ವರದಿಗಾರರು :
ದರ್ಶನ್ ಎಂ ಎನ್. ||
ಸ್ಥಳ :
ದಾವಣಗೆರೆ
ವರದಿ ದಿನಾಂಕ :
29-11-2025
ದಾವಣಗೆರೆ: ಬಾಪೂಜಿ ಇಂಜಿನಿಯರಿಂಗ್ ವಿದ್ಯಾರ್ಥಿಗಳು ಕ್ಯಾಂಪಸ್ ನೇಮಕಾತಿಯಲ್ಲಿ ಪ್ರತಿಭಾವಂತರಾಗಿ ಪ್ರತ್ಯಕ್ಷ
ಇನ್ಫೋಸಿಸ್ ಸೇರಿದಂತೆ ಹಲವು ಪ್ರಮುಖ ಕಂಪನಿಗಳಿಂದ ವಿದ್ಯಾರ್ಥಿಗಳಿಗೆ ನೇಮಕಾತಿ – ವಾರ್ಷಿಕ ವೇತನ 3.6 ಲಕ್ಷದಿಂದ 7 ಲಕ್ಷದವರೆಗೆ ದಾವಣಗೆರೆ: ಬಾಪೂಜಿ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಇತ್ತೀಚಿನ ಕ್ಯಾಂಪಸ್ ನೇಮಕಾತಿಗಳಲ್ಲಿ ಗಮನಾರ್ಹ ಸಾಧನೆಗೈದಿದ್ದಾರೆ. ಇನ್ಫೋಸಿಸ್ ಸಂಸ್ಥೆಯ ಕ್ಯಾಂಪಸ್ ಸಂದರ್ಶನದಲ್ಲಿ ಕಾಲೇಜಿನ ಕಂಪ್ಯೂಟರ್ ಸೈನ್ಸ್, ಎಲೆಕ್ಟ್ರಾನಿಕ್ಸ್, ಮಾಹಿತಿ ತಂತ್ರಜ್ಞಾನ ಮತ್ತು ಕಂಪ್ಯೂಟರ್ ಸೈನ್ಸ್ ಬಿಸಿನೆಸ್ ಸಿಸ್ಟಮ್ ವಿಭಾಗಗಳ ವಿದ್ಯಾರ್ಥಿಗಳು ಆಯ್ಕೆಯಾಗಿದ್ದು, ವಾರ್ಷಿಕ ₹3.6 ಲಕ್ಷ ವೇತನ ಪಡೆದಿದ್ದಾರೆ.
ಇನ್ಫೋಸಿಸ್ ಆಯ್ಕೆಯಾದ ಪ್ರಮುಖ ವಿದ್ಯಾರ್ಥಿಗಳು: ಕಂಪ್ಯೂಟರ್ ಸೈನ್ಸ್: ವಿ. ನಿಹಾರಿಕಾ, ಕೆ. ಆರ್. ಸ್ಪಂದನ, ಕೆ. ಉಮ್ಮೆ ಕಂಪ್ಯೂಟರ್ ಸೈನ್ಸ್ ಡಿಸೈನ್: ಎಂ ಎಸ್. ಅನುಷ ಕಂಪ್ಯೂಟರ್ ಸೈನ್ಸ್ ಬಿಸಿನೆಸ್ ಸಿಸ್ಟಮ್: ಬಿ ಡಿ. ವೈಭವಿ ಎಲೆಕ್ಟ್ರಾನಿಕ್ಸ್: ಪಿ. ಪವಿತ್ರ, ಎಚ್. ಸ್ನೇಹ ಮಾಹಿತಿ ಮತ್ತು ತಂತ್ರಜ್ಞಾನ: ಕೆ ಎಂ ಶ್ರೇಯಾ, ಬಿ. ತನ್ಮಯಿ ಇದೇ ತಿಂಗಳಲ್ಲಿ ನಡೆದ ಇತರ ಕಂಪನಿಗಳ ಕ್ಯಾಂಪಸ್ ಸಂದರ್ಶನಗಳಲ್ಲಿ ವಿದ್ಯಾರ್ಥಿಗಳು ಉತ್ತಮ ವೇತನದೊಂದಿಗೆ ಆಯ್ಕೆಯಾಗಿದ್ದಾರೆ. ಪ್ರೇರಣಾ ಇಂಜಿನಿಯರಿಂಗ್ ವರ್ಕ್ಸ್: ಎಲೆಕ್ಟ್ರಾನಿಕ್ಸ್ ವಿಭಾಗದ ಬಿ ಎಸ್ ಅಶ್ವಥ್ ಮತ್ತು ಎಸ್ ಕೆ. ದರ್ಶನ್ (₹5–7 ಲಕ್ಷ ವಾರ್ಷಿಕ), ಕಂಪ್ಯೂಟರ್ ಸೈನ್ಸ್ ವಿಭಾಗದ ಅದರ್ಶ್ ಕುಮಾರ್ (₹4.5 ಲಕ್ಷ ವಾರ್ಷಿಕ) ಸೀನ್ಥೈಟ್ ಇಂಡಸ್ಟ್ರೀಸ್: ಕೆಮಿಕಲ್ ವಿಭಾಗದ ಪ್ರಚೇತ್ ಎನ್ ಜೆ ಮತ್ತು ಸಹನ ಎನ್ ಎಸ್ (₹4.0 ಲಕ್ಷ ವಾರ್ಷಿಕ) ಅಂಪ್ಕಸ್ ಸೈಬರ್, ಬೆಂಗಳೂರು: ಪಿ. ಪಾವನಿ ಮತ್ತು ಎಸ್ ಎಸ್ ಮನೋಹರಿ (₹4.5 ಲಕ್ಷ ವಾರ್ಷಿಕ) ಐವ್ಯಾಂಟ್ ಸಂಸ್ಥೆ: ಕಂಪ್ಯೂಟರ್ ಸೈನ್ಸ್: ಬಿ ಎಸ್ ಮೋನಿಕಾ, ಎಂ ಪಿ ತನುಶ್ರೀ; ಮಾಹಿತಿ ಮತ್ತು ತಂತ್ರಜ್ಞಾನ: ಕೆ. ಪವನ್ ರಾಜು (₹3.6–4.2 ಲಕ್ಷ ವಾರ್ಷಿಕ) ಕ್ಯಾಂಪಸ್ ಸಂದರ್ಶನದಲ್ಲಿ ಆಯ್ಕೆಯಾದ ವಿದ್ಯಾರ್ಥಿಗಳ ಪರಿಶ್ರಮ ಮತ್ತು ಸಾಧನೆಗಾಗಿ ಕಾಲೇಜಿನ ಪ್ರಾಂಶುಪಾಲರು ಡಾ. ಎಚ್ ಬಿ ಅರವಿಂದ್, ನಿರ್ದೇಶಕರು ಪ್ರೊ. ವೈ ವೃಷಭೇಂದ್ರಪ್ಪ ಹಾಗೂ ತರಬೇತಿ ಮತ್ತು ಉದ್ಯೋಗ ವಿಭಾಗದ ಮುಖ್ಯಸ್ಥೆ ಸಿ ಆರ್ ನಿರ್ಮಲ ಅವರು ಹಾರೈಸಿದ್ದಾರೆ.
