ವರದಿಗಾರರು :
ಬಣಕಾರ ಮೂಗಪ್ಪ ||
ಸ್ಥಳ :
ಕೂಡ್ಲಿಗಿ
ವರದಿ ದಿನಾಂಕ :
18-11-2025
ಜಿಲ್ಲಾ ಮಟ್ಟದ ಕ್ರಿಕೆಟ್ ಟೂರ್ನಿಯಲ್ಲಿ ಬ್ಯಾಟ್ ಬೀಸಿ ಕ್ರೀಡಾಪಟುಗಳಿಗೆ ಉತ್ಸಾಹ ತುಂಬಿದ MLA ಶ್ರೀನಿವಾಸ್ ಎನ್.ಟ
ಕೂಡ್ಲಿಗಿ: ಕೂಡ್ಲಿಗಿ ಪಟ್ಟಣದ ಶ್ರೀ ಮೈಲಾರ ಮಹಾದೇವ ಕ್ರೀಡಾಂಗಣದಲ್ಲಿ ಜಿಲ್ಲಾ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಿ ಆಯೋಜಿಸಲಾಗಿದ್ದು, ಮಾನ್ಯ ಶಾಸಕರಾದ ಡಾ. ಶ್ರೀನಿವಾಸ್ ಎನ್.ಟಿ. ಅವರು ನವೆಂಬರ್ 17ರಂದು ಸಂಜೆ ಕ್ರೀಡಾಂಗಣಕ್ಕೆ ಭೇಟಿ ನೀಡಿ ಕ್ರೀಡಾಪಟುಗಳನ್ನು ಪ್ರೋತ್ಸಾಹಿಸಿದರು.
ಶಾಸಕರು ಮೈದಾನಕ್ಕಿಳಿದು ನಾನಾ ಶೈಲಿಯಲ್ಲಿ ಬ್ಯಾಟ್ ಬೀಸಿ ತಮ್ಮ ಕ್ರೀಡಾ ನೈಪುಣ್ಯ ಪ್ರದರ್ಶಿಸಿ ಕ್ರೀಡಾಪಟುಗಳಲ್ಲಿ ಹೊಸ ಚೈತನ್ಯವನ್ನು ತುಂಬಿದರು. ನಂತರ ಮಾತನಾಡಿದ ಅವರು, “ನಾನು ಮೂಲತಃ ಕ್ರೀಡಾಪಟು. ಕ್ರೀಡೆ, ಸಿನಿಮಾ, ಈಜು — ಇವುಗಳೆಲ್ಲ ನನಗೆ ಆಸಕ್ತಿಯ ವಿಷಯಗಳು. ಕ್ರೀಡೆಯಲ್ಲಿ ಸೋಲಿಗೆ ಅರ್ಥವಿಲ್ಲ, ಪ್ರತಿಯೊಬ್ಬರೂ ತಮ್ಮ ಪ್ರತಿಭೆಯಿಂದ ನಮ್ಮೂರಿಗೆ ಮತ್ತು ಜಿಲ್ಲೆಗೆ ಕೀರ್ತಿ ತರುವಂತೆ ಬೆಳೆಯಬೇಕು,” ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ಸ್ಥಳೀಯ ಮುಖಂಡರು, ಕ್ರೀಡಾ ಸಂಘದ ಪ್ರತಿನಿಧಿಗಳು ಹಾಗೂ ಕ್ರೀಡಾಪಟುಗಳು ಭಾಗವಹಿಸಿದ್ದರು.
ನಮ್ಮ ವಿವನ್ಯೂಸ್ ಕನ್ನಡ ಕ್ಷಣ ಕ್ಷಣದ ಸುದ್ದಿಗಳನ್ನು ನಿರಂತರವಾಗಿ ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗೆ 7892441717 ಸಂಖ್ಯೆಯನ್ನು ಸೇರಿಸಿ.
