ವರದಿಗಾರರು :
ಶರಣಬಸಪ್ಪ ||
ಸ್ಥಳ :
ಗಂಗಾವತಿ
ವರದಿ ದಿನಾಂಕ :
24-11-2025
ಚಿಲ್ಕಮುಖಿ ಗ್ರಾಮದಲ್ಲಿ ಉಚಿತ ಸ್ಯಾನಿಟರಿ ಪ್ಯಾಡ್ ವಿತರಣೆ ಹಾಗೂ ಮುಟ್ಟಿನ ಬಗ್ಗೆ ಜಾಗೃತಿ ಕಾರ್ಯಕ್ರಮ
ಗಂಗಾವತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಚಿಲ್ಕಮುಖಿ ಗ್ರಾಮದಲ್ಲಿ ಹರ್ಷ ಫುಟ್‌ವೇರ್ ಇಂಡಸ್ಟ್ರೀಸ್ (ಚಿಲ್ಕಮುಖಿ), ವಿಕಸಿತ್ ಇಂಡಿಯಾ ಫೌಂಡೇಶನ್ (ಕೊಪ್ಪಳ) ಮತ್ತು ಸರಕಾರಿ ಪ್ರೌಢಶಾಲೆ ಚಿಲ್ಕಮುಖಿ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಸ್ಯಾನಿಟರಿ ಪ್ಯಾಡ್ ವಿತರಣೆ ಹಾಗೂ ಮುಟ್ಟಿನ ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಗಂಗಾವತಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರಾದ ಶ್ರೀ ಸಂಗಮೇಶ್ ಸುಗ್ರೀವಾ ಅವರು ಮಕ್ಕಳ ಮತ್ತು ಸ್ತ್ರೀಯರ ಸಾಮಾಜಿಕ ಪ್ರಗತಿಯಲ್ಲಿ ಅವರ ಅಪಾರ ಕೊಡುಗೆ ಬಗ್ಗೆ ವಿಶದವಾಗಿ ಮಾತನಾಡಿದರು.
ಗಂಗಾವತಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಚಿಲ್ಕಮುಖಿ ಗ್ರಾಮದಲ್ಲಿ ಹರ್ಷ ಫುಟ್‌ವೇರ್ ಇಂಡಸ್ಟ್ರೀಸ್ (ಚಿಲ್ಕಮುಖಿ), ವಿಕಸಿತ್ ಇಂಡಿಯಾ ಫೌಂಡೇಶನ್ (ಕೊಪ್ಪಳ) ಮತ್ತು ಸರಕಾರಿ ಪ್ರೌಢಶಾಲೆ ಚಿಲ್ಕಮುಖಿ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಸ್ಯಾನಿಟರಿ ಪ್ಯಾಡ್ ವಿತರಣೆ ಹಾಗೂ ಮುಟ್ಟಿನ ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮವನ್ನು ಉದ್ಘಾಟಿಸಿದ ಗಂಗಾವತಿ ವಿಧಾನಸಭಾ ಕ್ಷೇತ್ರದ ಬಿಜೆಪಿ ಮುಖಂಡರಾದ ಶ್ರೀ ಸಂಗಮೇಶ್ ಸುಗ್ರೀವಾ ಅವರು ಮಕ್ಕಳ ಮತ್ತು ಸ್ತ್ರೀಯರ ಸಾಮಾಜಿಕ ಪ್ರಗತಿಯಲ್ಲಿ ಅವರ ಅಪಾರ ಕೊಡುಗೆ ಬಗ್ಗೆ ಮಾತನಾಡಿದರು.
ಈ ಶುಭಕಾರ್ಯಕ್ರಮಕ್ಕೆ ಅಧ್ಯಕ್ಷರಾಗಿ ಮಾನ್ಯ ಹಾಲಪ್ಪಹೆಚ್ ಅವರು ಕಾರ್ಯನಿರ್ವಹಿಸಿದರು. ಮುಖ್ಯ ಅತಿಥಿಗಳಾಗಿ ಶುಭ ದೇವರಗುಡಿ ಉಪಸ್ಥಿತರಿದ್ದರು. ಅತಿಥಿಗಳಾಗಿ ಶೇಖರ ಗೌಡ ಮೇಟಿ, ಹೊನಕೇರಿ ಮಲ್ಲಪ್ಪ ಮತ್ತು ಶಿವಲೀಲಾ ಟಿ ಅವರು ಭಾಗವಹಿಸಿ ಕಾರ್ಯಕ್ರಮಕ್ಕೆ ಸಾರ್ಥಕತೆ ನೀಡಿದರು.
