ವರದಿಗಾರರು :
ಸಂತೋಷ್ ಶೆಟ್ಟಿ ||
ಸ್ಥಳ :
ಬೆಂಗಳೂರು
ವರದಿ ದಿನಾಂಕ :
01-12-2025
ಪ್ರತಿ ವರ್ಷ ಡಿಸೆಂಬರ್ ಒಂದರಂದು ವಿಶ್ವ ಏಡ್ಸ್ ಜಾಗೃತಿ ದಿನವನ್ನಾಗಿ ಆಚರಿಸಲಾಗುತ್ತಿದೆ.
ಮಾನವ ದೇಹದ ರೋಗ ನಿರೋಧಕ ಕಣಗಳನ್ನು ಕ್ಷೀಣಿಸುವ ಸಾಂಕ್ರಾಮಿಕ ರೋಗವನ್ನು 1981 ರಂದು ಅಮೆರಿಕದಲ್ಲಿ ಪತ್ತೆ ಹಚ್ಚಲಾಯಿತು. ಆದರೆ ಅದರ ಕುರಿತು ನಿಖರ ಕಾರಣವನ್ನು ಪತ್ತೆ ಹಚ್ಚಲು ಎರಡು ವರ್ಷಗಳ ಕಾಲ ವಿಶ್ವ ಆರೋಗ್ಯ ಸಂಘಟನೆ ಅವಿರತ ಸಂಶೋಧನೆ ನಡೆಸಿ, 1983 ರಲ್ಲಿ ರೋಗಕ್ಕೆ ಕಾರಣವಾದ ವೈರಾಣುವನ್ನು ಪತ್ತೆ ಹಚ್ಚುವಲ್ಲಿ ಯಶಕಂಡಿತು. ಈ ವೈರನಸ ಕ್ಷಿಪ್ರಗತಿಯಲ್ಲಿ ಮಾನವ ದೇಹದ ರಕ್ತ, ಮೂತ್ರ ,ವೀರ್ಯ ಹಾಗೂ ಕಫಗಳಂತ ದೈಹಿಕ ದ್ರವಗಳ ಮೂಲಕ ಹರಡುತ್ತಿರುವುದನ್ನ ಗಮನಿಸಿದ ಡಾ. ಜೋನಾಟನ್ ಮಾನ್ HIV ಹೆಸರಿನ ರೋಗದ ಕುರಿತು ಜಾಗೃತಿ ಮೂಡಿಸಲು ವಿಶ್ವ ಆರೋಗ್ಯ ಸಂಘಟನೆಗಳಿಗೆ ವರ್ಷ ಒಂದು ದಿನವನ್ನು ಆರೋಗ್ಯ ಜಾಗೃತಿ ದಿನವೆಂದು ಮೀಸಲಿಡಲು ವಿನಂತಿಸಿದ್ದರು.ಅದರ ಫಲವಾಗಿ 1988 ಡಿಸೆಂಬರ್ ಒಂದರಂದು ಮೊದಲ ಜಾರಿಗೆ ವಿಶ್ವದಾದ್ಯಂತ ಎಚ್ ಐ ವಿ ಅಂದರೆ (ಹ್ಯೂಮನ್ ಇಮ್ಯುನೋಡೆಫಿಸಿಯನ್ಸಿ ವೈರಸ್ ) ಹೆಸರಿನ ಏಡ್ಸ ಜಾಗೃತಿ ದಿನವನ್ನಾಗಿ ಅಂತರಾಷ್ಟ್ರೀಯ ಮಟ್ಡದಲ್ಲಿ ಆಚರಿಸಲಾಯಿತು.
ಅಂದಿನಿಂದ ಇಂದಿನವರೆಗೂ ಏಡ್ಸ ಒಂದು ಆಪಾದಿತ ಮತ್ತು ಮಾರಣಾಂತಿಕ ಖಾಯಿಲೆಯಾಗಿ ವ್ಯಾಪಿಸುತ್ತಾ ಬಂದಿದ್ದು ಅದರ ಕುರಿತು ಜಾಗೃತಿ ಮೂಡಿಸುವ ಕಾರ್ಯ ನಿರಂತರವಾಗಿ ಸಾಗುತ್ತಾ ಬಂದಿದೆ. 2024 ರ ವರದಿಯ ಪ್ರಕಾರ ಈವರೆಗೂ ಜಾಗತಿಕವಾಗಿ ಸರಿಸುಮಾರು ಐದು ಕೋಟಿ ಜನರು ಈ ಮಾರಣಾಂತಿಕ ಏಡ್ಸ ಖಾಯಿಲೆಯಿಂದ ಬಳಲುತ್ತಿದ್ದು, ಆರು ಲಕ್ಷದ ಮೊವತ್ತು ಸಾವಿರ ಜನ HIV ಸೋಂಕಿನಿಂದ ಮೃತಪಟ್ಟಿದ್ದಾರೆ.
