ಇತಿಹಾಸಕ್ಕೆ ಸಾಕ್ಷಿಯಾದ ಕ್ಯಾಮೇನಹಳ್ಳಿ ರಾಸುಗಳ ಜಾತ್ರೆ.. ಕಮನೀಯ ಕ್ಷೇತ್ರದಲ್ಲಿ ಕಾಮಧೇನುಗಳ ಜಾತ್ರೆ ಹಬ್ಬ..
ಐತಿಹಾಸಿಕ ಇತಿಹಾಸ ಪ್ರಸಿದ್ಧ ಶ್ರೀಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿ ರಥೋತ್ಸವಕ್ಕೂ ಮೊದಲು ಮಕರ ಸಂಕ್ರಾತಿ ಹಬ್ಬದ ಮಾರನೇ ದಿನದಿಂದ ಆರಂಭಗೊಳ್ಳುವ ರಾಸುಗಳ ಜಾತ್ರೆಗೆ ರಾಜ್ಯದ ಅನೇಕ ಭಾಗದ ರೈತರ ವಿವಿಧ ತಳಿಯ ರಾಸುಗಳು ಆಗಮಿಸುತ್ತಿದ್ದು, ಕಮನೀಯ ಕ್ಷೇತ್ರದಲ್ಲಿ ಕಾಮಧೇನುಗಳ ಜಾತ್ರೆಯ ಹಬ್ಬದ ಸಡಗರ ಮನೆ ಮಾಡಿತ್ತು.
ತಾಲೂಕಿನ ಹೊಳವನಹಳ್ಳಿ ಹೋಬಳಿ ಕ್ಯಾಮೇನಹಳ್ಳಿ ಗ್ರಾ.ಪಂ ವ್ಯಾಪ್ತಿಯ ಕೇಂದ್ರ ಸ್ಥಾನದಲ್ಲಿ ರಥಸಪ್ತಮಿಯಂದು ನಡೆಯುವ ಕಮನೀಯ ಕ್ಷೇತ್ರ ಕ್ಯಾಮೇನಹಳ್ಳಿ ಆಂಜನೇಯ ಸ್ವಾಮಿ ರಥೋತ್ಸವ ವಾರವಿದ್ದಂತೆ ಶುರುವಾಗುವ ಈ ರಾಸುಗಳ ಜಾತ್ರೆಗೆ ಈ ಬಾರಿ ವಿವಿಧ ತಳಿಯ ರಾಸುಗಳು ಹೆಚ್ಚಾಗಿ ಆಗಮಿಸುತ್ತಿದ್ದು ರೈತರನ್ನು ಆಕರ್ಷಿಸುತ್ತಿದೆ.
ಈ ವರ್ಷದ ರಾಸುಗಳ ಜಾತ್ರೆಯಲ್ಲಿ ರಾಸುಗಳನ್ನ 50 ಸಾವಿರದಿಂದ 5 ಲಕ್ಷದವರೆಗೆ ರೈತರು ಖರೀದಿಸುತ್ತಿದ್ದು, ಹೊಲ ಉಳುಮೆಗೆ ಯೋಗ್ಯವಾದ ರಾಸುಗಳನ್ನು ಹೆಚ್ಚಿನ ಡಿಮ್ಯಾಂಡ್ ಇದ್ದು, ರಾಜ್ಯದ ಬಳ್ಳಾರಿ, ಹಾವೇರಿ, ಶಿವಮೊಗ್ಗ, ದೊಡ್ಡಬಳ್ಳಾಪುರ, ಚಿಕ್ಕಬಳ್ಳಾಪುರ, ಗೌರಿಬಿದನೂರು ಸೇರಿದಂತೆ ಆಂದ್ರ ಪ್ರದೇಶ, ಇತರೆ ರಾಜ್ಯಗಳಿಂದ ರೈತರು ಹೆಚ್ಚಾಗಿ ಆಗಮಿಸಿ ರಾಸುಗಳ ಖರೀದಿಗೆ ಮುಂದಾಗುತ್ತಿರುವುದು ಕಂಡು ಬಂದಿದ್ದು, ಈ ಜಾತ್ರೆ ಇತಿಹಾಸಕ್ಕೆ ಸಾಕ್ಷಿಯಾಗಿದೆ.
ಇತರೆ ಸುದ್ದಿಗಳು