ ರಂಜಿತ್ ಸೋದರಿ ರಶ್ಮಿ ಉಲ್ಟಾ ಹೊಡೆದಿದ್ದಾಳಂತೆ..
ಇನ್ನು ಇತ್ತೀಚೆಗೆ ಪ್ರಾಪರ್ಟಿ ಶೇರ್ ವಿಚಾರ ಸಂಬಂಧಿಸಿದಂತೆ ಕೇಳೋದಕ್ಕೆ ಹೋದ್ರೆ ರಂಜಿತ್ ಹಾಗೂ ಆತನ ಪತ್ನಿಯ ಮೇಲೆ ಜಗಳ ತೆಗೆದ ರಂಜಿತ್ ಸೋದರಿ ರಶ್ಮಿ, ರಂಜಿತ್ ಪತ್ನಿಗೆ ನೀನು ವರದಕ್ಷಿಣೆ ತಂದಿಲ್ಲ, ನನ್ನ ಮನೆಗೆ ಬಂದು ಬಿದ್ದಿದ್ದೀಯ, ಬಿಕಾರಿ ಹಾಗೆ ಹೀಗ ಅಂತೆಲ್ಲಾ ಬಾಯಿಗೆ ಬಂದಂತೆ ನಿಂದಿಸಿ, ಕಿರಿಕ್ ಮಾಡಿದ್ದಾಳಂತೆ.
ಪೊಲೀಸ್ ಠಾಣೆ ಮೆಟ್ಟಿಲೇರಿದ ಬಿಗ್ ಬಾಸ್ ರಂಜಿತ್ ಪ್ರಾಪರ್ಟಿ ವಿಚಾರ ಸೋದರನ ಮೇಲೆಯೇ ಕೇಸ್ ದಾಖಲಿಸಿದ ರಂಜಿತ್ ಸೋದರಿ ರಶ್ಮಿ ಬಿಗ್ ಬಾಸ್ ಸ್ಪರ್ಧಿ ರಂಜಿತ್ ಪತ್ನಿ, ರಂಜಿತ್ ಅಕ್ಕನ ಮಧ್ಯೆ ಜಗಳ..! ಕುಟುಂಬದಲ್ಲಿನ ಆಸ್ತಿ ವಿಚಾರವಾಗಿ ಜಗಳ ಬೀದಿಗೆ ಬಂದ ಬಿಗ್ಬಾಸ್ ಸ್ಪರ್ಧಿ ಮನೆ ಜಗಳ ಚಪ್ಪರ್, ಭಿಕಾರಿ ಬೈಗುಳ.. ಎಲ್ಲಾ ಚಿತ್ರೀಕರಣ..! ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಪೊಲೀಸ್ ಠಾಣೆ ಮೆಟ್ಟಿಲೇರಿದ ಪ್ರಾಪರ್ಟಿ ಕಿತ್ತಾಟ ಸೋದರನ ಮೇಲೆಯೇ ಕೇಸ್ ದಾಖಲಿಸಿದ ರಶ್ಮಿ
