ವರದಿಗಾರರು :
ಮೖಬೂಬಬಾಶಾ ಮನಗೂಳಿ ||
ಸ್ಥಳ :
ತಾಳಿಕೋಟಿ
ವರದಿ ದಿನಾಂಕ :
01-12-2025
ಉಪ್ಪಾರ ಸಮಾಜ ಸೇವಾ ಸಂಘ — ಕಲಕೇರಿ ಘಟಕದ ನೂತನ ಆಡಳಿತ ಮಂಡಳಿ ಘೋಷಣೆ
ಶ್ರೀ ವಂಕಟೇಶ್ವರ ಉಪ್ಪಾರ ಸಮಾಜಾಭಿವೃದ್ಧಿ ಹಾಗೂ ವಿವಿಧೋದ್ದೇಶಗಳ ಸೇವಾ ಸಂಘ, ಕಲಕೇರಿ ಘಟಕದ ನೂತನ ಅಧ್ಯಕ್ಷ, ಉಪಾಧ್ಯಕ್ಷರು ಸೇರಿದಂತೆ ಆಡಳಿತ ಮಂಡಳಿಯ ಸದಸ್ಯರ ಆಯ್ಕೆ ಪ್ರಕ್ರಿಯೆ ಭಾನುವಾರ ಗ್ರಾಮದಲ್ಲಿ ಜರುಗಿತು. ಸಮಾಜದ ಅಭಿವೃದ್ಧಿ ಮತ್ತು ಯುವಕರಿಗೆ ಜವಾಬ್ದಾರಿಯನ್ನು ನೀಡುವ ಉದ್ದೇಶದಿಂದ ಹೊಸ ತಂಡವನ್ನು ಆಯ್ಕೆ ಮಾಡಲಾಗಿದೆ. ಸಮಾಜದ ಮುಖಂಡರಾದ ಶರಣಪ್ಪ ಮೋಪಗಾರ, ಇರುಗಂಟೆಪ್ಪ ಮೋಪಗಾರ, ಸುರೇಶ್ ಮೋಪಗಾರ, ಛತ್ರಪ್ಪ ಮೋಪಗಾರ ಮತ್ತು ಹಳ್ಳೆಪ್ಪ ಮೋಪಗಾರ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು. ಎಲ್ಲ ಮುಖಂಡರ ಒಮ್ಮತದಿಂದ ಹುದ್ದೆದಾರರ ಆಯ್ಕೆ ಘೋಷಣೆಯಾಯಿತು.
ಹೊಸ ಆಡಳಿತ ಮಂಡಳಿ ಅಧ್ಯಕ್ಷ ಮಹಾಂತೇಶ್ ಮೋಪಗಾರ ಉಪಾಧ್ಯಕ್ಷರು ಬಸವರಾಜ್ ಮೋಪಗಾರ ಕಾರ್ಯದರ್ಶಿ ಆನಂದ್ ಇಸ್ಲಾಂಪುರ್ ಸಂಯುಕ್ತ ಕಾರ್ಯದರ್ಶಿ ಶ್ರೀನಿವಾಸ್ ಮೋಪಗಾರ ಖಜಾಂಚಿ ರಮೇಶ್ ಮೋಪಗಾರ ಹೊಸ ಸದಸ್ಯರು ರಾಘವೇಂದ್ರ ಮೋಪಗಾರ ಬಲವಂತಪ್ಪ ಮೋಪಗಾರ ದತ್ತಾತ್ರೇಯ ಮೋಪಗಾರ ಮಡಿವಾಳಪ್ಪ ಮೋಪಗಾರ ಸೋಮನಾಥ್ ಇಸ್ಲಾಂಪುರ್
ಹೊಸ ನೇತೃತ್ವಕ್ಕೆ ಆಶೀರ್ವಾದ – ಮುಖಂಡರ ಸಂದೇಶ ಅಧ್ಯಕ್ಷರಾಗಿ ಆಯ್ಕೆಯಾದ ಮಹಾಂತೇಶ್ ಮೋಪಗಾರ ಮಾತನಾಡಿ, “ನನಗೆ ಸಮಾಜದ ಹಿರಿಯರು ನೀಡಿದ ಜವಾಬ್ದಾರಿಯನ್ನು ನಿಷ್ಠೆಯಿಂದ ನಿರ್ವಹಿಸುತ್ತೇನೆ. ವಯಸ್ಸಿನಲ್ಲಿ ಚಿಕ್ಕವನಾದರೂ ಹಿರಿಯರ ಮಾರ್ಗದರ್ಶನದಲ್ಲಿ ಸಂಘದ ಎಲ್ಲಾ ಕಾರ್ಯಗಳನ್ನು ಚಾಚುತಪ್ಪದೇ ಮಾಡುತ್ತೇನೆ” ಎಂದು ಹೇಳಿದರು. ಸಮಾಜದ ಹಿರಿಯ ಮುಖಂಡ ಶರಣಪ್ಪ ಬಾಲಪ್ಪ ಮೋಪಗಾರ ಹೇಳಿದರು: “ಒಂದೇ ತಾಯಿ ಮಕ್ಕಳಂತೆ ಒಗ್ಗಟ್ಟಿನಿಂದ ಸಂಘವನ್ನು ಬೆಳೆಸಬೇಕು. ನಿಮಗೆ ಕೊಟ್ಟಿರುವ ಅಧಿಕಾರವನ್ನು ಸಮಾಜದ ಹಿತಕ್ಕಾಗಿ ಬಳಸಿಕೊಳ್ಳಿ” ಎಂದು ಯುವಕರಿಗೆ ಸಂದೇಶ ನೀಡಿದರು. ಖಜಾಂಚಿ ರಮೇಶ್ ಮೋಪಗಾರ ಹೇಳಿದರು: “ಸಂಘ ನಮ್ಮದು. ಸಂಘಕ್ಕೆ ಯಾವುದೇ ದೋಷ ಬಾರದಂತೆ ಎಲ್ಲರೂ ಒಂದಾಗಿ ಕೆಲಸ ಮಾಡಬೇಕು. ಅಧ್ಯಕ್ಷರು, ಉಪಾಧ್ಯಕ್ಷರು ಹಾಗೂ ಸದಸ್ಯರು ಒಟ್ಟಾಗಿ ಸಂಘದ ಅಭಿವೃದ್ಧಿಗೆ ಬದ್ಧರಾಗಿರಬೇಕು” ಎಂದರು.
