ಹುಣಸೂರಿನ ಬ್ರಹ್ಮಕುಮಾರಿ ಪ್ರಜಾಪಿತ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಬಾಬಾ ರವರ 57ನೇ ಸ್ಮೃತಿ ದಿನವನ್ನು ಆಚರಿಸ
ಬ್ರಹ್ಮಕುಮಾರಿ ಸಂಚಾಲಕಿ ನಾಗಶ್ರೀ ಅಕ್ಕನವರು ಬಾಬಾ ರವರ ಪುಣ್ಯಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ನಂತರ ಮಾತನಾಡಿ ವಿಶ್ವದಾದ್ಯಂತ ಬಾಬಾರವರ ಸ್ಮೃತಿ ದಿನಾಚರಣೆಯನ್ನುಆಚರಿಸಲಾಯಿತು
1876 ರಲ್ಲಿ ಸಿಂಧು ಹೈದರಾಬಾದ್ ಕರಾಚಿಯಲ್ಲಿ ಕೃಪಾಲಾನಿ ವಂಶದ ಮುಖ್ಯೋಪಾಧ್ಯಾಯರ ಮಗನಾಗಿ ಜನಿಸಿದ ದಾದಾ ಲೇಖರಾಜ್ ಚಿಕ್ಕ ವಯಸ್ಸಿನಲ್ಲಿ ತಂದೆ ತಾಯಿಯನ್ನು ಕಳೆದುಕೊಳ್ಳುತ್ತಾರೆ. ಚಿಕ್ಕಪ್ಪನ ಆಶ್ರಯದಲ್ಲಿ ಗೋಧಿ ವ್ಯಾಪಾರದಲ್ಲಿ ತೊಡಗಿ ನಂತರ ದೊಡ್ಡ ವಜ್ರದ ವ್ಯಾಪಾರಿಯಾಗಿ ರಾಜ ಮಹಾರಾಜರ ಸಂಪರ್ಕದಲ್ಲಿಯೂ ಸಹ ಇರುತ್ತಾರೆ.
ಇವರು ಮೈಸೂರಿಗೂ ಸಹ ಆಗಮಿಸಿದ್ದು ಅವರ 60ನೇ ವಯಸ್ಸಿನಲ್ಲಿ ಈ ಜಗತ್ತಿನ ಪರಿವರ್ತನೆ ಹಾಗೂ ಹೊಸ ಪ್ರಪಂಚದ ಸ್ಥಾಪನೆಯ ಸಾಕ್ಷಾತ್ಕಾರ ಮಾಡಿಕೊಳ್ಳುತ್ತಾರೆ. ವಿಶ್ವದ ಶಕ್ತಿ ಪರಮಾತ್ಮನ ಆದೇಶದಂತೆ ಅವರ ತನುವನ್ನು ಸಹಕಾರ ಮಾಧ್ಯಮವಾಗಿ ಮಾಡಿಕೊಂಡು ಹೊಸ ಜಗತ್ತಿನ ಸ್ಥಾಪನೆಯಾಗಿ ಸಿಂಧು ಹೈದರಾಬಾದ್ ಕರಾಚಿಯಲ್ಲಿ 500 ಜನ ಮಾತೆಯರ ಕನ್ಯೆಯರ ನೇತೃತ್ವದಲ್ಲಿ ಓಂ ಮಂಡಳಿ ಎಂಬ ಆಧ್ಯಾತ್ಮಿಕ ಸಂಸ್ಥೆಯನ್ನು ಹುಟ್ಟು ಹಾಕಿ ಸರ್ವಸ್ವವನ್ನು ಅವರಿಗೆ ಅರ್ಪಣೆ ಮಾಡುತ್ತಾರೆ, 1950ರಲ್ಲಿ ಭಾರತ ಪಾಕಿಸ್ತಾನ ವಿಭಜನೆ ಆದಾಗ ತಮ್ಮ ತಪಸ್ಸಿನ ಸಲುವಾಗಿ ಭಾರತದ ಮೌಂಟ್ ಅಬುವಿಗೆ ಸ್ಥಳಾಂತರ ಗೊಳ್ಳುತ್ತಾರೆ. ಸಾಧು, ಸಂತ, ಸನ್ಯಾಸಿಗಳ ಮಾಡುವುದಕ್ಕಾಗದ ಅಸಂಭವ ಕಾರ್ಯವನ್ನು ಗ್ರಹಸ್ಥದಲ್ಲಿದ್ದು ಪವಿತ್ರ ಜೀವನ ನಡೆಸಲು ಸಾಧ್ಯ ಎಂಬುದನ್ನು ತೋರಿಸಿಕೊಟ್ಟರು. ಮಹಿಳೆಯರಲ್ಲಿ ಇದ್ದ ಅಂಧ ವಿಶ್ವಾಸ ಕಂದಾಚಾರಗಳನ್ನು ತೊಡೆದು ಹಾಕಿ ಅವರನ್ನು ವಿಶ್ವದ ಮಾತೇಯರನ್ನಾಗಿ ಮಾಡಿದರು. ಮಹಿಳೆಯರು ನರಕಕ್ಕೆ ಹೆದ್ದಾರಿ ಎಂಬುದನ್ನು ಅಳಿಸಿ ಸ್ವರ್ಗಕ್ಕೆ ಹೆದ್ದಾರಿ ಎಂಬುದನ್ನು ಸಾಕಾರಗೊಳಿಸಿದರು.
ಮಾತೆಯರು ತೊಟ್ಟಿಲು ಹಿಡಿಯುವ ಕೈ ಇಡೀ ವಿಶ್ವವನ್ನೇ ತೂಗಬಲ್ಲರು ಎಂಬುದನ್ನು ಸಾಕಾರಗೊಳಿಸಿದರು. ಮಾನವ ಆಧುನಿಕತೆಯನ್ನು ಮೈಗೂಡಿಸಿಕೊಂಡು ತನ್ನ ಬದುಕನ್ನು ನರಕದತ್ತ ಕೊಂಡೊಯ್ಯುತ್ತಿದ್ದಾನೆ. ನಿರಂತರ ಭಗವಂತನ ಸ್ಮರಣೆ, ಧ್ಯಾನದಿಂದ ಮನಸ್ಸು ಶಾಂತಿ ಹೊಂದಲು ಸಾಧ್ಯ, ಎಂದರು.
ಕಾರ್ಯಕ್ರಮದಲ್ಲಿ ಮೂರ್ತಿ ಅಣ್ಣನವರು ಮಾತನಾಡಿ ಮಾತನಾಡಿ ಜಗತ್ತಿನಲ್ಲಿ ಎಲ್ಲವೂ ನಶ್ವರ, ಪರಮಾತ್ಮನೊಬ್ಬನೇ ಶಾಶ್ವತ. ಎಲ್ಲರೂ, ಎಲ್ಲವೂ ಒಂದಲ್ಲ ಒಂದು ದಿನ ವಿನಾಶವಾಗುವುದು ಖಚಿತ. ಒತ್ತಡದಲ್ಲಿ ಬದುಕುತ್ತಿರುವ ನಾವು ಅಧ್ಯಾತ್ಮವನ್ನು ಮೈಗೂಡಿಸಿಕೊಂಡು ಪ್ರತಿದಿನ ಧ್ಯಾನ, ಭಗವಂತನ ನಾಮ ಸ್ಮರಣೆ ಮಾಡಿದರೆ ಒತ್ತಡ ನಿವಾರಣೆಯಾಗಿ ಮನಸ್ಸಿನಲ್ಲಿ ಶಾಂತಿ ಭಾವನೆ ಮೂಡುವುದು. ತನ್ನಿಂದ ಏನೂ ಸಾಧ್ಯವಿಲ್ಲ ಎಂದು ಕೈ ಚೆಲ್ಲಿ ಕುಳಿತರೆ ಖಂಡಿತಾ ಯಶಸ್ಸು ಕಾಣಲು ಅಸಾಧ್ಯ. ಹಲವಾರು ಕಾಯಿಲೆಯನ್ನು ಗುಣಪಡಿಸುವ ಶಕ್ತಿ ಧ್ಯಾನಕ್ಕಿದೆ.
ಬ್ರಹ್ಮಕುಮಾರಿ ಈಶ್ವರೀಯ ವಿಶ್ವವಿದ್ಯಾಲಯವು ಪ್ರಪಂಚದಾದ್ಯಂತ ನಿಸ್ವಾರ್ಥ ಸೇವೆ ನೀಡುತ್ತಾ ಜನರಿಗಾಗಿ ಪ್ರಾರ್ಥಿಸುತ್ತಾ ಅವರ ಸಮಸ್ಯೆಗಳಿಗೆ ಪರಿಹಾರ ನೀಡುತ್ತಿರುವುದು ಬಹಳ ದೊಡ್ಡ ಸೇವೆಯಾಗಿದೆ. ಬ್ರಹ್ಮಕುಮಾರಿ ಸಮಾಜದ ಹುಣಸೂರಿನ ಶಾಖೆಯಲ್ಲಿ ಉಚಿತ ಯೋಗ ಶಿಬಿರಗಳು ಹಾಗೂ ಇನ್ನಿತರೆ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಮತ್ತು ಆರೋಗ್ಯ ಶಿಬಿರಗಳನ್ನು ಏರ್ಪಡಿಸಿ ಸೇವೆ ಸಲ್ಲಿಸುತ್ತಾ ಬಂದಿರುವ ನಾಗಶ್ರೀ ಅಕ್ಕ ಹಾಗೂ ಮೂರ್ತಿ ಅಣ್ಣನವರಿಗೆ ತುಂಬು ಹೃದಯದ ಧನ್ಯವಾದಗಳನ್ನು ಅರ್ಪಿಸುತ್ತೇನೆ ಹಾಗೂ ಅವರ ಪ್ರತಿಯೊಂದು ಸೇವಾ ಕಾರ್ಯಗಳು ಹೀಗೆ ಮುಂದುವರೆಯಲಿ. ನಮ್ಮ ಸಹಕಾರ ಸದಾ ಇವರೊಂದಿಗಿರುತ್ತದೆ ಎಂದು ಸತ್ಯ ಎಂ ಎ ಎಸ್ ಫೌಂಡೇಶನ್ ಅಧ್ಯಕ್ಷ ಸತ್ಯಪ್ಪ ರವರು ಹೇಳಿದರು.
ಬಾಬಾ ರವರ ಪುಣ್ಯಸ್ಮೃತಿ ಕಾರ್ಯಕ್ರಮದಲ್ಲಿ ಸತ್ಯನಾರಾಯಣ, ಅನ್ನಪೂರ್ಣಕ್ಕ ಸಂದೀಪ, 150ಕ್ಕೂ ಹೆಚ್ಚು ಮಹಿಳೆಯರು, ಸಮಸ್ತ ಬ್ರಹ್ಮಕುಮಾರಿ ಸಮಾಜದ ಭಕ್ತಾದಿಗಳು ಭಾಗವಹಿಸಿದ್ದು ಸ್ಮರಣೆ ಕಾರ್ಯಕ್ರಮಕ್ಕೆ ಆಗಮಿಸಿದ ಬಂಧುಗಳಿಗೆ ಬೆಳಗಿನ ತಿಂಡಿ ಹಾಗೂ ಮಧ್ಯಾಹ್ನದ ಉಪಹಾರ ನೀಡಲಾಯಿತು.
ಇತರೆ ಸುದ್ದಿಗಳು