ಟ್ರಂಪ್ ವಸಾಹತುಶಾಹಿ ಆಡಳಿತಕ್ಕೆ ವೆನಿಜುವೆಲ ಬಲಿಪಶು.
ಇತ್ತೀಚೆಗೆ ದಕ್ಷಿಣ ಅಮೆರಿಕದ ವೆನಿಜುವೆಲ ಅಧ್ಯಕ್ ನಿಕೋಲಾಸ್ ಮಡರೋ ಬಂಧನನದ ಬಳಿಕ ನಡೆದ ವಿದ್ಯಮಾನದಲ್ಲಿ ಅಮೆರಿಕ ಆದ್ಯಕ್ಷ ಡೊನಾಲ್ಡ್ ಟಂಪ್ರ್ ವಸಾಹತುಶಾಹಿ ಆಡಳಿತಕ್ಕೆ ಸಾಕ್ಷಿಯಾಯಿತು. ಪ್ರತಿಸುಂಕಗಳಂತ ವ್ಯಾಪಾರ ವಹಿವಾಟಿನ ಮೇಲೆ ಏಕಮೇವಾಧಿಪತ್ಯ ಸಾಧಿಸ ಹೊರಟ ಟ್ರಂಪ್ ಆಡಳಿತ ಈಗ ಬಲಪ್ರಯೋಗಗಳ ಮೂಲಕ ತನ್ನ ಶಕ್ತಿ ಪ್ರದರ್ಶಿಸುತ್ತಿದೆ.
ಒಂದರ್ಥದಲ್ಲಿ ವೆನಿಜುವೆಲ ಮಾದಕ ದ್ರವ್ಯ ಸಾಗಾಣಿಕೆಯ ನಶೆಯಲ್ಲಿ ತೇಲುತ್ತಿರುವ ಎರಡುವರೆ ಕೋಟಿ ಜನಸಂಖ್ಯೆ ಹೊಂದಿರುವ ದೇಶವಾಗಿದೆ. ಈ ಕುರಿತು ಅಮೆರಿಕ ವೆನಿಜುವೆಲ ದೇಶದ ಮೇಲೆ ಭಾರಿ ಪ್ರಮಾಣದ ನಿಷೇಧ ಹೇರಿತ್ತು. ಅಷ್ಟಲ್ಲದೇ ಪ್ರತಿ ರಪ್ತಿನ ಸಾಗಣಿಕೆಯ ಮೇಲೆ ತೀವ್ರ ನಿಗಾ ವಹಿಸಿತ್ತು
ಆದರೆ ಒಂದು ಮೂಲಗಳ ಪ್ರಕಾರ ಮಾದಕ ದ್ರವ್ಯ ಸಾಗಾಣಿಕೆಗೆ ಒಂದು ಕಾರಣವಾದರೆ ಅಮೆರಿಕ ವೆನಿಜುವೆಲದಲ್ಲಿರುವ ಕಚ್ಚಾ ತೈಲ ನಿಕ್ಷೇಪದಿಂದ ಈ ದಾಳಿ ನಡೆಸಿದೆ ಎಂಬುದು ವಿಶ್ಲೇಷಕರ ಅನಿಸಿಕೆ. ಇದರಿಂದ ವೆನಿಜುವೆಲ ದೇಶವನ್ನ ತನ್ನ ತಕ್ಕೆಗೆ ತಗೆದುಕೊಂಡರೆ ತೈಲ ಬೇಡಿಕೆ ಹೊಂದಿರುವ ರಾಷ್ಟ್ರಗಳಿಗೆ ಅಮೆರಿಕ ತನ್ನ ಸಾಮರ್ಥ್ಯ ತೋರಿಸಬಹುದು ಎಂಬ ವ್ಯವಹಾರಿಕ ಲೆಕ್ಜಾಚಾರದಿಂದ ವೆನಿಜುವೆಲ ದೇಶದ ಮೇಲೆ ದಾಳಿ ನಡೆಸಿ ತನ್ನ ವಶಕ್ಕೆ ಪಡೆದುಕೊಂಡಿದೆ ಎನ್ನಲಾಗುತ್ತಿದೆ.
ಇತರೆ ಸುದ್ದಿಗಳು