ವರದಿಗಾರರು :
ರಾಜಶೇಖರ ಮಾಲಿಪಾಟೀಲ ||
ಸ್ಥಳ :
ಶಹಾಪುರ
ವರದಿ ದಿನಾಂಕ :
14-04-2025
*ಕಕ್ಕಸಗೇರಾ ಕ್ರಿಕೆಟ್ ಪ್ರೀಮಿಯರ್ ಲೀಗ್ ನಾಲ್ಕನೇ ಪೈನಲ್ ಪಂದ್ಯಾವಳಿ*
ದಿ.13/04/2025 ರವಿವಾರದಂದು ಫೈನಲ್ ಪಂದ್ಯದಲ್ಲಿ ವಿಲೇಜ್ ವಾರಿಯರ್ಸ್ ವಿರುದ್ಧ ಗ್ರಾಮ ದೇವತೆ ಕ್ರೀಕೆಟ್ ಕ್ಲಬ್ 57 ರನ್ನಗಳಿಂದ ಪೈನಲ್ ಪಂದ್ಯ ಭರ್ಜರಿ ಗೆಲುವುಕಂಡಿತು. ಪೈನಲ್ ಪಂದ್ಯಾವಳಿಯಲ್ಲಿ ಉತ್ತಮ ಪ್ರದರ್ಶನ ನೀಡಿದ ಸಂಜೀವಪ್ಪ ಪೂಜಾರಿ ಪೋಲಿಸ್ ವೃತ್ತಿ ಅವರ ಪಂದ್ಯ ಪುರುಷೋತ್ತಮ, ಹಾಗೂ ಸರಣಿ ಸರ್ವೋತ್ತಮ ಪ್ರಶಸ್ತಿಗೆ ಭಾಜನರಾದರು... ಪ್ರಥಮ ಬಹುಮಾನ 25000/ ರೂಪಾಯಿ ಹಾಗೂ ಟ್ರೋಫಿ ಕಕ್ಕಸಗೇರಾ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಹಾಗೂ ಜೆಡಿಎಸ್ ಪಕ್ಷದ ಮುಖಂಡ ಶೇಖರ್ ದೊರೆಯವರು ತಮ್ಮ ತಂದೆಯ ಸ್ಮರಣಾರ್ಥವಾಗಿ ಜಯಶಾಲಿಗಳಿಗೆ ಬಹುಮಾನ ನೀಡಿದರು.
ದ್ವೀತಿಯ ಬಹುಮಾನವಾಗಿ ರನ್ನರ್ ಅಪ್ ತಂಡಕ್ಕೆ ಹಾಲಿ ಗ್ರಾಂ ಪಂಚಾಯಿತಿ ಅಧ್ಯಕ್ಷ ದೇವಣ್ಣಗೌಡ ಪೋಲಿಸ್ ಪಾಟೀಲ್ ಅವರ ಅವರ ತಂದೆ ಲಕ್ಕಣ್ಣಗೌಡ ಪೋಲಿಸ್ ಪಾಟೀಲ್ ಅವರ ಸ್ಮರಣಾರ್ಥವಾಗಿ 15000/ ಸಾವಿರ ಬಹುಮಾನ ಮೊತ್ತ ಹಾಗೂ ಒಂದು ಟ್ರೋಫಿಯನ್ನು ನೀಡಿದರು... ಈ ಸಂದರ್ಭದಲ್ಲಿ ಊರಿನ ವಿವಿಧ ರಾಜಕೀಯ ಮುಖಂಡರು ಹಾಗೂ ಭೀಮಣ್ಣ ಗೋಗಿ, ಭೀಮರಾಯ ಪೂಜಾರಿ, ಮಹಾದೇವಪ್ಪ ಸಾಹುಕಾರ, ಅಮಲಪ್ಪ ಗೌಡ ಬಿರಾದಾರ, ಚಿದಾನಂದ ಬಡಿಗೇರಾ, ರಾಮಣ್ಣ ಗುರೆನರ, ತಿರುಪತಿ ದೊರೆ ಅರಿಕೇರಾ, ತಿಪ್ಪಣ್ಣ ಸಾಹುಕಾರ, ಬಸ್ಸಣ್ಣಗೌಡ ಮೇಟಿ, ಸೂರಪ್ಪ ಗೌಡ, ಮಲ್ಲಣ್ಣ ಕುಂಬಾರ, ಗೋವಿಂದ ಪೂಜಾರಿ, ತಿಪ್ಪಣ್ಣ ದೊಡಮನಿ, ರಾಜು ಗುರೆನರ, ಸುತ್ತಮುತ್ತಲಿನ ಕ್ರೀಡಾ ಪ್ರೇಮಿಗಳು ಹಾಗೂ ಗ್ರಾಮಸ್ಥರು ಯುವಕರು ಪೈನಲ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.....
