ವರದಿಗಾರರು :
ಬಣಕಾರ ಮೂಗಪ್ಪ ||
ಸ್ಥಳ :
ವಿಜಯನಗರ
ವರದಿ ದಿನಾಂಕ :
09-11-2025
ವೇದಿಕೆಯ ಸಭೆಯಲ್ಲಿ ಹೊಸ ಶಕ್ತಿ ಸೇರ್ಪಡೆ
ಹೂವಿನಹಡಗಲಿ: ಕರ್ನಾಟಕ ರಾಜ್ಯ ಮಾಹಿತಿ ಹಕ್ಕು ವೇದಿಕೆಯ ವಿಜಯನಗರ ಜಿಲ್ಲಾ ಘಟಕದ ಮಾಸಿಕ ಸಭೆ ಇಂದು ಹೂವಿನಹಡಗಲಿ ತಾಲೂಕಿನ ಪ್ರವಾಸಿ ಮಂದಿರದಲ್ಲಿ ಯಶಸ್ವಿಯಾಗಿ ನೆರವೇರಿತು. ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷ ಹೆಚ್. ರಾಜನಗೌಡ ವಹಿಸಿದರು. ಸಭೆಯಲ್ಲಿ ಅಜೆಂಡಾದಂತೆ ಸಂಘಟನೆಯ ಬಲವರ್ಧನೆ, ಸದಸ್ಯರ ಸೇರ್ಪಡೆ ಹಾಗೂ ಮಾಹಿತಿ ಹಕ್ಕು ಚಳವಳಿಯ ವಿಸ್ತರಣೆ ಕುರಿತು ಚರ್ಚೆ ನಡೆಯಿತು.
ಜಿಲ್ಲಾ ಕೋರ್ ಕಮಿಟಿಯ ಮಾರ್ಗದರ್ಶನದಲ್ಲಿ ಒಟ್ಟು 16 ಹೊಸ ಸದಸ್ಯರನ್ನು ಜಿಲ್ಲಾ ಸಮಿತಿಗೆ ಆಯ್ಕೆ ಮಾಡಲಾಯಿತು. ಈ ಹೊಸ ಸದಸ್ಯರು ವೇದಿಕೆಯ ಚಟುವಟಿಕೆಗಳಲ್ಲಿ ಶಿಸ್ತು, ನಿಷ್ಠೆ ಹಾಗೂ ಸೇವಾಭಾವದಿಂದ ತೊಡಗಿಸಿಕೊಳ್ಳಬೇಕು ಎಂಬ ವಿಶ್ವಾಸವನ್ನು ಸಭೆಯಲ್ಲಿ ವ್ಯಕ್ತಪಡಿಸಲಾಯಿತು.
ಸಭೆಯಲ್ಲಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮಲ್ಲಿಕಾರ್ಜುನ್ ಎಂ ಮಾತನಾಡಿ, “ಮಾಹಿತಿ ಹಕ್ಕು ವೇದಿಕೆ ಸರ್ಕಾರದ ಸಂವಿಧಾನಿಕ ಅಂಗವಾಗಿ ಗುರುತಿಸಿಕೊಳ್ಳುವ ದಿನ ದೂರದಲ್ಲಿಲ್ಲ. ಎಲ್ಲರೂ ಒಗ್ಗಟ್ಟಿನಿಂದ, ಪ್ರಾಮಾಣಿಕತೆಯಿಂದ ಕೆಲಸ ಮಾಡಿದರೆ ಮಾಹಿತಿ ಹಕ್ಕು ಚಳವಳಿ ಇನ್ನಷ್ಟು ಬಲ ಪಡೆಯಲಿದೆ” ಎಂದು ಹೇಳಿದರು.
ಜಿಲ್ಲಾ ಉಪಾಧ್ಯಕ್ಷರು ಸುರೇಶ್ ಒಳಗುಂದಿ, ಜಿಲ್ಲಾ ಕಾರ್ಯದರ್ಶಿ ಬಿ.ಎಂ. ರುದ್ರಮನಿ, ಉಪಾಧ್ಯಕ್ಷ ವೆಂಕಟೇಶ್, ಸಮಿತಿ ಸದಸ್ಯರು ನಾಗರಾಜ ತೊಗರಿಕಟ್ಟಿ, ರಾಜ ಬಕ್ಷಿ ಹಾಗೂ ಇತರರು ಸಭೆಯಲ್ಲಿ ಭಾಗವಹಿಸಿದರು. ಸಭೆಯ ಉಸ್ತುವಾರಿಯನ್ನು ವಿನೋದ್ ಕುಮಾರ್ ನಿರ್ವಹಿಸಿದರು.
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
