ವಿವ ನ್ಯೂಸ್ ಕನ್ನಡ - ಇದು ಸುದ್ದಿಗಳ ಡಬ್ಬಿ

1990ರಲ್ಲಿ ₹1 ಲಕ್ಷದ ಷೇರು ಖರೀದಿಸಿ ಮರೆತಿದ್ದ ಅಪ್ಪ, ಮಗನಿಗೆ ಜಾಕ್‌ಪಾಟ್‌, ಈಗಿನ ಮೌಲ್ಯ ಎಷ್ಟು ಕೋಟಿ ಗೊತ್ತಾ?
ವರದಿಗಾರರು : ಡಿ ಬಿ ರಾಜೇಂದ್ರ | ಸ್ಥಳ : ಹುಬ್ಬಳ್ಳಿ | ದಿನಾಂಕ : 10-06-2025

1990ರಲ್ಲಿ ₹1 ಲಕ್ಷದ ಷೇರು ಖರೀದಿಸಿ ಮರೆತಿದ್ದ ಅಪ್ಪ, ಮಗನಿಗೆ ಜಾಕ್‌ಪಾಟ್‌, ಈಗಿನ ಮೌಲ್ಯ ಎಷ್ಟು ಕೋಟಿ ಗೊತ್ತಾ?

ಹೈಲೈಟ್ಸ್‌: ಮಾರುಕಟ್ಟೆಯಲ್ಲಿ 'ಖರೀದಿಸಿ ಮರೆತುಬಿಡಿ' ಎಂಬ ಮಾತಿಗೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಿದೆ ನಿದರ್ಶನ ಮಗನಿಗೆ ಸಿಕ್ಕಿವೆ 1990ರಲ್ಲಿ ತಂದೆ ಹೂಡಿಕೆ ಮಾಡಿ ಮರೆತು ಬಿಟ್ಟಿದ್ದ ಜೆಎಸ್‌ಡಬ್ಲ್ಯು ಸ್ಟೀಲ್‌ ಷೇರುಗಳು ತಂದೆ ಮಾಡಿದ್ದ 1 ಲಕ್ಷ ರೂ. ಹೂಡಿಕೆ ಮೌಲ್ಯ ಇದೀಗ ಬರೋಬ್ಬರಿ 80 ಕೋಟಿ ರೂ., ಮಗನಿಗೆ ಜಾಕ್‌ಪಾಟ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ ಈ ಸುದ್ದಿ, ಸಾರಿ ಹೇಳುತ್ತಿದೆ ದೀರ್ಘ ಹೂಡಿಕೆಯ ಮಹತ್ವ

ಮಾರುಕಟ್ಟೆಯಲ್ಲಿ 'ಸರಿಯಾದ ಷೇರು ಖರೀದಿಸಿ ಮರೆತುಬಿಡಿ' ಎಂಬ ಮಾತಿಗೆ ನಿದರ್ಶನ ಎಂಬಂತೆ, 1990ರಲ್ಲಿ ತಂದೆ ಹೂಡಿಕೆ ಮಾಡಿದ ಜೆಎಸ್‌ಡಬ್ಲ್ಯು ಸ್ಟೀಲ್‌ನ ಷೇರುಗಳು ಮೂರು ದಶಕಗಳ ಬಳಿಕ ಮಗನಿಗೆ ಸಿಕ್ಕಿವೆ. ತಂದೆ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದು, ಈಗ ಅದರ ಮೌಲ್ಯ ಬರೋಬ್ಬರಿ 80 ಕೋಟಿ ರೂಪಾಯಿ ಆಗಿದೆ. ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹೂಡಿಕೆಯ ಮಹತ್ವವನ್ನು ಸಾರಿ ಹೇಳುತ್ತಿದೆ.

ಷೇರು ಮಾರುಕಟ್ಟೆಯಲ್ಲಿ ಒಂದು ಮಾತಿದೆ, 'ಸರಿಯಾದ ಷೇರು ಖರೀದಿ ಮತ್ತು ಮರೆತುಬಿಡಿ' ಎಂಬುದು. ಅದಕ್ಕೆ ಕ್ಲಾಸಿಕ್‌ ಉದಾಹರಣೆಯೊಂದು ಇದೀಗ ಸಿಕ್ಕಿದೆ. 1990ರ ದಶಕದಲ್ಲಿ ತಂದೆ ಕೇವಲ 1 ಲಕ್ಷ ರೂ. ಹೂಡಿಕೆ ಮಾಡಿ ಜೆಎಸ್‌ಡಬ್ಲ್ಯು ಸ್ಟೀಲ್ (ಆಗ ಜಿಂದಾಲ್‌ ವಿಜಯನಗರ ಸ್ಟೀಲ್‌ ಪ್ರೈ. ಲಿ.) ಷೇರುಗಳನ್ನು ಖರೀದಿಸಿದ್ದರು. ಆದರೆ ಅದನ್ನು ಮರೆತು ಬಿಟ್ಟಿದ್ದರು. ಎಷ್ಟು ಮರೆತುಬಿಟ್ಟಿದ್ದರೆಂದರೆ, ಅವರಿಗೂ ನೆನಪಿರಲಿಲ್ಲ; ಮಗನಿಗೂ ಹೇಳಿರಲಿಲ್ಲ ಇದೀಗ ಆ ಷೇರು ಖರೀದಿ ಪ್ರಮಾಣಪತ್ರಗಳು ಮಗನ ಕೈಗೆ ಸಿಕ್ಕಿವೆ. ಅದೂ ಮೂರು ದಶಕಗಳ ಬಳಿಕ. ಈ ಮೂಲಕ ಮಗನಿಗೆ ನಿಧಿ ಸಿಕ್ಕಿದಂತಾಗಿದೆ. ಏಕಾಏಕಿ ಆತ ಕೋಟ್ಯಧಿಪತಿಯಾಗಿದ್ದಾನೆ. ಈ ವಿಷಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಮಯವೇ ಎಲ್ಲಕ್ಕಿಂತ ಶಕ್ತಿಶಾಲಿ ಹೂಡಿಕೆ ಎಂದು ಮತ್ತೊಮ್ಮೆ ಸಾಬೀತಾಗಿದೆ. ಸೌರವ್ ದತ್ತಾ ಎಂಬವರು ಈ ವಿಚಾರವನ್ನು ಬಹಿರಂಗಪಡಿಸಿದ್ದಾರೆ. ಜೊತೆಗೆ ಮೂಲ ಪ್ರಮಾಣಪತ್ರಗಳ ಚಿತ್ರಗಳನ್ನೂ ಎಕ್ಸ್‌ನಲ್ಲಿ ಹಂಚಿಕೊಂಡಿದ್ದಾರೆ. "ರೆಡ್ಡಿಟ್‌ನಲ್ಲಿರುವ ವ್ಯಕ್ತಿಯೊಬ್ಬರು 1990ರ ದಶಕದಲ್ಲಿ ಅವರ ತಂದೆ 1 ಲಕ್ಷ ರೂ.ಗಳಿಗೆ ಖರೀದಿಸಿದ ಜೆಎಸ್‌ಡಬ್ಲ್ಯು ಷೇರುಗಳನ್ನು ಕಂಡುಹಿಡಿದಿದ್ದಾರೆ," ಎಂದು ಬರೆದುಕೊಂಡಿದ್ದಾರೆ. ಸೌರವ್‌ ದತ್ತಾ ಅವರು ಈ ಷೇರುಗಳ ಪ್ರಸ್ತುತ ಮೌಲ್ಯವನ್ನು ಲೆಕ್ಕ ಹಾಕಿದ್ದಾರೆ. ಹಾಗೆ ಲೆಕ್ಕ ಹಾಕಿದಾಗ ಬಂದ ಮೊತ್ತ ಬರೋಬ್ಬರಿ 80 ಕೋಟಿ ರೂಪಾಯಿ. ಇದನ್ನು ನೋಡಿ ಅವರು, 'ಖರೀದಿಸಿ 30 ವರ್ಷಗಳ ನಂತರ ಮಾರಾಟ ಮಾಡಿ' ಎಂದು ಘೋಷಿಸಿದ್ದಾರೆ. ಜೆಎಸ್‌ಡಬ್ಲ್ಯು ಸ್ಟೀಲ್ ಲಿ. ಷೇರು ಪ್ರಸ್ತುತ 1,006.45 ರೂ.ನಲ್ಲಿ ವಹಿವಾಟು ನಡೆಸುತ್ತಿದೆ. ಸೋಮವಾರ ಕೂಡ ಷೇರು 1.55 ರೂ. ಅಥವಾ ಶೇ. 0.15ರಷ್ಟು ಏರಿಕೆ ಕಂಡಿದೆ. ಇದಕ್ಕೆ ಹಲವರು ಪ್ರತಿಕ್ರಿಯೆಗಳನ್ನು ಕೂಡ ನೀಡಿದ್ದಾರೆ. 80 ಕೋಟಿ ರೂ.ಗಳಿಗೆ ಎಷ್ಟು ತೆರಿಗೆ ವಿಧಿಸಲಾಗುತ್ತದೆ? ಎಂದು ಒಬ್ಬರು ಪ್ರಶ್ನಿಸಿದ್ದು ಬಹುಶಃ ಶೇ. 30ರಷ್ಟು ಇರಬಹುದು ಎಂದು ಹೇಳಿದ್ದಾರೆ. ಶೇ. 30ರಷ್ಟು ತೆರಿಗೆ ಎಂದರೆ 24 ಕೋಟಿ ರೂ. ಆಗುತ್ತದೆ. ಷೇರು ಮಾರುಕಟ್ಟೆ 1990ರಲ್ಲಿ ₹1 ಲಕ್ಷದ ಷೇರು ಖರೀದಿಸಿ ಮರೆತಿದ್ದ ಅಪ್ಪ, ಮಗನಿಗೆ ಜಾಕ್‌ಪಾಟ್‌, ಈಗಿನ ಮೌಲ್ಯ ಎಷ್ಟು ಕೋಟಿ ಗೊತ್ತಾ? ಮಾರುಕಟ್ಟೆಯಲ್ಲಿ 'ಸರಿಯಾದ ಷೇರು ಖರೀದಿಸಿ ಮರೆತುಬಿಡಿ' ಎಂಬ ಮಾತಿಗೆ ನಿದರ್ಶನ ಎಂಬಂತೆ, 1990ರಲ್ಲಿ ತಂದೆ ಹೂಡಿಕೆ ಮಾಡಿದ ಜೆಎಸ್‌ಡಬ್ಲ್ಯು ಸ್ಟೀಲ್‌ನ ಷೇರುಗಳು ಮೂರು ದಶಕಗಳ ಬಳಿಕ ಮಗನಿಗೆ ಸಿಕ್ಕಿವೆ. ತಂದೆ 1 ಲಕ್ಷ ರೂಪಾಯಿ ಹೂಡಿಕೆ ಮಾಡಿದ್ದು, ಈಗ ಅದರ ಮೌಲ್ಯ ಬರೋಬ್ಬರಿ 80 ಕೋಟಿ ರೂಪಾಯಿ ಆಗಿದೆ. ಈ ವಿಷಯ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಹೂಡಿಕೆಯ ಮಹತ್ವವನ್ನು ಸಾರಿ ಹೇಳುತ್ತಿದೆ.

ಇತರೆ ಸುದ್ದಿಗಳು

ಶಿವಭಕ್ತಿಗೆ ಹೊಸ ಆಯಾಮ: ಜಗತ್ತಿನ ಅತಿ ದೊಡ್ಡ ಶಿವಲಿಂಗ ನಿರ್ಮಿಸಿ ಇತಿಹಾಸ ಬರೆದ ಭಾರತ

Views : 49039+

ಇತಿಹಾಸದಲ್ಲೇ ಒಂದು ವಿಶೇಷ ರೆಕಾರ್ಡ್ ಅನ್ನು ಸೃಷ್ಟಿಸಿದ ನಟ ಕಿಚ್ಚ ಸುದೀಪ್ “

Views : 49072+

ರಿಲೇಷನ್ಶಿಪ್ ಹಾಗೂ ಜವಾಬ್ದಾರಿಗಳಿಂದ ವಿರಾಮ ಘೋಷಿಸಿದ ಗಾಯಕಿ “ನೆಹಾ ಕಕ್ಕರ್”

Views : 49073+

ತಾಂತ್ರಿಕ ಸಮಸ್ಯೆಗಳು ಹೆಚ್ಚಳ: ಇ-ಖಾತೆ ಪಡೆಯಲು ಜನರ ಸಂಕಷ್ಟ

Views : 49101+

ಹುಣಸೂರಿನ ಬ್ರಹ್ಮಕುಮಾರಿ ಪ್ರಜಾಪಿತ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಬಾಬಾ ರವರ 57ನೇ ಸ್ಮೃತಿ ದಿನವನ್ನು ಆಚರಿಸ

Views : 49266+

ಶ್ರೀ ಮತಿ ಮಿನಾಕ್ಷಿ ಮದಾಪ್ಪಾ ಅವರ ಅಧ್ಯಕ್ಷತೆಯಲ್ಲಿ ಮಹಾಕವಿ ವೇಮನ್ ಅವರ ಜಂಯತೋತ್ಸವ ಆಚರಿಸಿದ ಆಣದೂರ ಗ್ರಾಮ ಪ�

Views : 49333+

ಮದ್ದೂರು | ಹೈಕೋರ್ಟ್ ನ್ಯಾಯಮೂರ್ತಿಗಳಿಂದ ಕಾಮಗಾರಿಗಳ ಪರಿಶೀಲನೆ

Views : 49454+

ಧೂಮಪಾನಕ್ಕೂ ಮೀರಿದ ಅಪಾಯ: ಪ್ರತಿದಿನ ಹೆಚ್ಚುತ್ತಿರುವ ಸಾವುಗಳು

Views : 49639+

ಅಮವಾಸ್ಯೆ ಮರುದಿನ ಹನೂರು ತಾಲ್ಲೂಕಿನಲ್ಲಿ ಬಸ್ ಕೊರತೆ: ಗ್ರಾಮೀಣ ವಿದ್ಯಾರ್ಥಿಗಳಿಗೆ ಶಾಲೆ–ಕಾಲೇಜು ಪ್ರಯಾಣ ದು�

Views : 49584+

ಹನುಮಂತ ಹೊತ್ತು ತಂದ ಪರ್ವತ ನೋಡಿ ಆಶ್ಚರ್ಯಚಕಿತರಾದರು!

Views : 49751+

4610 ದೇವಸ್ಥಾನಗಳು ನಾಪತ್ತೆಯಾಗಿದ್ದು ನಿಜಾನಾ? ಮುಜರಾಯಿ ಇಲಾಖೆ ಹೇಳಿದ್ದೇನು ಗೊತ್ತಾ?

Views : 49756+

ಅಕ್ರಮ ಮಣ್ಣು ಸಾಗಣೆ ಸೇರಿ ವಿವಿಧ ಆರೋಪಗಳ ಸಾಕ್ಷ್ಯಗಳೊಂದಿಗೆ ಪ್ರತಿಭಟನಾ ಮೆರವಣಿಗೆ, ಜ.19ಕ್ಕೆ ದಾವಣಗೆರೆ ಗ್ರಾಮ

Views : 49773+

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಸಚಿವರ ವಿರುದ್ಧ ರಾಜ್ಯಪಾಲರಿಗೆ ದೂರು: ಬಿಜೆಪಿ ಶಾಸಕ ಬಿ. ಪಿ. ಹರೀಶ್

Views : 49770+

ಗಾಂಧಿ ಗ್ರಾಮ ಪ್ರಶಸ್ತಿಯಲ್ಲಿ ತಾರತಮ್ಯ ಆರೋಪ ಜನವರಿ 19ರಂದು ಗ್ರಾಮಸ್ಥರಿಂದ ಜಿ.ಪಂ ಎದುರಗಡೆ ಧರಣಿ

Views : 49795+

ಇತಿಹಾಸಕ್ಕೆ ಸಾಕ್ಷಿಯಾದ ಕ್ಯಾಮೇನಹಳ್ಳಿ ರಾಸುಗಳ ಜಾತ್ರೆ.. ಕಮನೀಯ ಕ್ಷೇತ್ರದಲ್ಲಿ ಕಾಮಧೇನುಗಳ ಜಾತ್ರೆ ಹಬ್ಬ..

Views : 49816+

ದ್ವಿಚಕ್ರ ವಾಹನ ಸವಾರರಿಗೆ ಹೊಸ ನಿಯಮ: ಎಬಿಎಸ್ ಕಡ್ಡಾಯ ಎಂದ “ನಿತಿನ್ ಗಡ್ಕರಿ”

Views : 51274+

ವೇಗ ಬೇಡ, ಜೀವ ಬೇಕು: 10 ನಿಮಿಷ ಡೆಲಿವರಿ ವಿರುದ್ಧ ಕಾರ್ಮಿಕರ ಮನವಿ

Views : 51359+

ಕಾಲೋನಿಯ ಪ್ರತಿಯೊಂದು ಮನೆಗೆ ತೆರಳಿ ಸಿಹಿ ತಿಂಡಿ ತಿನಿಸುಗಳನ್ನು ನೀಡಿ ಹಿರಿಯರ ಆಶಿರ್ವಾದ ಪಡೆಯುವ ಮೂಲಕ ಮಕರ ಸ

Views : 51683+

ದರ್ಭಾಂಗ ರಾಜಮನೆತನದ ಕೊಂಡಿ ಕಳಚಿತು: ಕಾಮಸುಂದರಿ ದೇವಿ ನಿಧನ

Views : 51688+

ಕೆಂಪೇಗೌಡ ಯುವಶಕ್ತಿ ವೇದಿಕೆಯ 8ನೇ ವಾರ್ಷಿಕೋತ್ಸವ: ಯಲಿಯೂರಿನಲ್ಲಿ ಸಂಕ್ರಾಂತಿ ಸಂಭ್ರಮ

Views : 52121+

ಈ ಊರಲ್ಲಿ ಗ್ಯಾಸ್ ಇಲ್ಲ, ಕಟ್ಟಿಗೆಯೂ ಇಲ್ಲ! ಹಾಗಾದ್ರೆ ಅಡುಗೆ ಆಗೋದು ಹೇಗೆ? ತಿಳಿದ್ರೆ ಆಶ್ಚರ್ಯವಾಗುತ್ತೆ!

Views : 52106+

ವಿಧವೆ ಸೊಸೆಗೆ ನ್ಯಾಯ: ಮಾವನ ಆಸ್ತಿಯಿಂದ ಜೀವನಾಂಶ ನೀಡಲು ಸುಪ್ರೀಂಕೋರ್ಟ್ ಮಹತ್ವದ ತೀರ್ಪು

Views : 57065+

ನಮ್ಮ ಮೆಟ್ರೋ' ಪ್ರಯಾಣಿಕರಿಗೆ ಸಿಹಿ ಸುದ್ದಿ : QR ಕೋಡ್ ಆಧಾರಿತ ಅನ್'ಲಿಮಿಟೆಡ್ ಪಾಸ್ ನಾಳೆಯಿಂದಲೇ ಜಾರಿ

Views : 57048+

ಅರಳಿ ಮರವು ಎಲ್ಲಾ ಮರಗಳ ತಾಯಿ ಮರವಾಗಿದೆ” – ಡಾ. ಪಿ.ಎಸ್. ಲಕ್ಕಿ

Views : 57058+