ವರದಿಗಾರರು :
ಬಿ. ಎಸ್. ದೇವರಮನಿ ||
ಸ್ಥಳ :
ತಾಳಿಕೋಟಿ
ವರದಿ ದಿನಾಂಕ :
26-11-2025
ತನು ಫೌಂಡೇಶನ್ ರಾಜ್ಯ ಪ್ರಶಸ್ತಿ ಬಸವರಾಜ ಕುಂಬಾರ್ ಅವರಿಗೆ
ತನು ಫೌಂಡೇಶನ್ ನೀಡುವ “ತನು ಕನ್ನಡ ಮನ ಕನ್ನಡ” ರಾಜ್ಯ ಪ್ರಶಸ್ತಿಗೆ ಕಲಕೇರಿ ಬಸವೇಶ್ವರ ಪದವಿ ಪೂರ್ವ ಕಾಲೇಜಿನ ರಾಜ್ಯಶಾಸ್ತ್ರ ಉಪನ್ಯಾಸಕ ಬಸವರಾಜ ಎಂ. ಕುಂಬಾರ ಅವರು ಆಯ್ಕೆಯಾಗಿದ್ದಾರೆ. ಪ್ರಶಸ್ತಿ ಪ್ರಧಾನ ಸಮಾರಂಭವು ನಿನ್ನೆ (ರವಿವಾರ, 23-11-2025) ಸಂಜೆ 5 ಗಂಟೆಗೆ ವಿಜಯಪುರದ ಕಂದಗಲ ಹನುಮಂತರಾಯ ರಂಗಮಂದಿರದಲ್ಲಿ ಜರುಗಿತು. ಪ್ರಶಸ್ತಿಗೆ ಆಯ್ಕೆಯಾದ ಬಸವರಾಜ ಕುಂಬಾರ ಅವರನ್ನು ಬಸವೇಶ್ವರ ಕಾಲೇಜಿನ ಪ್ರಾಚಾರ್ಯರು, ಉಪನ್ಯಾಸಕರು, ಬೋಧಕೇತರ ಸಿಬ್ಬಂದಿ, ಸಂಸ್ಥೆಯ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಆಡಳಿತ ಮಂಡಳಿಯ ಎಲ್ಲಾ ಸದಸ್ಯರು ಹೃತ್ಪೂರ್ವಕವಾಗಿ ಅಭಿನಂದಿಸಿದ್ದಾರೆ.
