ವರದಿಗಾರರು :
ದರ್ಶನ್ ಎಂ.ಎನ್ ||
ಸ್ಥಳ :
ದಾವಣಗೆರೆ
ವರದಿ ದಿನಾಂಕ :
25-11-2025
ವಾಹನ ಸವಾರರಿಗೆ ಗುಡ್ ನ್ಯೂಸ್: ಇ–ಚಲನ್ ಬಾಕಿ ದಂಡ ಪಾವತಿಗೆ ಶೇ.50 ರಷ್ಟು ರಿಯಾಯಿತಿ!
ದಾವಣಗೆರೆ: ಸಂಚಾರ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಇ–ಚಲನ್ ಮೂಲಕ ಬಾಕಿ ಉಳಿಸಿಕೊಂಡಿರುವ ದಂಡ ಪಾವತಿಗೆ ದಾವಣಗೆರೆ ಪೊಲೀಸ್ ಇಲಾಖೆ ಶೇ.50 ರಷ್ಟು ರಿಯಾಯಿತಿ ನೀಡುವ ವಿಶೇಷ ಅವಕಾಶ ಒದಗಿಸಿದೆ. ಈ ರಿಯಾಯಿತಿ ನವೆಂಬರ್ 21ರಿಂದ ಡಿಸೆಂಬರ್ 12ರವರೆಗೆ ಮಾತ್ರ ಜಾರಿಯಲ್ಲಿದ್ದು, ಬಾಕಿ ದಂಡದ ಅರ್ಧ ಮೊತ್ತವನ್ನೇ ಪಾವತಿಸಿ ಪ್ರಕರಣಗಳನ್ನು ಇತ್ಯರ್ಥಪಡಿಸಿಕೊಳ್ಳಬಹುದು.
ದಂಡ ಪಾವತಿಸುವ ವ್ಯವಸ್ಥೆಗಳು ಸಾಮಾನ್ಯರಿಗೆ ಸುಲಭವಾಗುವಂತೆ ಜಿಲ್ಲೆಯಲ್ಲಿ ವಿವಿಧ ಸ್ಥಳಗಳಲ್ಲಿ ದಂಡ ಪಾವತಿಸಲು ಅವಕಾಶ ಕಲ್ಪಿಸಲಾಗಿದೆ: 1️⃣ ಪೋಸ್ಟ್ ಆಫೀಸ್‌ಗಳು ಸಮೀಪದ ಯಾವುದೇ ಪೋಸ್ಟ್ ಆಫೀಸ್‌ಗೆ ಭೇಟಿ ನೀಡಿ ಇ–ಚಲನ್ ದಂಡ ಪಾವತಿ. 2️⃣ ಪೊಲೀಸ್ ಠಾಣೆಗಳು ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ನಿಮ್ಮ ವಾಹನದ ಬಾಕಿ ಇ–ಚಲನ್ ಪರಿಶೀಲಿಸಿ ಪಾವತಿಸಲು ಅವಕಾಶ.
ದಾವಣಗೆರೆ ನಗರದಲ್ಲಿ ವಿಶೇಷ ಕೇಂದ್ರಗಳು ಕೆಳಗಿನ ಸ್ಥಳಗಳಲ್ಲಿ ಇರುವ ಸಂಚಾರ ಪೊಲೀಸರ ಬಳಿ ನೇರವಾಗಿ ಪಾವತಿಸಬಹುದು: ಉತ್ತರ ಸಂಚಾರಿ ಪೊಲೀಸ್ ಠಾಣೆ ದಕ್ಷಿಣ ಸಂಚಾರಿ ಪೊಲೀಸ್ ಠಾಣೆ ಆರ್.ಟಿ.ಓ ಕಚೇರಿ ವೃತ್ತ ಎಸಿ ಕಚೇರಿ ವೃತ್ತ ಅರುಣ ವೃತ್ತ ಸಂಚಾರ ವೃತ್ತ ಕಚೇರಿ ಸಂಗೊಳ್ಳಿ ರಾಯಣ್ಣ ವೃತ್ತ ಜಯದೇವ ವೃತ್ತ ಗುಂಡಿ ವೃತ್ತ ನಿಜಲಿಂಗಪ್ಪ ಬಡಾವಣೆ – ಕರ್ನಲ್ ರವೀಂದ್ರನಾಥ ವೃತ್ತ (ಟವರ್ ಕ್ಲಾಕ್) ಹೊಂಡದ ವೃತ್ತ ಲಕ್ಷ್ಮೀ ವೃತ್ತ ಚಾಮರಾಜಪೇಟೆ ವೃತ್ತ ಬಾಡಾ ಕ್ರಾಸ್ ರಾಮ ಅಂಡ್ ಕೋ ವೃತ್ತ ಹೈಸ್ಕೂಲ್ ಮೈದಾನ
ಸಾರ್ವಜನಿಕರಿಗೆ ವಿನಂತಿ ಈ ಸದುಪಯೋಗವು ಕೆಲವೇ ದಿನಗಳು ಮಾತ್ರ ಲಭ್ಯ. ಬಾಕಿ ಇರುವ ಎಲ್ಲಾ ಇ–ಚಲನ್ ಪ್ರಕರಣಗಳನ್ನು ರಿಯಾಯಿತಿಯಲ್ಲಿ ಪಾವತಿಸಿ ಮುಚ್ಚಿಕೊಳ್ಳುವಂತೆ ಪೊಲೀಸ್ ಇಲಾಖೆ ಮನವಿ ಮಾಡಿದೆ.
