ವರದಿಗಾರರು :
ಬಸವರಾಜ ಪೂಜಾರಿ ||
ಸ್ಥಳ :
ಬೀದರ
ವರದಿ ದಿನಾಂಕ :
26-11-2025
ಬೀದರ: ರಸ್ತೆ ಬದಿ ಬೆಳೆದ ಮುಳ್ಳಿನ ಗಿಡಗಳಿಂದ ಸಂಚಾರಕ್ಕೆ ಅಪಾಯ
ಕಮಲನಗರ ತಾಲೂಕಿನ ತೋರಣ ಹಾಗೂ ಹೊಳೆ ಸಮುದ್ರ ಗ್ರಾಮದ ಮಧ್ಯದಲ್ಲಿ ಇರುವ ಮುಖ್ಯ ರಸ್ತೆಯ ಬದಿಯಲ್ಲಿ, ಅಧಿಕಾರಿಗಳ ನಿರ್ಲಕ್ಷ್ಯದ ಕಾರಣದಿಂದ ಬೆಳೆಯುತ್ತಿರುವ ಮುಳ್ಳಿನ ಗಿಡಗಂಟಿಗಳು, ವಾಹನ ಸಂಚಾರಕ್ಕೆ ಹಾನಿಕಾರಕ ಸ್ಥಿತಿ ಸೃಷ್ಟಿಸುತ್ತಿವೆ. ಸ್ಥಳೀಯರು ತಿಳಿಸಿದಂತೆ, ಈ ಗಿಡಗಂಟಿಗಳಿಂದ ಎದುರಿಗೆ ಬರುವ ವಾಹನಗಳು ಸ್ಪಷ್ಟವಾಗಿ ಕಾಣದೆ ಅಪಘಾತಗಳು ಸಂಭವಿಸಿರುವ ಘಟನೆಗಳು ದಾಖಲಾಗಿವೆ.
ಸ್ಥಳೀಯರು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿ, “ತೋರಣ ಗ್ರಾಮಕ್ಕೆ ಬರುವ ಈ ಮುಖ್ಯ ರಸ್ತೆಯಲ್ಲಿ ಮಹಿಳೆಯರು, ಮಕ್ಕಳು ದಿನನಿತ್ಯ ಸಂಚರಿಸುತ್ತಾರೆ. ಅಡ್ಡಿ ಬೆಳೆಯಿರುವ ಮುಳ್ಳಿನ ಗಿಡಗಳಿಂದ, ನಮ್ಮ ಯವಕ ಬೈಕ್ ನಲ್ಲಿ ಹೋಗುವಾಗ ಅಪಘಾತಕ್ಕೆ ಗುರಿಯಾಗಿದ್ದು, ಕಾಲು ಕಳೆದುಕೊಂಡಿದ್ದಾರೆ. ಇದರಿಂದಲೇ ಅಧಿಕಾರಿಗಳು ಶೀಘ್ರ ಕ್ರಮ ಕೈಗೊಂಡು, ರಸ್ತೆಯ ಅಕ್ಕಪಕ್ಕದಲ್ಲಿ ಬೆಳೆಯುತ್ತಿರುವ ಅನುಪಯುಕ್ತ ಮರಗಳನ್ನು ತೆರವುಗೊಳಿಸಿ, ಮುಂದಿನ ಅಪಘಾತಗಳನ್ನು ತಡೆಯುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡುತ್ತೇವೆ” ಎಂದು ತಿಳಿಸಿದ್ದಾರೆ. ಸ್ಥಳೀಯ ಬೈಟ್: “ಇತ್ತೀಚೆಗೆ ಅಧಿಕಾರಿಗಳು ಎಚ್ಚರಿಕೆ ವಹಿಸಿ, ಅನಾವಶ್ಯಕ ಮರಗಳನ್ನು ತೆರವುಗೊಳಿಸಬೇಕಾಗಿದೆ. ಇಲ್ಲದಿದ್ದರೆ ಅವರ ನಿರ್ಲಕ್ಷ್ಯದ ಪರಿಣಾಮವಾಗಿ ಮತ್ತಷ್ಟು ಬಲಿಯಾದವರು ಆಗಬಹುದು” ಎಂದು ಹೇಳಿದರು.
