ವರದಿಗಾರರು :
ಮೖಬೂಬಬಾಶಾ ಮನಗೂಳಿ. ||
ಸ್ಥಳ :
ಕಲಕೇರಿ
ವರದಿ ದಿನಾಂಕ :
01-12-2025
ಕಲಕೇರಿ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಧರ್ಮಸ್ಥಳ ಯೋಜನೆ ವಲಯ ಒಕ್ಕೂಟ ಸಭೆ
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಬಿ.ಸಿ. ಟ್ರಸ್ಟ್) ವತಿಯಿಂದ ಸಿಂದಗಿ ತಾಲೂಕಿನ ಕಲಕೇರಿ ವಲಯ ಮಟ್ಟದ ಒಕ್ಕೂಟ ಸಭೆ ಕಲಕೇರಿ ಬಸವೇಶ್ವರ ಕಲ್ಯಾಣ ಮಂಟಪದಲ್ಲಿ ಜರುಗಿತು. ಪರಮ ಪೂಜ್ಯ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರ ಆಶ್ರಯದಲ್ಲಿ ನಡೆದ ಈ ಸಭೆಯಲ್ಲಿ ಜಿಲ್ಲಾ ವಿಚಕ್ಷಣಾಧಿಕಾರಿ ಯಮನೂರಪ್ಪ, ಸಿಂದಗಿ ತಾಲೂಕು ಯೋಜನಾ ಅಧಿಕಾರಿ ಬಿನೋಯ್, ವಲಯದ ಮೇಲ್ವಿಚಾರಕರು ಸಿದ್ದಲಿಂಗಪ್ಪ ಪಾಟೀಲ್, ರಮೇಶ್ ಹೆಂಡಿ, ರಾಜು ಅಡಿಕಿ, ಸೇವಾ ಪ್ರತಿನಿಧಿಗಳು ಹಾಗೂ ಒಕ್ಕೂಟದ ಪದಾಧಿಕಾರಿಗಳು ಭಾಗವಹಿಸಿದ್ದರು.
ಸಭೆಯಲ್ಲಿ ಗ್ರಾಮಾಭಿವೃದ್ಧಿ ಕಾರ್ಯಗಳ ಪ್ರಗತಿ, ವಲಯದ ವಿವಿಧ ಯೋಜನೆಗಳ ಜಾರಿ, ಮತ್ತು ಒಕ್ಕೂಟದ ಬಲವರ್ಧನೆ ಕುರಿತಂತೆ ಚರ್ಚೆ ನಡೆಯಿತು. ನಂತರ ಪದಾಧಿಕಾರಿಗಳಿಗೆ ವಿಶೇಷ ತರಬೇತಿ ಕಾರ್ಯಕ್ರಮವನ್ನು ಕೂಡ ಆಯೋಜಿಸಲಾಗಿತ್ತು. ಕಾರ್ಯಕ್ರಮದ ಎಲ್ಲ ಹಂತಗಳಲ್ಲಿ ಅಧಿಕಾರಿಗಳು ಹಾಗೂ ಸೇವಾ ಪ್ರತಿನಿಧಿಗಳು ಸಕ್ರಿಯವಾಗಿ ಪಾಲ್ಗೊಂಡು ಕಾರ್ಯಕ್ರಮವನ್ನು ಯಶಸ್ವಿಯಾಗಿ ನಡೆಸಿಕೊಟ್ಟರು.
