ವಿವ ನ್ಯೂಸ್ ಕನ್ನಡ - ಇದು ಸುದ್ದಿಗಳ ಡಬ್ಬಿ

ನಾಯಕತ್ವ ಚರ್ಚೆ ಅನಗತ್ಯ: ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ
ವರದಿಗಾರರು : ಕೆ ಜಿ ಸುರೇಶ | ಸ್ಥಳ : ಹಾಸನ | ದಿನಾಂಕ : 29-11-2025

ನಾಯಕತ್ವ ಚರ್ಚೆ ಅನಗತ್ಯ: ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ

ಹಾಸನ: ರಾಜ್ಯ ರಾಜಕೀಯದಲ್ಲಿ ನಾಯಕತ್ವ ಬದಲಾವಣೆ ಕುರಿತು ನಡೆಯುತ್ತಿರುವ ಚರ್ಚೆಗಳು ವಾಸ್ತವಕ್ಕಿಂತ ಹೆಚ್ಚು ಅತಿಶಯೋಕ್ತಿಯಾಗಿದೆ, ಸಾರ್ವಜನಿಕರಿಗೆ ಯಾವುದೇ ಪ್ರಯೋಜನವಿಲ್ಲ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ. ಹಾಸನ ನಗರದಲ್ಲಿ ಮುಖ್ಯಮಂತ್ರಿಗಳ ಭೇಟಿ ವ್ಯವಸ್ಥೆ ಪರಿಶೀಲಿಸಿ ಅಧಿಕಾರಿಗಳ ಸಭೆ ನಡೆಸಿದ ನಂತರ ಅವರು ಮಾತನಾಡಿದರು. “ನನಗೆ ಈಗ ಕೆಲಸ ತುಂಬಾ ಕೊಟ್ಟಿದ್ದಾರೆ; ಅದನ್ನೇ ನಾನು ಮಾಡುತ್ತೇನೆ. ಹೊಟ್ಟೆಗೆ ಹಿಟ್ಟು ಇಲ್ಲದೆ ಜುಟ್ಟಿಗೆ ಮಲ್ಲಿಗೆ ಹೂ ಎಂಬಂತೆ ಜನರಿಗೆ ಪ್ರಯೋಜನವಿಲ್ಲದ ಚರ್ಚೆಗಳಲ್ಲಿ ನಾನು ಭಾಗವಹಿಸುವುದಿಲ್ಲ,” ಎಂದು ಸಚಿವರು ಸ್ಪಷ್ಟಪಡಿಸಿದರು. ಮಠಾಧೀಶರ ಹೇಳಿಕೆ ಕುರಿತು ಪ್ರತಿಕ್ರಿಯಿಸಿದ ಅವರು, “ವಿಷಯಕ್ಕೆ ಅತಿರೇಕದ ಉತ್ಪ್ರೇಕ್ಷೆ ನೀಡುವ ಅವಶ್ಯಕತೆ ಇಲ್ಲ. ಚರ್ಚೆಗೆ ಮಿತಿ ಇರಬೇಕು,” ಎಂದರು.

ಬೆಳೆ ಪರಿಹಾರ—ಕೇಂದ್ರದಿಂದ ನೆರವಿಗೆ ನಿರೀಕ್ಷೆ ರಾಜ್ಯ ಸರ್ಕಾರ ಈಗಾಗಲೇ ₹2251 ಕೋಟಿ ಬೆಳೆ ಪರಿಹಾರವನ್ನು ರೈತರಿಗೆ ವಿತರಿಸಿದೆ ಎಂದು ಸಚಿವರು ತಿಳಿಸಿದರು. ಅತಿವೃಷ್ಟಿಯಿಂದ ಹಾನಿಯಾದ ಮೂಲಸೌಕರ್ಯಗಳಿಗೆ ಕೇಂದ್ರ ಸರ್ಕಾರದಿಂದ ₹1521 ಕೋಟಿ ನೆರವು ಕೋರಿ ಮನವಿ ಸಲ್ಲಿಸಲಾಗಿದೆ. “ಪ್ರಧಾನಿ ಮೋದಿ ಕರ್ನಾಟಕಕ್ಕೆ ಬಂದಿರುವುದರಿಂದ ರಾಜ್ಯಕ್ಕೆ ನ್ಯಾಯ ದೊರಕಬೇಕೆಂಬ ಭರವಸೆ ಜನತೆಗೆ ನೀಡಬೇಕು,” ಎಂದು ಅವರು ಒತ್ತಾಯಿಸಿದರು. ಎಂಎಸ್‌ಪಿ ಕುರಿತು ಮಾತನಾಡಿದ ಅವರು, “ಕೇಂದ್ರ ಸರ್ಕಾರ ಘೋಷಣೆ ಮಾಡಿದರೂ ಬೆಂಬಲ ಬೆಲೆ ಜಾರಿ ಮಾಡಲು ವಿಫಲವಾಗಿದೆ. ಕರ್ನಾಟಕಕ್ಕೆ ಅನ್ಯಾಯವಾಗುತ್ತಿದ್ದರೂ ಬಿಜೆಪಿ ಸಂಸದರು ಮೌನವಾಗಿದ್ದಾರೆ,” ಎಂದು ಟೀಕಿಸಿದರು

ಹಾಸನ ಜಿಲ್ಲೆಯಲ್ಲಿ ದಾಖಲೆ ಮಟ್ಟದ ಜಮೀನು ಸರ್ವೆ ಹಾಸನದಲ್ಲಿ 15,000 ಜಮೀನುಗಳ ಅಳತೆ ಪೂರ್ಣಗೊಂಡಿದ್ದು, 24,000 ರೈತರಿಗೆ ಪೋಡಿ ಮತ್ತು ಹಕ್ಕುಪತ್ರ ಸಿದ್ಧಪಡಿಸುವ ಕಾರ್ಯ ಪ್ರಗತಿಯಲ್ಲಿ ಇದೆ. “ಕಳೆದ 14 ವರ್ಷಗಳಲ್ಲಿ ಜಿಲ್ಲೆಯಲ್ಲಿ ಕೇವಲ 2,444 ಜಮೀನುಗಳಿಗೆ ಮಾತ್ರ ಸರ್ವೆ ನಡೆಸಲಾಗಿದೆ. ಈ ಬಾರಿ 2 ತಿಂಗಳಲ್ಲಿ 10,000 ಜಮೀನು ಸರ್ವೆ ಮಾಡುವ ಗುರಿ ಹೊಂದಿದ್ದೇವೆ,” ಎಂದರು.

ಸಿ.ಎಂ. ಚಾಲನೆ ನೀಡಲಿರುವ ₹250 ಕೋಟಿ ಅಭಿವೃದ್ಧಿ ಯೋಜನೆಗಳು ಡಿ. 6 ರಂದು ಮುಖ್ಯಮಂತ್ರಿ ಹಾಸನ ಜಿಲ್ಲೆಯಲ್ಲಿ ಕೆಳಗಿನ ಯೋಜನೆಗಳಿಗೆ ಚಾಲನೆ ನೀಡಲಿದ್ದಾರೆ: ಹಿಮ್ಸ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ – ₹55 ಕೋಟಿ ಚನ್ನರಾಯಪಟ್ಟಣ ನೀರಾವರಿ ಯೋಜನೆ – ₹74 ಕೋಟಿ ಇತರೆ ವಿವಿಧ ಅಭಿವೃದ್ಧಿ ಕಾಮಗಾರಿಗಳು ಸೇರಿ ಒಟ್ಟು ₹250 ಕೋಟಿ ಈ ಸಂದರ್ಭದಲ್ಲಿ ಸಂಸದ ಶ್ರೇಯಸ್ ಪಟೇಲ್, ಶಾಸಕ ಕೆ.ಎಂ. ಶಿವಲಿಂಗೇಗೌಡ, ಜಿಲ್ಲಾಧಿಕಾರಿ ಲತಾಕುಮಾರಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಸಭೆಯಲ್ಲಿ ಸಚಿವರು ನೀಡಿದ ಮುಖ್ಯ ನಿರ್ದೇಶನಗಳು ಕಾರ್ಯಕ್ರಮಗಳಿಗೆ ಅನಗತ್ಯ ದುಂದು ವೆಚ್ಚ ಮಾಡಬಾರದು. ಫಲಾನುಭವಿಗಳಿಗೆ ಹಕ್ಕುಪತ್ರ, ಕ್ರಯಪತ್ರ, ಇ-ಸ್ವತ್ತು ಕಡ್ಡಾಯವಾಗಿ ನೀಡಬೇಕು. ನಾಮಮಾತ್ರದ ಹಕ್ಕುಪತ್ರ ವಿತರಣೆ ನಿಲ್ಲಿಸಿ 100% ಇ-ಸ್ವತ್ತು ಮಾಡಲು ಸೂಚನೆ. “ಪೌತಿಖಾತೆ ಆಂದೋಲನ" ಯಾವುದೇ ಕಾರಣಕ್ಕೂ ನಿಲ್ಲಿಸಬಾರದು. ಫಲಾನುಭವಿಗಳಿಗಾಗಿ ಸುರಕ್ಷಿತ ಸಂಚಾರ, ಆಹಾರ ವ್ಯವಸ್ಥೆ, ದಾಖಲೆಗಳ ಸುರಕ್ಷತೆ ಖಚಿತಪಡಿಸಬೇಕು. ವಿಎ, ಪಿಡಿಓಗಳು ಕರೆತಂದ ಜನರಿಗೆ ಸಂಪೂರ್ಣ ಜವಾಬ್ದಾರರಾಗಿರಬೇಕು.

ಇತರೆ ಸುದ್ದಿಗಳು

ಶಿವಭಕ್ತಿಗೆ ಹೊಸ ಆಯಾಮ: ಜಗತ್ತಿನ ಅತಿ ದೊಡ್ಡ ಶಿವಲಿಂಗ ನಿರ್ಮಿಸಿ ಇತಿಹಾಸ ಬರೆದ ಭಾರತ

Views : 49039+

ಇತಿಹಾಸದಲ್ಲೇ ಒಂದು ವಿಶೇಷ ರೆಕಾರ್ಡ್ ಅನ್ನು ಸೃಷ್ಟಿಸಿದ ನಟ ಕಿಚ್ಚ ಸುದೀಪ್ “

Views : 49072+

ರಿಲೇಷನ್ಶಿಪ್ ಹಾಗೂ ಜವಾಬ್ದಾರಿಗಳಿಂದ ವಿರಾಮ ಘೋಷಿಸಿದ ಗಾಯಕಿ “ನೆಹಾ ಕಕ್ಕರ್”

Views : 49073+

ತಾಂತ್ರಿಕ ಸಮಸ್ಯೆಗಳು ಹೆಚ್ಚಳ: ಇ-ಖಾತೆ ಪಡೆಯಲು ಜನರ ಸಂಕಷ್ಟ

Views : 49101+

ಹುಣಸೂರಿನ ಬ್ರಹ್ಮಕುಮಾರಿ ಪ್ರಜಾಪಿತ ಈಶ್ವರೀಯ ವಿಶ್ವವಿದ್ಯಾಲಯದಲ್ಲಿ ಬಾಬಾ ರವರ 57ನೇ ಸ್ಮೃತಿ ದಿನವನ್ನು ಆಚರಿಸ

Views : 49266+

ಶ್ರೀ ಮತಿ ಮಿನಾಕ್ಷಿ ಮದಾಪ್ಪಾ ಅವರ ಅಧ್ಯಕ್ಷತೆಯಲ್ಲಿ ಮಹಾಕವಿ ವೇಮನ್ ಅವರ ಜಂಯತೋತ್ಸವ ಆಚರಿಸಿದ ಆಣದೂರ ಗ್ರಾಮ ಪ�

Views : 49333+

ಮದ್ದೂರು | ಹೈಕೋರ್ಟ್ ನ್ಯಾಯಮೂರ್ತಿಗಳಿಂದ ಕಾಮಗಾರಿಗಳ ಪರಿಶೀಲನೆ

Views : 49454+

ಧೂಮಪಾನಕ್ಕೂ ಮೀರಿದ ಅಪಾಯ: ಪ್ರತಿದಿನ ಹೆಚ್ಚುತ್ತಿರುವ ಸಾವುಗಳು

Views : 49639+

ಅಮವಾಸ್ಯೆ ಮರುದಿನ ಹನೂರು ತಾಲ್ಲೂಕಿನಲ್ಲಿ ಬಸ್ ಕೊರತೆ: ಗ್ರಾಮೀಣ ವಿದ್ಯಾರ್ಥಿಗಳಿಗೆ ಶಾಲೆ–ಕಾಲೇಜು ಪ್ರಯಾಣ ದು�

Views : 49584+

ಹನುಮಂತ ಹೊತ್ತು ತಂದ ಪರ್ವತ ನೋಡಿ ಆಶ್ಚರ್ಯಚಕಿತರಾದರು!

Views : 49751+

4610 ದೇವಸ್ಥಾನಗಳು ನಾಪತ್ತೆಯಾಗಿದ್ದು ನಿಜಾನಾ? ಮುಜರಾಯಿ ಇಲಾಖೆ ಹೇಳಿದ್ದೇನು ಗೊತ್ತಾ?

Views : 49756+

ಅಕ್ರಮ ಮಣ್ಣು ಸಾಗಣೆ ಸೇರಿ ವಿವಿಧ ಆರೋಪಗಳ ಸಾಕ್ಷ್ಯಗಳೊಂದಿಗೆ ಪ್ರತಿಭಟನಾ ಮೆರವಣಿಗೆ, ಜ.19ಕ್ಕೆ ದಾವಣಗೆರೆ ಗ್ರಾಮ

Views : 49773+

ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ, ಸಚಿವರ ವಿರುದ್ಧ ರಾಜ್ಯಪಾಲರಿಗೆ ದೂರು: ಬಿಜೆಪಿ ಶಾಸಕ ಬಿ. ಪಿ. ಹರೀಶ್

Views : 49770+

ಗಾಂಧಿ ಗ್ರಾಮ ಪ್ರಶಸ್ತಿಯಲ್ಲಿ ತಾರತಮ್ಯ ಆರೋಪ ಜನವರಿ 19ರಂದು ಗ್ರಾಮಸ್ಥರಿಂದ ಜಿ.ಪಂ ಎದುರಗಡೆ ಧರಣಿ

Views : 49795+

ಇತಿಹಾಸಕ್ಕೆ ಸಾಕ್ಷಿಯಾದ ಕ್ಯಾಮೇನಹಳ್ಳಿ ರಾಸುಗಳ ಜಾತ್ರೆ.. ಕಮನೀಯ ಕ್ಷೇತ್ರದಲ್ಲಿ ಕಾಮಧೇನುಗಳ ಜಾತ್ರೆ ಹಬ್ಬ..

Views : 49816+

ದ್ವಿಚಕ್ರ ವಾಹನ ಸವಾರರಿಗೆ ಹೊಸ ನಿಯಮ: ಎಬಿಎಸ್ ಕಡ್ಡಾಯ ಎಂದ “ನಿತಿನ್ ಗಡ್ಕರಿ”

Views : 51274+

ವೇಗ ಬೇಡ, ಜೀವ ಬೇಕು: 10 ನಿಮಿಷ ಡೆಲಿವರಿ ವಿರುದ್ಧ ಕಾರ್ಮಿಕರ ಮನವಿ

Views : 51359+

ಕಾಲೋನಿಯ ಪ್ರತಿಯೊಂದು ಮನೆಗೆ ತೆರಳಿ ಸಿಹಿ ತಿಂಡಿ ತಿನಿಸುಗಳನ್ನು ನೀಡಿ ಹಿರಿಯರ ಆಶಿರ್ವಾದ ಪಡೆಯುವ ಮೂಲಕ ಮಕರ ಸ

Views : 51683+

ದರ್ಭಾಂಗ ರಾಜಮನೆತನದ ಕೊಂಡಿ ಕಳಚಿತು: ಕಾಮಸುಂದರಿ ದೇವಿ ನಿಧನ

Views : 51688+

ಕೆಂಪೇಗೌಡ ಯುವಶಕ್ತಿ ವೇದಿಕೆಯ 8ನೇ ವಾರ್ಷಿಕೋತ್ಸವ: ಯಲಿಯೂರಿನಲ್ಲಿ ಸಂಕ್ರಾಂತಿ ಸಂಭ್ರಮ

Views : 52121+

ಈ ಊರಲ್ಲಿ ಗ್ಯಾಸ್ ಇಲ್ಲ, ಕಟ್ಟಿಗೆಯೂ ಇಲ್ಲ! ಹಾಗಾದ್ರೆ ಅಡುಗೆ ಆಗೋದು ಹೇಗೆ? ತಿಳಿದ್ರೆ ಆಶ್ಚರ್ಯವಾಗುತ್ತೆ!

Views : 52106+

ವಿಧವೆ ಸೊಸೆಗೆ ನ್ಯಾಯ: ಮಾವನ ಆಸ್ತಿಯಿಂದ ಜೀವನಾಂಶ ನೀಡಲು ಸುಪ್ರೀಂಕೋರ್ಟ್ ಮಹತ್ವದ ತೀರ್ಪು

Views : 57066+

ನಮ್ಮ ಮೆಟ್ರೋ' ಪ್ರಯಾಣಿಕರಿಗೆ ಸಿಹಿ ಸುದ್ದಿ : QR ಕೋಡ್ ಆಧಾರಿತ ಅನ್'ಲಿಮಿಟೆಡ್ ಪಾಸ್ ನಾಳೆಯಿಂದಲೇ ಜಾರಿ

Views : 57048+

ಅರಳಿ ಮರವು ಎಲ್ಲಾ ಮರಗಳ ತಾಯಿ ಮರವಾಗಿದೆ” – ಡಾ. ಪಿ.ಎಸ್. ಲಕ್ಕಿ

Views : 57058+