ಬೋಧನಾ ಕೊಠಡಿಗಳ ಭೂಮಿ ಪೂಜಾ ಕಾರ್ಯಕ್ರಮ
ಜಮಖಂಡಿ ನಗರದಲ್ಲಿ ಇಂದು ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಅಂದಾಜು ಎರಡು ಕೋಟಿ ಮೌಲ್ಯದ ಬೋಧನಾ ಕೊಠಡಿಗಳ ಭೂಮಿ ಪೂಜೆ ಕಾರ್ಯಕ್ರಮ ನಡೆಯಿತು , ಸ್ಥಳೀಯ ಶಾಸಕರಾದ ನಾಡೋಜ ಶ್ರೀ ಜಗದೀಶ್ ಗುಡಗುಂಟಿ ಅವರು ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು. ಮಹಿಳಾ ಶಿಕ್ಷಣವನ್ನು ಉತ್ತೇಜಿಸಲು ಸರ್ಕಾರ ಮತ್ತು ಅನೇಕ ಸಂಸ್ಥೆಗಳು ವಿವಿಧ ಯೋಜನೆಗಳನ್ನು ಜಾರಿಗೊಳಿಸಿವೆ, ಇದು ಸಮಾಜವನ್ನು ಇನ್ನಷ್ಟು ಬಲಪಡಿಸಲು ಹಾಗೂ ಸಮಾಜದ ಪ್ರಗತಿಗೆ ಅಗತ್ಯವಾಗಿದೆ. ಹಿಂದೆ ಮಹಿಳೆಯರಿಗೆ ಶಿಕ್ಷಣ ಪಡೆಯುವ ಅವಕಾಶಗಳು ಕಡಿಮೆ ಇದ್ದವು ಈಗ ಹಾಗಿಲ್ಲ, ಶಿಕ್ಷಣ ಪಡೆದು ಮಹಿಳೆಯರು ಉದ್ಯೋಗ ಮತ್ತು ರಾಜಕೀಯದಲ್ಲಿ ಪ್ರಮುಖ ಪಾತ್ರ ವಹಿಸುತ್ತಿದ್ದಾರೆ.
ಈ ಕಾರ್ಯಕ್ರಮದಲ್ಲಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರಾದ ಶ್ರೀಮತಿ ಸುನಂದ ಶಿರೂರು, ನಗರ ಮಂಡಲ ಅಧ್ಯಕ್ಷ ಶ್ರೀ ಅಜಯ್ ಕಡಪಟ್ಟಿ, ಹಾಗೂ ಕಾಲೇಜಿನ ವಿದ್ಯಾರ್ಥಿನಿಯರು ಪಾಲ್ಗೊಂಡಿದ್ದರು.
ಇತರೆ ಸುದ್ದಿಗಳು