ಒಂದು ದಿನದ ʼದಿವ್ಯ ದರ್ಶನʼ ಪ್ಯಾಕೇಜ್
ಬಿಎಂಟಿಸಿಯಿಂದ ʼದಿವ್ಯ ದರ್ಶನʼ ಎಂಬ ಒಂದು ದಿನದ ಪ್ಯಾಕೇಜ್ ಟೂರ್ ಆರಂಭಿಸಲಾಗಿದ್ದು, ಇದು ನಗರದ ಪ್ರಮುಖ 8 ದೇವಾಲಯಗಳ ದರ್ಶನವನ್ನು ಒಳಗೊಂಡಿದೆ.
ಈ ಪ್ರವಾಸವು ಪ್ರತಿ ಶನಿವಾರ, ಭಾನುವಾರ ಮತ್ತು ಸಾರ್ವತ್ರಿಕ ರಜೆ ದಿನಗಳಲ್ಲಿ ಲಭ್ಯವಿರುತ್ತದೆ. ವಯಸ್ಕರಿಗೆ 450 ರೂಪಾಯಿ ಮತ್ತು ಮಕ್ಕಳಿಗೆ 350 ರೂಪಾಯಿ ದರ ನಿಗದಿಪಡಿಸಲಾಗಿದೆ.
ಪ್ರಯಾಣಿಕರು ಮುಂಗಡ ಆಸನಗಳನ್ನು ಕಾಯ್ದಿರಿಸಲು ಕೆಎಸ್‌ಆರ್‌ಟಿಸಿ ವೆಬ್‌ಸೈಟ್‌ಗೆ ಭೇಟಿ ನೀಡಬಹುದು. ಹೆಚ್ಚಿನ ಮಾಹಿತಿಗೆ ಸಹಾಯವಾಣಿ ಸಂಖ್ಯೆ 080 22483777 ಅಥವಾ 7760991212 ಗೆ ಕರೆ ಮಾಡಬಹುದು.
ಇತರೆ ಸುದ್ದಿಗಳು