ಪಂಚಮಸಾಲಿ ಪಂಚಸೇನಾ ರಾಜ್ಯ ಕಾರ್ಯಕಾರಿ ಸಭೆ 24ರಂದು ಕೂಡಲಸಂಗಮದಲ್ಲಿ
ಲಿಂಗಾಯತ ಪಂಚಮಸಾಲಿ ಮಹಾಪೀಠದಲ್ಲಿ ಪ್ರಥಮ ಜಗದ್ಗುರು ಶ್ರೀ ಬಸವ ಜಯಮೃತ್ಯುಂಜಯ ಮಹಾಸ್ವಾಮಿಗಳ ದಿವ್ಯ ಸಾನ್ನಿಧ್ಯದಲ್ಲಿ ಪಂಚಮಸಾಲಿ ಪಂಚಸೇನಾ ರಾಜ್ಯ ಕಾರ್ಯಕಾರಿ ಸಭೆ ನವೆಂಬರ್ 24ರಂದು ನಡೆಯಲಿದೆ.
ಪಂಚಸೇನಾ ರಾಜ್ಯ ಅಧ್ಯಕ್ಷ ರುದ್ರಗೌಡ ಸೋಲಬಗೌಡ್ರ (ಬಂಡಿ) ಅವರ ನೇತೃತ್ವದಲ್ಲಿ ನಡೆಯುವ ಈ ಸಭೆ ಬೆಳಿಗ್ಗೆ 11 ಗಂಟೆಗೆ ಅರ್ಚಕರ ಕಾಲೋನಿ, ಕೂಡಲಸಂಗಮದಲ್ಲಿ ಆರಂಭವಾಗಲಿದ್ದು, ರಾಜ್ಯದ ಎಲ್ಲಾ ವಿಭಾಗಗಳು—ಕಲ್ಯಾಣ ಕರ್ನಾಟಕ ಮತ್ತು ಕಿತ್ತೂರು ಕರ್ನಾಟಕ—ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಪದಾಧಿಕಾರಿಗಳು ಹಾಜರಾಗಲಿದ್ದಾರೆ.
ಸಭೆಗೆ ಸಂಬಂಧಿಸಿದಂತೆ ರಾಜ್ಯ ಪ್ರಧಾನ ಕಾರ್ಯದರ್ಶಿ ಬಸವರಾಜ್ ಮನಗುಂಡಿ ಅವರು, “ಎಲ್ಲಾ ಜಿಲ್ಲಾ ಹಾಗೂ ತಾಲ್ಲೂಕು ಘಟಕಗಳ ಅಧ್ಯಕ್ಷರು ತಮ್ಮ ಪದಾಧಿಕಾರಿಗಳೊಂದಿಗೆ ಕಡ್ಡಾಯವಾಗಿ ಸಭೆಗೆ ಆಗಮಿಸಬೇಕು,” ಎಂದು ಸೂಚನೆ ನೀಡಿದ್ದಾರೆ.
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
ಇತರೆ ಸುದ್ದಿಗಳು