ಆಸ್ಟ್ರೇಲಿಯಾದಲ್ಲಿ ಹತ್ಯಾಕಾಂಡ. ವಿಕೃತಿ ಮೆರೆದ ಪಾಕ್
ಭಾನುವಾರ ಅದು ಯಹೂದಿಗಳ ಪಾಲಿನ ಸಂಭ್ರಮದ ಕ್ಷಣವಾಗಿತ್ತು. ಹನುಕ್ಕಾ ಹಬ್ಬ ಯಹೂದಿಗಳ ಅತಿ ದೊಡ್ಡ ಹಬ್ಬ. ಅದೇ ದಿನದಂದೇ ಕರಾಳ ಛಾಯೇಯ ಕರಿನೆರಳು ಆವರಿಸಿತ್ತು.
ಆಸ್ಟ್ರೇಲಿಯಾದ ಸಿಡ್ನಿಯಲ್ಲಿರುವ ಬೊಂಡಿ ಸಮುದ್ರತೀರದ ಬಳಿ ನಡೆದ ಪಾಕ್ ಪ್ರಜೆಗಳ ಅಕ್ರಮ ಅಟ್ಟಹಾಸಕ್ಕೆ ಹತ್ತು ಜೀವಗಳು ಬಲಿಯಾದವು. ಇನ್ನೂ ನಲವತ್ತೆರಡು ಜನರು ಗಾಯದಿಂದ ಬಳಲುತ್ತಿದ್ದಾರೆ.
ಬೊಂಡಿ ಬೀಚ್ ಹತ್ತಿರ ನಡೆದ ಮಾರಣಾಂತಿಕ ದಾಳಿಯ ರೂವಾರಿಗಳು ಪಾಕಿಸ್ತಾನ ಮೂಲದ ಅಪ್ಪ ಮತ್ತು ಮಗ ಎಂಬುದು ಸಾಬೀತಾಗಿದೆ.ಈ ದಾಳಿಯ ಹಿಂದೆ ಭಯೋತ್ಪಾದಕ ಸಂಘಟನೆ ಐಸಿಸ್ ಕೈವಾಡದ ಶಂಕೆ ಇರುವುದು ಕಂಡುಬಂದಿದೆ.
ಹನುಕ್ಕ ಹಬ್ಬದ ಸಂಂಭ್ರಮದಲಿದ್ದ ಯಹೂದಿಗಳನ್ನು ಗುರುಯಾಗಿಸಿ ಗುಂಡಿನ ದಾಳಿ ನಡೆಸಿದವರು ಪಾಕ್ ಮೂಲದ ಪ್ರಜೆ ಸಾಜಿದ್ ಅಕ್ರಮ್ ಹಾಗೂ ಅವನ ಮಗ ನವೀದ್ ಅಕ್ರಮ್ ಎಂದು ಗುರುತಿಸಲಾಗಿದೆ.
ಗುಂಡಿನ ದಾಳಿಯ ವೇಳೆಗೆ ಅಪ್ಪ ಸಾಜಿದ್ ಅಕ್ರಮ್ ಪೋಲಿಸರು ನಡೆಸಿದ ಪ್ರತಿದಾಳಿಗೆ ಬಲಿಯಾಗಿದ್ದಾನೆ. ಇದೇ ಸಂದರ್ಭದಲ್ಲಿ ಗಾಯಗೊಂಡಿರುವ ಮಗ ನವೀದ್ ಅಕ್ರಮ್, ಪೋಲಿಸರ ಬಲೆಗೆ ಬಿದ್ದಿದ್ದು ಭದ್ರತೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಇತರೆ ಸುದ್ದಿಗಳು