“ತೇರಿನ ಬೀದಿ ಶನೇಶ್ವರ ಸ್ವಾಮಿ ದೇವಾಲಯದಲ್ಲಿ 16ನೇ ವರ್ಷದ ಕಾರ್ತಿಕ ಮಹೋತ್ಸವ”
ತೇರಿನ ಬೀದಿಯ ಶನೇಶ್ವರ ಸ್ವಾಮಿಯ ದೇವಸ್ಥಾನದಲ್ಲಿ 16ನೇ ವರ್ಷದ ಕಾರ್ತಿಕ ಮಾಸದ ವಾರ್ಷಿಕ ಮಹೋತ್ಸವ ಹಾಗೂ ಉತ್ಸವ ಕಾರ್ಯಕ್ರಮವನ್ನು ನೆರವೇರಿಸಲಾಯಿತು..
ದಕ್ಷಿಣ ಕಾಶಿ ಎಂದೇ ಪ್ರಸಿದ್ಧವಾಗಿರುವ ದೇವಾಲಯಗಳ ತವರೂರು ಕೊರಟಗೆರೆ ಪಟ್ಟಣದ ತೇರಿನ ಬೀದಿ ಹಾಗೂ ಕೋಟೆ ಬೀದಿಯ ಸಮೀಪ ನೆಲೆಸಿರುವ ಇತಿಹಾಸ ಪ್ರಸಿದ್ಧ ಶ್ರೀ ಶನೇಶ್ವರ ಸ್ವಾಮಿಯ ದೇವಾಲಯದಲ್ಲಿ ಇಂದು ಕಾರ್ತಿಕ ಮಾಸದ ಅಂಗವಾಗಿ 16ನೇ ವಾರ್ಷಿಕೋತ್ಸವ ಹಾಗೂ ಶನೇಶ್ವರ ಸ್ವಾಮಿಯ ಉತ್ಸವವನ್ನು ಈರುಳ್ಳಿ ತಿಮ್ಮಪ್ಪನವರ ಕುಟುಂಬ ಹಾಗೂ ಭಕ್ತಾದಿಗಳ ಸಹಕಾರದಿಂದ ನೆರವೇರಿಸಲಾಯಿತು...
ಪಟ್ಟಣದ ಪ್ರಮುಖ ಬೀದಿಗಳಲ್ಲಿ ಶ್ರೀ ಶನೇಶ್ವರ ಸ್ವಾಮಿಯ ಉತ್ಸವ ಮೂರ್ತಿ ಮೆರವಣಿಗೆ ಶನೇಶ್ವರ ಸ್ವಾಮಿಯ ದೇವರಯದಲ್ಲಿ ನೆಲೆಸಿರುವ ಶನೇಶ್ವರ ಸ್ವಾಮಿಗೆ ವಿಶೇಷ ಹೂವಿನ ಅಲಂಕಾರವನ್ನು ನೆರವೇರಿಸಿ ವಿಶೇಷ ಪೂಜೆಯನ್ನು ಸಲ್ಲಿಸಲಾಯಿತು ದೇವಸ್ಥಾನಕ್ಕೆ ಆಗಮಿಸಿದ ಭಕ್ತಾದಿಗಳಿಗೆ ವಿಶೇಷ ಪ್ರಸಾದ ವ್ಯವಸ್ಥೆ ಕಲ್ಪಿಸಲಾಗಿತ್ತು ಎಂದು ತಿಳಿಸಿದ ದೇವಸ್ಥಾನದ ಕಮಿಟಿ ಅಧ್ಯಕ್ಷರು ಹಾಗೂ ಸದಸ್ಯರು
ಇದೇ ಸಂದರ್ಭದಲ್ಲಿ ಶ್ರೀ ಶನೇಶ್ವರ ಸ್ವಾಮಿ ಸೇವಾ ಟ್ರಸ್ಟ್ ಅಧ್ಯಕ್ಷರಾದ ಎಂ ಜಿ ಸುಧೀರ್, ಕಾರ್ಯದರ್ಶಿ ಎಚ್ ಎಲ್ ನಾರಾಯಣ್, ನಿರ್ದೇಶಕರಾದ ಬ್ಯಾಂಕ್ ರಾಜಣ್ಣ ಕೆ ವಿ ಪುರುಷೋತ್ತಮ, ಪರಶುರಾಮ್,ಉಮೇಶ್, ಕೋಟೆ ಮಠ ಅರ್ಚಕರಾದ ಕುಂಬಿ ನರಸಿಂಹಾಚಾರ್, ನರೇಂದ್ರದೀಕ್ಷಿತ್, ಯಶ್ವಂತ್ ಆಚಾರ್, ಉತ್ಸವದ ಆಯೋಜಕರಾದ ಈರುಳ್ಳಿ ತಿಮ್ಮಣ್ಣನವರ ಕುಟುಂಬದ ಪ್ರಸನ್ನ ಕುಮಾರ್, ಶೃತಿ, ಜಿಯಾನ್ ಭವನ್, ತಿಮ್ಮರಾಜು, ಭರತ್ ಕುಮಾರ್, ಅಂಜಲಿ,ವೆಂಕಟೇಶ್, ಸುಜಾತ,ಸೇರಿದಂತೆ ಭಕ್ತಾದಿಗಳು ಉಪಸ್ಥಿತರಿದ್ದರು
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
ಇತರೆ ಸುದ್ದಿಗಳು