ವರದಿಗಾರರು :
ಮೀನಾಕ್ಷಿ ||
ಸ್ಥಳ :
ಬೆಂಗಳೂರು
ವರದಿ ದಿನಾಂಕ :
18-03-2025
ಒಮ್ಮೆ ಬಂದು ನೋಡ್ಕೊಂಡು ಹೋಗು ಕಂದಾ' ಅಪ್ಪುಗಾಗಿ ಕಾಯುತ್ತಿರುವ ಸೋದರತ್ತೆ !
ಪುನೀತ್ ರಾಜ್ಕುಮಾರ್ 50ನೇ ಹುಟ್ಟುಹಬ್ಬದ ಹಿನ್ನೆಲೆ ಅವರ ಸೋದರ ಅತ್ತೆ ನಾಗಮ್ಮ ವಿಶೇಷವಾಗಿ ಬರ್ತ್ಡೇಗೆ ವಿಶ್ ಮಾಡಿದ್ದಾರೆ. ಅಪ್ಪು ನಿನಗೆ 50 ವರ್ಷ ಆಯಿತೇ? ಅಂತಲೂ ಆಶ್ಚರ್ಯಪಟ್ಟಿದ್ದಾರೆ. ಆದರೆ, ನಾಗಮ್ಮಗೆ ಅಪ್ಪು ಇಲ್ಲದೇ ಇರೋದು ಗೊತ್ತೇ ಇಲ್ಲ. ಅಸಲಿ ವಿಚಾರ ತಿಳಿಯದೇ ಅಪ್ಪುಗೆ ವಿಶ್ ಮಾಡಿರುವ ಹಿರಿಯ ಜೀವ ನಾಗಮ್ಮ ವಿಡಿಯೋ ಫ್ಯಾನ್ಸ್ ಪೇಜ್ಗಳಲ್ಲಿ ಇದೀಗ ವೈರಲ್ ಆಗುತ್ತಿದೆ. ನಿನಗೆ 50 ವರ್ಷ ಆಯ್ತಾ..ಅಬ್ಬಾ ಚೆನ್ನಾಗಿದಿಯಾ ಮಗನೇ? ಎಂದಿದ್ದಾರೆ. ನಿನ್ನ ಇನ್ನೂ ಮಗು ಅಂದುಕೊಂಡಿದ್ದೇನೆ ನಾನು. ನನ್ನನ್ನ ಒಂದ್ ಸಾರಿ ಬಂದು ನೋಡ್ಕೊಂಡ್ ಹೋಗು ಕಂದಾ. ನಿನಗೆ 50 ವರ್ಷ ಆಯ್ತಲ್ಲೋ ಎಂದು ಅವರು ಮಾತನಾಡಿದ್ದಾರೆ. ಅಪ್ಪುಗೆ 50 ವರ್ಷ ತುಂಬಿತು ಎಂದು ತಿಳಿದಾಗ ಖುಷಿಯಿಂದ ಸೋದರ ಅತ್ತೆ ನಾಗಮ್ಮ ಶುಭಹಾರೈಸಿದ್ದಾರೆ.
