ಬೆಂಗಳೂರಿನ ಕೋಗಿಲು ಬಡಾವಣೆಯಲ್ಲಿ ಅನಧಿಕೃತ ಶೆಡ್ ತೆರವು. ವ್ಯಾಪಕ ಟೀಕಾಪ್ರಹಾರ.
ಬೆಂಗಳೂರಿನ ಯಲಹಂಕದಲ್ಲಿರುವ ಕೋಗಿಲು ಲೇಔಟ್ನಲ್ಲೆ ಕೇರಳ ನಿವಾಸಿಗರು ಅನಧಿಕೃತವಾಗಿ ನಿರ್ಮಿಸಿರುವ ಶೆಡ್ಗಳನ್ಮು ಜಿಬಿಎ ತೆರವುಗೊಳಿತ್ತು. ಇದು ರಾಜ್ಯ ಮಾತ್ರವಲ್ಲ ದೇಶವ್ಯಾಪಿಯಾಗಿ ಸುದ್ದಿ ಹರಡಿತ್ತು,
ಕೊಡಲೇ ಎಚ್ಚೆತ್ತ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆಸಿ ವೇಣುಗೋಪಾಲ್ ರಾಜ್ಯ ಸರ್ಕಾರಕ್ಕೆ ತೆರವುಗೊಳಿಸಿದ ಶೆಡ್ ನಿವಾಸಿಗಳಿಗೆ ಕೂಡಲೇ ಪುನರ್ವಸತಿ ಕಲ್ಪಿಸುವಂತೆ ಸೂಚಿದ್ದರು.
ಅಲ್ಲದೇ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ದ ಹರಿಹಾಯ್ದಿದ್ದರು.
ಇದರಿಂದ ಕೆಂಡಮಂಡಲವಾದ ಪ್ರತಿಪಕ್ಷ ಬಿಜೆಪಿ, ರಾಜ್ಯ ಕಾಂಗ್ರೆಸ್ ಆಡಳಿತ ಹೈಕಮಾಂಡ್ ಕೈಗೊಂಬೆಯಾಗಿದೆ ಎಂದು ಟೀಕಿಸಿತ್ತಲ್ಲದೇ ಇದರಿಂದ ರಾಜ್ಯದ ಘನತೆ ಮಣ್ಣು ಪಾಲಾಗಿದೆ ಎಂದು ಕಿಡಿಕಾರಿತ್ತು.
ಇತ್ತ ಡಿಸಿಎಮ್ ಡಿಕೆ ಶಿವಕುಮಾರ್ ವೇಣುಗೋಪಾಲ್ ಹೇಳಿಕೆಯನ್ನ ಸಮರ್ಥಿಸಿಕೊಂಡಿದ್ದಾರೆ. ಆದರೆ ಕೇರಳ ಸಿಎಮ್ ಹೇಳಿಕೆಗೆ ತಿರುಗೇಟು ನೀಡಿದ್ದು ಕಾಂಗ್ರೆಸ್ ಪಕ್ಷದಲ್ಲಿಯೇ ವ್ಯತಿರಿಕ್ತ ಹೇಳಿಕೆಗಳು ಬರುತ್ತಿರುವ ಹಿನ್ನಲೆಯಲ್ಲಿ ಕೋಗಿಲು ಶೆಡ್ ತೆರವಿನ ಬುಲ್ಡೋಜರ್ ಸದ್ದು ತಣ್ಣಗಾಗಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯರಿಗೆ ಅಗ್ನಿಪರೀಕ್ಷೆ ಎದುರಾಗಿದೆ.
ಇತರೆ ಸುದ್ದಿಗಳು