ಕಾರು ಖದೀಮನನ್ನು ಹಿಡಿದುಕೊಟ್ಟ ಸೊಳ್ಳೆ! ವಿಚಿತ್ರ ರೋಚಕ ಘಟನೆ
ಕಾರಿನ ಕಳ್ಳತನ ಮಾಡುತ್ತಿದ್ದ ಭಯಾನಕ ಖದೀಮನನ್ನು ಹಿಡಿಯುವುದು ಪೊಲೀಸರಿಗೆ ದೊಡ್ಡ ತಲೆನೋವಾಗಿತ್ತು. ಯಾವುದೇ ಕುರುಹು ಬಿಡದ ಈ ಕಳ್ಳ ಘಟಾನುಘಟಿಗಳ ಕಾರುಗಳನ್ನು ಕದಿಯುತ್ತಿದ್ದ. ಆದರೆ ಸಿಸಿಟಿವಿಗೂ ಚಕಮ್ ನೀಡಿ ಪರಾರಿಯಾಗುವಲ್ಲಿ ಯಶಸ್ವಿಯಾಗುತ್ತಿದ್ದ. ಈತನನ್ನು ಹಿಡಿಯುವುದು ಪೊಲೀಸರಿಗೆ ಬಹಳ ದೊಡ್ಡ ತಲೆನೋವಾಗಿ ಹೋಗಿತ್ತು.
ಸಾಮಾನ್ಯ ಜನರ ವಾಹನ ಕಳುವಾದರೆ, ಪೊಲೀಸರು ನಡೆದುಕೊಳ್ಳುವ ರೀತಿಗೂ ಅದೇ ವಿಐಪಿಗಳ ವಾಹನ ಕಳುವಾದರೆ ಹೇಗೆ ನಡೆದುಕೊಳ್ಳುತ್ತಾರೆ ಎನ್ನುವುದು ಬೇರೆ ಹೇಳಬೇಕಿಲ್ಲ. ಕೆಲವೊಂದು ಪ್ರದೇಶಗಳಲ್ಲಿ ಇಂಥವರೇ ಕಳ್ಳರು ಎಂದು ಪೊಲೀಸರಿಗೆ ತಿಳಿದಿರುತ್ತದೆ. ಏಕೆಂದರೆ ಅಂಥ ಖದೀಮರನ್ನು ದಿನನಿತ್ಯವೂ ತಮ್ಮ ಏರಿಯಾದಲ್ಲಿ ಅವರು ನೋಡಿರುತ್ತಾರೆ. ಆದರೆ, ಸಾಮಾನ್ಯ ಜನರು ದ್ವಿಚಕ್ರವಾಹನವನ್ನೋ ಅಥವಾ ಅದೇ ಜಾಗದಲ್ಲಿ ಇನ್ನೇನನ್ನೋ ಕಳೆದುಕೊಂಡಿದ್ದರೆ, ಅವರ ಚಪ್ಪಲಿ ಠಾಣೆಗೆ ಅಲೆದಾಡಿ ಸವೆದರೂ ಕಳ್ಳರು ಮಾತ್ರ ಕೆಲವು ಪೊಲೀಸರಿಗೆ ಸಿಗುವುದೇ ಇಲ್ಲ, ಆದರೆ ಗಣ್ಯರ ವಸ್ತುಗಳು ಕಳುವಾದರೆ ಮಾತ್ರ ಸ್ಥಿತಿ ವಿಭಿನ್ನವಾಗಿರುತ್ತದೆ ಎನ್ನುವ ಗಂಭೀರ ಆರೋಪಗಳು ಇವೆ.
ಇತರೆ ಸುದ್ದಿಗಳು