“ಲೋಕಪ್ಪನಹೊಲ ವಾಲ್ಮೀಕಿ ಭವನಕ್ಕೆ ಹೊಸ ಕಾಂಪೌಂಡ್ ವಾಲ್: SLR ಮೆಟಾಲಿಕ್ಸ್ CSR ಅನುದಾನದಲ್ಲಿ ಭೂಮಿ ಪೂಜೆ”
ಹೊಸಪೇಟೆ, ವಿಜಯನಗರ ಜಿಲ್ಲೆ: ಎಸ್.ಎಲ್.ಆರ್. ಮೆಟಾಲಿಕ್ಸ್ ಕಂಪನಿಯ CSR ಅನುದಾನದಡಿ ಲೋಕಪ್ಪನಹೊಲ ಗ್ರಾಮದ ಶ್ರೀ ಮಹರ್ಷಿ ವಾಲ್ಮೀಕಿ ಭವನದ ಸುತ್ತಲು ಕಾಂಪೌಂಡ್ ವಾಲ್ ನಿರ್ಮಾಣ ಕಾರ್ಯಕ್ಕೆ ಇಂದು ಭೂಮಿ ಪೂಜೆ ವಿಧಿವಿಧಾನಗಳಿಂದ ನೆರವೇರಿತು.
ಕಾರ್ಯಕ್ರಮದಲ್ಲಿ ಗ್ರಾಮದ ದೈವಸ್ಥರು, ಹಿರಿಯರು, ಮುಖಂಡರು, ಚುನಾಯಿತ ಸದಸ್ಯರು ಹಾಗೂ ಸಂಸ್ಥೆಯ ಪ್ರತಿನಿಧಿಗಳು ಭಾಗವಹಿಸಿ ಸಂಭ್ರಮ ಹಂಚಿಕೊಂಡರು. ಭೂಮಿ ಪೂಜೆ ಸ್ಥಳೀಯ ಧಾರ್ಮಿಕ ಗುರುಗಳ ಮಾರ್ಗದರ್ಶನದಲ್ಲಿ ಶಾಸ್ತ್ರೋಕ್ತವಾಗಿ ನಡೆಯಿತು.
ಸಿ.ಎಸ್.ಆರ್. ಅನುದಾನದಡಿ ಕೈಗೊಳ್ಳಲಿರುವ ಈ ಕಾಮಗಾರಿಯು ಗ್ರಾಮದ ಸಾಂಸ್ಕೃತಿಕ ಕೇಂದ್ರವಾದ ವಾಲ್ಮೀಕಿ ಭವನಕ್ಕೆ ಭದ್ರತೆ, ಸೌಂದರ್ಯ ವೃದ್ಧಿ ಮತ್ತು ಸಾರ್ವಜನಿಕ ಚಟುವಟಿಕೆಗಳಿಗಾಗಿ ಉತ್ತಮ ವಾತಾವರಣ ನೀಡಲಿದೆ ಎಂದು ಗ್ರಾಮಸ್ಥರು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಮಾತನಾಡಿದ ಎಸ್.ಎಲ್.ಆರ್. ಮೆಟಾಲಿಕ್ಸ್ ಕಂಪನಿಯ ಅಧಿಕಾರಿಗಳಾದ ತಂಬ್ರಳ್ಳಿ ಅಂಬರೀಷ್ ಅವರು, “ಗ್ರಾಮಗಳ ಅಭಿವೃದ್ಧಿ ಮತ್ತು ಸಾಮಾಜಿಕ ಮೂಲಸೌಕರ್ಯ ಸುಧಾರಣೆ ನಮ್ಮ ಸಂಸ್ಥೆಯ ಮುಖ್ಯ ಆದ್ಯತೆ. ವಾಲ್ಮೀಕಿ ಭವನವು ಗ್ರಾಮದ ಸಾಂಸ್ಕೃತಿಕ ಚಟುವಟಿಕೆಗಳ ಪ್ರಮುಖ ಕೇಂದ್ರವಾಗಿರುವುದರಿಂದ, ಕಾಂಪೌಂಡ್ ವಾಲ್ ನಿರ್ಮಾಣ ನಮ್ಮ ಸಾಮಾಜಿಕ ಹೊಣೆಗಾರಿಕೆಯ ಭಾಗ,” ಎಂದು ತಿಳಿಸಿದರು.
ಗ್ರಾಮದ ಹಿರಿಯ ಮುಖಂಡರು CSR ಯೋಜನೆಯಡಿ ದೊರೆತ ಸಹಾಯಕ್ಕೆ ಧನ್ಯವಾದ ವ್ಯಕ್ತಪಡಿಸಿ, “ಗ್ರಾಮದ ಶಿಕ್ಷಣ ಮತ್ತು ಸಮುದಾಯದ ಅಭಿವೃದ್ಧಿಗಾಗಿ SLR ಮೆಟಾಲಿಕ್ಸ್ ಸಂಸ್ಥೆ ಈಗಾಗಲೇ ಹಲವು ಯೋಜನೆಗಳ ಮೂಲಕ ಬೆಂಬಲ ನೀಡಿದೆ. ವಾಲ್ಮೀಕಿ ಭವನದ ಅಭಿವೃದ್ಧಿಗೆ ಇದು ಮಹತ್ವದ ಹೆಜ್ಜೆ,” ಎಂದು ಹೇಳಿದರು.
ಈ ಸಂದರ್ಭದಲ್ಲಿ ಗ್ರಾಮದ K. ಸಕ್ರಪ್ಪ, C. ಬಸವರಾಜ್, C. ಹನುಮಂತಪ್ಪ, T. ಹನುಮಂತಪ್ಪ, ಮರಾಠಿ ಚಂದ್ರಪ್ಪ, ಗ್ರಾ.ಪಂ. ಸದಸ್ಯರು ಸೋಗಿ ನಾಗರಾಜ, T. ಜಯಂತ್, ಸೋಮಪ್ಪ, KB. ಸತೀಶ, KB. ಮಹೇಶ, P. ಜಂಭಯ, D. ಮಂಜುನಾಥ, ಉಪ್ಪಾರ್ ಬಸಪ್ಪ, ಊರಿನ ಮುಖಂಡರು, ಯುವಕರು ಹಾಗೂ ಕಂಪನಿಯ ಅಧಿಕಾರಿಗಳಾದ ವೇದವ್ಯಾಸ, ತಂಬ್ರಹಳ್ಳಿ ಅಂಬರೀಶ್, ಸುನಿಲ್, ಮಲ್ಲಿಕಾರ್ಜುನ ಕೊಟ್ಟಾಲ್, ಮಾರುತಿ ಗೋಷಿ, ಶಿವಕುಮಾರ ಸೇರಿದಂತೆ ಹಲವರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
ಇತರೆ ಸುದ್ದಿಗಳು