ಬಾಂಗ್ಲಾದೇಶದಲ್ಲಿ ನಿಲ್ಲದ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದೌರ್ಜನ್ಯ
ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ದಾಳಿ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿವೆ. ಇಬ್ಬರು ಹಿಂದೂಗಳನ್ನು ಹತ್ಯೆ ಮಾಡಿ ಐದು ಕುಂಟುಬಗಳ ಮನೆಗೆ ಬೆಂಕಿ ಹಚ್ಚಲಾಗಿದೆ. ಇದರಿಂದ ಬಾಂಗ್ಲಾದೇಶದಲ್ಲಿರುವ ಅಲ್ಪಸಂಖ್ಯಾತ ಹಿಂದೂಗಳ ಮೇಲಿನ ದೌರ್ಜನ್ಯ ವಿಕೃತ ಸ್ವರೂಪ ತಾಳುತ್ತಿದೆ.
ಈ ಹಿಂದೆ ಮದ್ಯಪ್ರಾಚ್ಯ ರಾಷ್ಟ್ರಗಳ ಮೇಲೆ ದಾಳಿಗಳಾದಾಗ ಧ್ವನಿ ಎತ್ತಿದ ಮಾನವ ಹಕ್ಕುಗಳ ಹೋರಾಟಗಾರರು, ಬುದ್ಧಿಜೀವಿಗಳು ಈಗ ಮೌನ ತಾಳಿರುವುದು ಯಾಕೆ ಎಂದು ನಟಿ ರೂಪಾಲಿ ಗಾಂಗೊಲಿ ಪ್ರಶ್ನಿಸಿದ್ದಾರೆ. ಈ ದುರ್ಘಟನೆ ಕುರಿತು ಅನೇಕ ಬಾಲಿವುಡ್ ತಾರೆಗಳು ಆಕ್ರೋಷ ವ್ಯಕ್ತಪಡಿಸಿದ್ದಾರೆ.
ಡಿಸೆಂಬರ್ 18 ರಂದು ಬಾಂಗ್ಲಾದೇಶದ ವಿದ್ಯಾರ್ಥಿ ನಾಯಕ ಉಸ್ಮಾನ್ ಹದಿ ಹತ್ಯೆಯ ಬಳಿಕ ಹಿಂದುಗಳ ಮೇಲಿನ ದಾಳಿ ವಿಕೋಪಕ್ಕೆ ತಿರುಗಿವೆ.
ಇತರೆ ಸುದ್ದಿಗಳು