ವಿವ ನ್ಯೂಸ್ ಕನ್ನಡ - ಇದು ಸುದ್ದಿಗಳ ಡಬ್ಬಿ

ಧೂಮಪಾನಕ್ಕೂ ಮೀರಿದ ಅಪಾಯ: ಪ್ರತಿದಿನ ಹೆಚ್ಚುತ್ತಿರುವ ಸಾವುಗಳು
ವರದಿಗಾರರು : ಮಮತಾ | ಸ್ಥಳ : Bengaluru | ದಿನಾಂಕ : 19-01-2026

ಧೂಮಪಾನಕ್ಕೂ ಮೀರಿದ ಅಪಾಯ: ಪ್ರತಿದಿನ ಹೆಚ್ಚುತ್ತಿರುವ ಸಾವುಗಳು

ದೊಡ್ಡ ನಗರಗಳಲ್ಲಿ ಒತ್ತಡದಿಂದ ನಾವು ಯಂತ್ರಗಳಂತೆ ಕೆಲಸ ಮಾಡುತ್ತಿದ್ದೇವೆ. ವಾಯು ಮಾಲಿನ್ಯ ಗಣನೀಯ ಪ್ರಮಾಣದಲ್ಲಿ ಹೆಚ್ಚಳವಾಗುತ್ತಿದ್ದು ಹಳ್ಳಿಗಳಿಗೆ ಓಡಿ ಹೋಗುವ ಕಾಲ ಬರುತ್ತದೆ ಎಂದು ಸಂಸದ ಡಾ.ಸಿ.ಎನ್‌.ಮಂಜುನಾಥ್‌ ಎಚ್ಚರಿಸಿದರು.

ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಹಾಗೂ ತೋಟಗಾರಿಕಾ ಇಲಾಖೆಯ ಸಹಯೋಗದಲ್ಲಿ ಲಾಲ್‌ಬಾಗ್‌ನಲ್ಲಿ ಶನಿವಾರ ಆಯೋಜಿಸಿದ್ದ ಎರಡನೇ ರಾಷ್ಟ್ರೀಯ ಮರಗೆತ್ತನೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

ದೊಡ್ಡ ನಗರಗಳಲ್ಲಿ 'ಅಂತರ್ಜಲ' ಕುಸಿಯುತ್ತಿದ್ದು 'ಅಂತರ್ಜಾಲ' ಹೆಚ್ಚಾಗುತ್ತಿದೆ. ವಾಯುಮಾಲಿನ್ಯದಿಂದಾಗಿ ಉಸಿರಾಟದ ಸಮಸ್ಯೆ, ಅಸ್ತಮಾ, ಕೆಮ್ಮು ಜಾಸ್ತಿಯಾಗುತ್ತದೆ ಎಂದು ಜನಸಾಮಾನ್ಯರು ತಿಳಿದಿದ್ದಾರೆ. ಆದರೆ ವಾಯು ಮಾಲಿನ್ಯ ಕೃತಕ ಧೂಮಪಾನವಾಗಿದ್ದು ಹೃದಯಾಘಾತ ಆಗಬಹುದು. ಗರ್ಭಪಾತ, ಜನಿಸುವ ಮಗುವಿನ ತೂಕ ಕಡಿಮೆ ಇರುವುದು ಮತ್ತಿತರ ಸಮಸ್ಯೆಗಳು ಉದ್ಭವಿಸುತ್ತವೆ. ಆದ್ದರಿಂದ ಎಚ್ಚರದಿಂದ ಇರಬೇಕು ಎಂದು ಸಲಹೆ ನೀಡಿದರು.

ಧೂಮಪಾನಕ್ಕಿಂತ ಅಧಿಕ ಸಾವು:

ವರದಿಯೊಂದರ ಪ್ರಕಾರ ಕಳೆದ ವರ್ಷ ದೇಶದಲ್ಲಿ ವಾಯ ಮಾಲಿನ್ಯದಿಂದಾಗಿ 22 ಲಕ್ಷ ಜನ ಮೃತಪಟ್ಟಿದ್ದಾರೆ. ಆದರೆ ಧೂಮಪಾನದಿಂದಾಗಿ ಮೃತಪಟ್ಟವರ ಸಂಖ್ಯೆ 14 ಲಕ್ಷ ಮಾತ್ರ. ವಾಹನಗಳ ದಟ್ಟಣೆ, ಕಟ್ಟಡಗಳ ಧೂಳು, ಬೆಂಕಿ ಹಚ್ಚುವುದು, ಕೈಗಾರಿಕೆಗಳಿಂದ ಹೊರಸೂಸುವ ಅನಿಲಗಳಿಂದಾಗಿ ವಾಯು ಮಾಲಿನ್ಯ ಹೆಚ್ಚಾಗುತ್ತಿದೆ. ದೆಹಲಿಯಲ್ಲಿ ಎದುರುಗಡೆ ಇರುವ ಮನುಷ್ಯರೇ ಕಾಣಿಸುವುದಿಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ನಮಗೆ ಇಂದು ಶುದ್ಧ ಗಾಳಿ ಬೇಕಿದೆ.

ನಗರಕ್ಕೆ ಲಾಲ್‌ಬಾಗ್‌, ಕಬ್ಬನ್‌ ಪಾರ್ಕ್‌ ಮಾದರಿಯಲ್ಲಿ ಇನ್ನೂ ಮೂರ್ನಾಲ್ಕು ಉದ್ಯಾನವನಗಳ ಅವಶ್ಯಕತೆ ಇದೆ. ಇಲ್ಲಿ ಮರಗಳಿಂದ ಕಲಾಕೃತಿ ರಚಿಸಿರುವ ಈ ಕಲಾವಿದರೇ ನಿಜವಾದ ಪರಿಸರದ ಹಿರೋಗಳಾಗಿದ್ದಾರೆ. ನಮ್ಮ ಬದುಕಿಗೆ ನಿಜವಾದ ಫೇಸ್‌ ಮೇಕರ್‌ ಪರಿಸರವಾಗಿದ್ದು ಇದನ್ನು ನಾವು ಉಳಿಸಿ ಬೆಳೆಸಬೇಕು ಎಂದು ಕರೆ ನೀಡಿದರು. ಮರದಿಂದ ಕೆತ್ತಿದ ಹುಲಿ, ಜೇನುಹುಳ ಮತ್ತಿತರ ಕಲಾ ಕೃತಿಗಳು ಗಮನ ಸೆಳೆದವು. ಇದೇ ಸಂದರ್ಭದಲ್ಲಿ ಮರಗೆತ್ತನೆಯಲ್ಲಿ ಪಾಲ್ಗೊಂಡ ಕಲಾವಿದರನ್ನು ಗೌರವಿಸಲಾಯಿತು. ಕರ್ನಾಟಕ ಶಿಲ್ಪಕಲಾ ಅಕಾಡೆಮಿ ಅಧ್ಯಕ್ಷ ಎಂ.ಸಿ.ರಮೇಶ್‌, ಪರಿಸರ ತಜ್ಞ ಡಾ.ಎ.ಎನ್‌.ಯಲ್ಲಪರೆಡ್ಡಿ, ತೋಟಗಾರಿಕಾ ಇಲಾಖೆ ಅಪರ ನಿರ್ದೇಶಕ ಡಾ.ಎಂ.ಜಗದೀಶ್‌ ಮತ್ತಿತರರು ಉಪಸ್ಥಿತರಿದ್ದರು.

ಇತರೆ ಸುದ್ದಿಗಳು

ಶಿವಭಕ್ತಿಗೆ ಹೊಸ ಆಯಾಮ: ಜಗತ್ತಿನ ಅತಿ ದೊಡ್ಡ ಶಿವಲಿಂಗ ನಿರ್ಮಿಸಿ ಇತಿಹಾಸ ಬರೆದ ಭಾರತ

Views : 48858+

ಇತಿಹಾಸದಲ್ಲೇ ಒಂದು ವಿಶೇಷ ರೆಕಾರ್ಡ್ ಅನ್ನು ಸೃಷ್ಟಿಸಿದ ನಟ ಕಿಚ್ಚ ಸುದೀಪ್ “

Views : 48891+

ರಿಲೇಷನ್ಶಿಪ್ ಹಾಗೂ ಜವಾಬ್ದಾರಿಗಳಿಂದ ವಿರಾಮ ಘೋಷಿಸಿದ ಗಾಯಕಿ “ನೆಹಾ ಕಕ್ಕರ್”

Views : 48891+

ತಾಂತ್ರಿಕ ಸಮಸ್ಯೆಗಳು ಹೆಚ್ಚಳ: ಇ-ಖಾತೆ ಪಡೆಯಲು ಜನರ ಸಂಕಷ್ಟ

Views : 48919+

ಹುಣಸೂರಿನ ಬ್ರಹ್ಮಕುಮಾರಿ ಪ್ರಜಾಪಿತ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಬಾಬಾ ರವರ 57ನೇ ಸ್ಮೃತಿ ದಿನವನ್ನು ಆಚರಿಸ

Views : 49084+

ಶ್ರೀ ಮತಿ ಮಿನಾಕ್ಷಿ ಮದಾಪ್ಪಾ ಅವರ ಅಧ್ಯಕ್ಷತೆಯಲ್ಲಿ ಮಹಾಕವಿ ವೇಮನ್ ಅವರ ಜಂಯತೋತ್ಸವ ಆಚರಿಸಿದ ಆಣದೂರ ಗ್ರಾಮ ಪ�

Views : 49151+

ಮದ್ದೂರು | ಹೈಕೋರ್ಟ್ ನ್ಯಾಯಮೂರ್ತಿಗಳಿಂದ ಕಾಮಗಾರಿಗಳ ಪರಿಶೀಲನೆ

Views : 49272+

ಧೂಮಪಾನಕ್ಕೂ ಮೀರಿದ ಅಪಾಯ: ಪ್ರತಿದಿನ ಹೆಚ್ಚುತ್ತಿರುವ ಸಾವುಗಳು

Views : 49458+

ಅಮವಾಸ್ಯೆ ಮರುದಿನ ಹನೂರು ತಾಲ್ಲೂಕಿನಲ್ಲಿ ಬಸ್ ಕೊರತೆ: ಗ್ರಾಮೀಣ ವಿದ್ಯಾರ್ಥಿಗಳಿಗೆ ಶಾಲೆ–ಕಾಲೇಜು ಪ್ರಯಾಣ ದು�

Views : 49402+

ಹನುಮಂತ ಹೊತ್ತು ತಂದ ಪರ್ವತ ನೋಡಿ ಆಶ್ಚರ್ಯಚಕಿತರಾದರು!

Views : 49570+

4610 ದೇವಸ್ಥಾನಗಳು ನಾಪತ್ತೆಯಾಗಿದ್ದು ನಿಜಾನಾ? ಮುಜರಾಯಿ ಇಲಾಖೆ ಹೇಳಿದ್ದೇನು ಗೊತ್ತಾ?

Views : 49575+

ಅಕ್ರಮ ಮಣ್ಣು ಸಾಗಣೆ ಸೇರಿ ವಿವಿಧ ಆರೋಪಗಳ ಸಾಕ್ಷ್ಯಗಳೊಂದಿಗೆ ಪ್ರತಿಭಟನಾ ಮೆರವಣಿಗೆ, ಜ.19ಕ್ಕೆ ದಾವಣಗೆರೆ ಗ್ರಾಮ

Views : 49591+

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಸಚಿವರ ವಿರುದ್ಧ ರಾಜ್ಯಪಾಲರಿಗೆ ದೂರು: ಬಿಜೆಪಿ ಶಾಸಕ ಬಿ. ಪಿ. ಹರೀಶ್

Views : 49588+

ಗಾಂಧಿ ಗ್ರಾಮ ಪ್ರಶಸ್ತಿಯಲ್ಲಿ ತಾರತಮ್ಯ ಆರೋಪ ಜನವರಿ 19ರಂದು ಗ್ರಾಮಸ್ಥರಿಂದ ಜಿ.ಪಂ ಎದುರಗಡೆ ಧರಣಿ

Views : 49614+

ಇತಿಹಾಸಕ್ಕೆ ಸಾಕ್ಷಿಯಾದ ಕ್ಯಾಮೇನಹಳ್ಳಿ ರಾಸುಗಳ ಜಾತ್ರೆ.. ಕಮನೀಯ ಕ್ಷೇತ್ರದಲ್ಲಿ ಕಾಮಧೇನುಗಳ ಜಾತ್ರೆ ಹಬ್ಬ..

Views : 49634+

ದ್ವಿಚಕ್ರ ವಾಹನ ಸವಾರರಿಗೆ ಹೊಸ ನಿಯಮ: ಎಬಿಎಸ್ ಕಡ್ಡಾಯ ಎಂದ “ನಿತಿನ್ ಗಡ್ಕರಿ”

Views : 51092+

ವೇಗ ಬೇಡ, ಜೀವ ಬೇಕು: 10 ನಿಮಿಷ ಡೆಲಿವರಿ ವಿರುದ್ಧ ಕಾರ್ಮಿಕರ ಮನವಿ

Views : 51177+

ಕಾಲೋನಿಯ ಪ್ರತಿಯೊಂದು ಮನೆಗೆ ತೆರಳಿ ಸಿಹಿ ತಿಂಡಿ ತಿನಿಸುಗಳನ್ನು ನೀಡಿ ಹಿರಿಯರ ಆಶಿರ್ವಾದ ಪಡೆಯುವ ಮೂಲಕ ಮಕರ ಸ

Views : 51501+

ದರ್ಭಾಂಗ ರಾಜಮನೆತನದ ಕೊಂಡಿ ಕಳಚಿತು: ಕಾಮಸುಂದರಿ ದೇವಿ ನಿಧನ

Views : 51506+

ಕೆಂಪೇಗೌಡ ಯುವಶಕ್ತಿ ವೇದಿಕೆಯ 8ನೇ ವಾರ್ಷಿಕೋತ್ಸವ: ಯಲಿಯೂರಿನಲ್ಲಿ ಸಂಕ್ರಾಂತಿ ಸಂಭ್ರಮ

Views : 51939+

ಈ ಊರಲ್ಲಿ ಗ್ಯಾಸ್ ಇಲ್ಲ, ಕಟ್ಟಿಗೆಯೂ ಇಲ್ಲ! ಹಾಗಾದ್ರೆ ಅಡುಗೆ ಆಗೋದು ಹೇಗೆ? ತಿಳಿದ್ರೆ ಆಶ್ಚರ್ಯವಾಗುತ್ತೆ!

Views : 51925+

ವಿಧವೆ ಸೊಸೆಗೆ ನ್ಯಾಯ: ಮಾವನ ಆಸ್ತಿಯಿಂದ ಜೀವನಾಂಶ ನೀಡಲು ಸುಪ್ರೀಂಕೋರ್ಟ್ ಮಹತ್ವದ ತೀರ್ಪು

Views : 56884+

ನಮ್ಮ ಮೆಟ್ರೋ' ಪ್ರಯಾಣಿಕರಿಗೆ ಸಿಹಿ ಸುದ್ದಿ : QR ಕೋಡ್ ಆಧಾರಿತ ಅನ್'ಲಿಮಿಟೆಡ್ ಪಾಸ್ ನಾಳೆಯಿಂದಲೇ ಜಾರಿ

Views : 56867+

ಅರಳಿ ಮರವು ಎಲ್ಲಾ ಮರಗಳ ತಾಯಿ ಮರವಾಗಿದೆ” – ಡಾ. ಪಿ.ಎಸ್. ಲಕ್ಕಿ

Views : 56877+