ವೇಗ ಬೇಡ, ಜೀವ ಬೇಕು: 10 ನಿಮಿಷ ಡೆಲಿವರಿ ವಿರುದ್ಧ ಕಾರ್ಮಿಕರ ಮನವಿ
ಆಧುನಿಕ ಕಾಲದಲ್ಲಿ ಎಲ್ಲವೂ ಸ್ಮಾರ್ಟ್ ಆಗಿದ್ದು, ಮನೆಗೆ ಬರುವ ದಿನ ಮತ್ತು ಫುಡ್ ಡೆಲಿವರಿ ಕೂಡ ಸ್ಮಾರ್ಟ್ ಆಂಡ್ ಸ್ಮಾರ್ಟ್ ಆಗಿದೆ. ಆರ್ಡರ್ ಮಾಡಿದ ಕೇವಲ 10 ನಿಮಿಷಕ್ಕೆ ಫುಡ್ ಡೆಲಿವರಿ ಸಿಗುತ್ತೆ, ದಿನಸಿ ವಸ್ತುಗಳು ಮನೆಗೆ ನೇರವಾಗಿ ಬರುತ್ತದೆ ಅನ್ನೋ ಕಾರಣಕ್ಕೆ ಜನರು ಕೂಡ ಆನ್‌ಲೈನ್ ಮೂಲಕವೇ ಆರ್ಡರ್ ಮಾಡಲು ಮುಗಿಬಿದ್ದು ಮುಂದೆ ಬರುತ್ತಿದ್ದಾರೆ. ಆದರೆ, ಈ ರೀತಿ 10 ನಿಮಿಷದ ಡೆಲಿವರಿ ಟಾರ್ಗೆಟ್ ಪರಿಣಾಮ ಸಾಕಷ್ಟು ಸಮಸ್ಯೆಗಳು ಆಗುತ್ತಿವೆ. ಅಲ್ಲದೆ ಡೆಲಿವರಿ ಮಾಡುವ ಕಾರ್ಮಿಕರ ಜೀವ ಅಪಾಯಕ್ಕೆ ಸಿಲುಕಿತ್ತಿದೆ ಎಂಬ ಆರೋಪಗಳ ನಡುವೆ ಇದೀಗ ಮಹತ್ವದ ನಿರ್ಧಾರ ಹೊರಬಿದ್ದಿದೆ.
ಆನ್‌ಲೈನ್ ಮೂಲಕ ಆಹಾರ, ದಿನಸಿ ಸೇರಿದಂತೆ ಹಲವು ವಸ್ತುಗಳನ್ನು ಡೆಲಿವರಿ ಮಾಡುವ ಹಲವು ಸಂಸ್ಥೆಗಳು ಈಗಾಗಲೇ 10 ನಿಮಿಷದ ಡೆಲಿವರಿ ಟಾರ್ಗೆಟ್ ಕೈಬಿಟ್ಟಿವೆ. ಕಾರ್ಮಿಕರ ಹಿತರಕ್ಷಣೆ ಹಿನ್ನೆಲೆ ಈ ಕ್ರಮ ಕೈಗೊಳ್ಳಲಾಗಿದ್ದು, ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವಾಲಯದ ಸೂಚನೆ ನಂತರ ಹೀಗೆ 10 ನಿಮಿಷದ ಡೆಲಿವರಿ ಕಾನ್ಸೆಪ್ಟ್ ಕೈಬಿಡಲಾಗಿದೆ.
ಹೀಗಿದ್ದರೂ ಆ ವಿಚಾರವನ್ನು ಬಹಿರಂಗವಾಗಿ ಘೋಷಿಸಿ ಸಾರ್ವಜನಿಕವಾಗಿ ಖಂಡಿಸುವಂತೆ ಕಾರ್ಮಿಕರು ಆಗ್ರಹಿಸಿದ್ದಾರೆ. ಉತ್ಪನ್ನಗಳನ್ನ ತ್ವರಿತವಾಗಿ ಗ್ರಾಹಕರ ಮನೆ ಬಾಗಿಲಿಗೆ ತಲುಪಿಸುವ ದೀರ್ಘ ಕಾರ್ಯಾಚರಣೆ ಮಾನಸಿಕ ಪರಿಣಾಮ ಬೀರಿದೆ, ಎಂದು ಕಾರ್ಮಿಕರು ಆರೋಪಿಸಿದ್ದಾರೆ.
ಸದ್ದೇ ಇಲ್ಲದೆ ಕೈಬಿಟ್ಟಿದ್ದು ಏಕೆ?
ಮತ್ತೊಂದು ಕಡೆ ಈ ವಿಚಾರವಾಗಿ ನಡೆದಿರುವ ಸಮೀಕ್ಷೆ ಒಂದರ ಪ್ರಕಾರ, ಬೆಂಗಳೂರಿನ ಶೇಕಡಾ 61 ರಷ್ಟು ಗ್ರಾಹಕರು ಸರ್ಕಾರದ ಕ್ರಮ ಬೆಂಬಲಿಸಿದ್ದಾರೆ. ಸಮೀಕ್ಷೆಯಲ್ಲಿ ಭಾಗಿಯಾಗಿದ್ದ 16,245 ಜನರಲ್ಲಿ, ಶೇಕಡಾ 31 ರಷ್ಟು ಜನ 10 ನಿಮಿಷಗಳ ವಿತರಣೆಯನ್ನು ಬಯಸುವುದಿಲ್ಲ ಎಂದು ಹೇಳಿದ್ದಾರೆ.
ಈ ಪೈಕಿ ಔಷಧ ಅಗತ್ಯತೆ ಇರುವವರು ಕೂಡ ಇಷ್ಟು ಬೇಗ, ಎಂದರೆ 10 ನಿಮಿಷದ ಡೆಲಿವರಿ ಅಗತ್ಯತೆ ಇಲ್ಲ ಎಂದಿದ್ದಾರೆ. ಈ ಹಿನ್ನೆಲೆ ಬ್ಲಿಂಕಿಟ್ ಸೇರಿದಂತೆ ಗ್ರಾಹಕರಿಗೆ ವಸ್ತುಗಳನ್ನು ಡೆಲಿವರಿ ಕೊಡುವ, ಎಲ್ಲಾ ಸಂಸ್ಥೆಗಳು ಬಹಿರಂಗವಾಗಿ 10 ನಿಮಿಷದ ಡೆಲಿವರಿ ನಿರ್ಧಾರ ಕೈಬಿಟ್ಟ ವಿಚಾರವನ್ನ ಈಗ ಬಹಿರಂಗವಾಗಿ ಘೋಷಿಸಬೇಕು ಎಂದು ಗಿಗ್ ಕಾರ್ಮಿಕರು ಆಗ್ರಹಿಸಿದ್ದಾರೆ. ಹೀಗೆ ಬಹಿರಂಗ ಘೋಷಣೆ ಮಾತ್ರ ಡೆಲಿವರಿ ಮಾಡುವವರನ್ನು ಸಂಕಷ್ಟದಿಂದ ಪಾರು ಮಾಡಲು ಸಾಧ್ಯ ಎಂಬುದು ಕಾರ್ಮಿಕರ ಅಭಿಪ್ರಾಯ.
ಇತರೆ ಸುದ್ದಿಗಳು