ವರದಿಗಾರರು :
ಅಜಯ್ ಚೌಧರಿ ||
ಸ್ಥಳ :
ರಾಯಚೂರು
ವರದಿ ದಿನಾಂಕ :
19-11-2025
ರಾಯಚೂರಿನ ಶರಬಣ್ಣ ಪಾಟೀಲ್, ಸೈಯದ್ ಸಾಬ್‌ಗೆ ‘ಸಹಕಾರ ರತ್ನ’ ಪ್ರಶಸ್ತಿ
ರಾಯಚೂರು, ನವೆಂಬರ್ 18 (ಕ.ವಾ.): ರಾಯಚೂರು ಒಕ್ಕಲುತನ ಹುಟ್ಟುವಳಿ ಮಾರಾಟ ಹಾಗೂ ಸಂಸ್ಕರಣ ಸಹಕಾರ ಸಂಘದ ನಿರ್ದೇಶಕರಾದ ಶರಬಣ್ಣ ಪಾಟೀಲ್ ಮತ್ತು ಮೈಸೂರಿನ ಕರ್ನಾಟಕ ರಾಜ್ಯ ಮೀನುಗಾರರ ಸಹಕಾರ ಮಹಾಮಂಡಲದ ಸೈಯದ್ ಸಾಬ್ ಮನ್ಸಲಾಪೂರು ಅವರಿಗೆ ಪ್ರತಿಷ್ಠಿತ ‘ಸಹಕಾರ ರತ್ನ’ ಪ್ರಶಸ್ತಿ ಲಭಿಸಿದೆ.
ಕರ್ನಾಟಕ ರಾಜ್ಯ ಸಹಕಾರ ಚಳುವಳಿಯ ಅಭಿವೃದ್ಧಿ, ವಿಸ್ತರಣೆ ಹಾಗೂ ರೈತ–ಮೀನುಗಾರರ ಹಿತಾಸಕ್ತಿಗಾಗಿ ಇವರು ಸಲ್ಲಿಸಿರುವ ಅವಿರತ ಸೇವೆಯನ್ನು ಗುರುತಿಸಿ ಈ ಪುರಸ್ಕಾರ ನೀಡಲಾಗಿದೆ.
ಇತ್ತೀಚೆಗೆ ಬೆಂಗಳೂರಿನ ಗಾಯತ್ರಿ ವಿಹಾರ್‌ನಲ್ಲಿ ನಡೆದ ಸಮಾರಂಭದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಶಸ್ತಿ ಪ್ರದಾನ ಮಾಡಿ ಗೌರವಿಸಿದರು. ಇದೇ ಸಂದರ್ಭದಲ್ಲಿ ಶರಬಣ್ಣ ಪಾಟೀಲ್ ಹಾಗೂ ಸೈಯದ್ ಸಾಬ್ ಅವರ ಸೇವೆಯನ್ನು ಸರ್ಕಾರ ಮಟ್ಟದಲ್ಲಿ ಮೆಚ್ಚುಗೆ ವ್ಯಕ್ತವಾಯಿತು.
ಅಲ್ಲದೇ, ರಾಯಚೂರು ಕೃಷಿ ವಿಶ್ವವಿದ್ಯಾಲಯದ 72ನೇ ಆಖಿಲ ಭಾರತ ಸಹಕಾರ ಸಪ್ತಾಹ ಕಾರ್ಯಕ್ರಮದಲ್ಲಿಯೂ ಸಚಿವರು ಎನ್.ಎಸ್. ಭೋಸರಾಜು, ಶಾಸಕರು ಶಿವರಾಜ್ ಪಾಟೀಲ್, ಬಸನಗೌಡ ದದ್ದಲ್, ಎ. ವಸಂತಕುಮಾರ್ ಸೇರಿದಂತೆ ಹಲವು ಗಣ್ಯರು ಇಬ್ಬರಿಗೂ ವಿಶೇಷ ಸನ್ಮಾನ ನೆರವೇರಿಸಿದರು.
ನವೆಂಬರ್ 18ರಂದು ರಾಯಚೂರು ಒಕ್ಕಲುತನ ಹುಟ್ಟುವಳಿ ಸಹಕಾರ ಸಂಘದ ಮುಖ್ಯ ಕಚೇರಿಯಲ್ಲಿ ನಡೆದ ಮತ್ತೊಂದು ಕಾರ್ಯಕ್ರಮದಲ್ಲಿ ಸಂಘದ ಅಧ್ಯಕ್ಷ ಪತಂಗೆ ಜಯವಂತರಾವ್, ಉಪಾಧ್ಯಕ್ಷ ಶಶಿಧರ ಪಾಟೀಲ್, ಮಲ್ಲನಗೌಡ ಪಾಟೀಲ್ ಹಾಗೂ ಇನ್ನಿತರ ಕಾರ್ಯಕರ್ತರು ಶರಬಣ್ಣ ಪಾಟೀಲ್ ಮತ್ತು ಸೈಯದ್ ಸಾಬ್ ಅವರಿಗೆ ಗೌರವ ಸಲ್ಲಿಸಿದರು.
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
