ಅಂಬಿಗರ ಚೌಡಯ್ಯ, ಕೂಲಿ-ತಳವಾರ ಸಮಾಜ ಅವಮಾನ: ಎಸ್ಟಿ ಹೋರಾಟ ಸಮಿತಿ ಆಕ್ರೋಶ
ಕಲಬುರ್ಗಿ: ಕರ್ನಾಟಕ ರಾಜ್ಯ ಎಸ್ಟಿ ಹೋರಾಟ ಸಮಿತಿಯ ರಾಜ್ಯಾಧ್ಯಕ್ಷ ಲಕ್ಕಪ್ಪ ಜಮಾದಾರ್ ಅವರು ಕಲಬುರ್ಗಿಯಲ್ಲಿ ಸುದ್ದಿಗೋಷ್ಠಿ ನಡೆಸಿ, ಯಾದಗಿರಿ ಜಿಲ್ಲೆಯಲ್ಲಿ ನಡೆದ ಪ್ರತಿಭಟನೆಯಲ್ಲಿ ನಾಯಕ ಸಮುದಾಯದ ಕೆಲವು ವ್ಯಕ್ತಿಗಳು ಅಂಬಿಗರ ಚೌಡಯ್ಯ ಹಾಗೂ ಕೂಲಿ-ತಳವಾರ ಸಮಾಜಗಳ ಬಗ್ಗೆ ಹಗುರವಾಗಿ ಮಾತನಾಡಿರುವುದನ್ನು ತೀವ್ರವಾಗಿ ಖಂಡಿಸಿದರು.
ಅವರು ಮಾತನಾಡುತ್ತಾ, “ಸಮಾಜದ ಮಹನೀಯರ ಬಗ್ಗೆ ಹಾಗೂ ಹಿಂದುಳಿದ ಸಮುದಾಯಗಳ ಬಗ್ಗೆ ಅವಮಾನಕಾರಿ ಹೇಳಿಕೆ ನೀಡುವುದು ಸಹಿಸಲಾಗದು. ಈ ರೀತಿಯ ಹಗುರ ಮಾತುಗಳಿಗೆ ನಾವು ಮೌನವಾಗಿರುವುದಿಲ್ಲ. ಶೀಘ್ರದಲ್ಲೇ ಖಂಡನಾ ಪ್ರತಿಭಟನೆ ನಡೆಸುತ್ತೇವೆ” ಎಂದು ಹೇಳಿದರು.
ಜಮಾದಾರ್ ಅವರು, ಸಮಾಜದ ಗೌರವ ಕಾಪಾಡಲು ಹೋರಾಟವೇ ನಮ್ಮ ಧ್ಯೇಯ ಎಂದು ಸ್ಪಷ್ಟಪಡಿಸಿದರು.
ಇತರೆ ಸುದ್ದಿಗಳು